ಮನೆ ಶಿವಮೊಗ್ಗ ಆನಂದಪುರ ಜಾಮೀಯ ಮಸೀದಿ ಅಧ್ಯಕ್ಷರಾಗಿ ಶೇಕ್ ಫಾರೂಕ್ ಅವಿರೋಧ ಆಯ್ಕೆ..!!

ಆನಂದಪುರ ಜಾಮೀಯ ಮಸೀದಿ ಅಧ್ಯಕ್ಷರಾಗಿ ಶೇಕ್ ಫಾರೂಕ್ ಅವಿರೋಧ ಆಯ್ಕೆ..!!

3
0

✒️ಅಮಿತ್ ಆರ್ ಆನಂದಪುರ

ಆನಂದಪುರ ಸಮೀಪದ ಎಡೇಹಳ್ಳಿ ಹಾಗೂ ಆನಂದಪುರ ಜಾಮೀಯ ಮಸೀದಿಯ ಆಡಳಿತ ಮಂಡಳಿಗೆ ಸತತ ಎರಡನೇ ಅವಧಿಗೆ ದಕ್ಷ ನಾಯಕತ್ವ ಲಭಿಸಿದೆ.

ಸಮಾಜಮುಖಿ ಚಿಂತಕ ಹಾಗೂ ಜನಾನುರಾಗಿ ವ್ಯಕ್ತಿತ್ವದ ಶೇಕ್ ಫಾರೂಕ್ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮೂರು ವರ್ಷಕ್ಕೊಮ್ಮೆ ನಡೆಯುವ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆಯಲ್ಲಿ ಫಾರೂಕ್ ಅವರ ಸಮಾಜಸೇವೆ ಮತ್ತು ದಾನತ್ವವನ್ನು ಪರಿಗಣಿಸಿ, ಸರ್ವಸದಸ್ಯರು ಒಮ್ಮತದಿಂದ ಈ ತೀರ್ಮಾನ ಕೈಗೊಂಡಿದ್ದಾರೆ.

ಸ್ನೇಹಜೀವಿ ಶೇಕ್ ಫಾರೂಕ್ ಅವರು ಆನಂದಪುರ ಭಾಗದ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿರುವವರು. ಎಲ್ಲಾ ವರ್ಗದ ಜನರ ಪ್ರೀತಿಗೆ ಪಾತ್ರರಾಗಿ ಈ ಬಾರಿಯೂ ಅವರಿಗೆ ನಾಯಕತ್ವದ ಹೊಣೆಗಾರಿಕೆಯನ್ನು ನೀಡಲಾಗಿದೆ.

ಉಪಾಧ್ಯಕ್ಷರಾಗಿ ನಝರುಲ್ಲಾ ಖಾನ್:

ಮಂಡಳಿಯ ಉಪಾಧ್ಯಕ್ಷರಾಗಿ ಹಿರಿಯ ಮುಖಂಡ ನಝರುಲ್ಲಾ ಖಾನ್ ಅವರು ಆಯ್ಕೆಯಾಗಿದ್ದಾರೆ. ಸಮಾಜದ ಹಿತಚಿಂತಕರಾಗಿ, ಹಿರಿಯ ಮಾರ್ಗದರ್ಶಕರಾಗಿ ಗುರುತಿಸಿಕೊಂಡಿರುವ ಇವರನ್ನು ಆಯ್ಕೆ ಮಾಡಿದ್ದಾರೆ.

ಈ ಅವಿರೋಧ ಆಯ್ಕೆಯು ಸಮಾಜದ ಒಗ್ಗಟ್ಟು ಮತ್ತು ಪರಸ್ಪರ ವಿಶ್ವಾಸಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಸ್ಥಳೀಯ ಪ್ರಮುಖರು ಹರ್ಷ ವ್ಯಕ್ತಪಡಿಸಿದ್ದಾರೆ.