Home Shivamogga ಪೋಲಿಸರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು: ವರಿಷ್ಟಾಧಿಕಾರಿ ನಿಖಿಲ್..!!

ಪೋಲಿಸರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು: ವರಿಷ್ಟಾಧಿಕಾರಿ ನಿಖಿಲ್..!!

33
0

ಶಿವಮೊಗ್ಗ : ಸದಾ ಕಾಲ ಒತ್ತಡದ ನಡುವೆ ಕೆಲಸ ನಿರ್ವಹಿಸುವ ಪೊಲೀಸರು, ತಮ್ಮ ಆರೋಗ್ಯ ಜೋಪಾನ ಮಾಡಿಕೊಳ್ಳಬೇಕು. 53ರ ವಯಸ್ಸಿನ ನಂತರ ಪೊಲೀಸರಿಗೆ ನಿರಂತರ ಆರೋಗ್ಯ ತಪಾಸಣೆ ಅಗತ್ಯವಾಗಿದ್ದು, ಕಿಡ್ನಿ ಎಂಬುದು ನಮ್ಮ ದೇಹ ಎಂಬ ಕಾರ್ಖಾನೆಯಲ್ಲಿ ಪ್ರಮುಖ ಅಂಗವಾಗಿದ್ದು, ನ ನಮ್ಮ ದೇಹದಲ್ಲಿ ಕಿಡ್ನಿಗೆ ಹೆಚ್ಚು ಕೆಲಸವಿರುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಹೇಳಿದರು.

ಅವರು “ತೃಪ್ತಿ ಹೆಲ್ತ್ ಕೇರ್ ಆಸ್ಪತ್ರೆ” ಮತ್ತು ಶಿವಮೊಗ್ಗ ಜಿಲ್ಲಾ ಪೊಲೀಸ್ ಸಹಯೋಗದಿಂದ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 53 ವಯಸ್ಸಿನಿಂದ ಮೇಲ್ಪಟ್ಟ ಎಎಸ್‌ಐ-ಎಆರ್‌ಎಸ್‌ಐ ರವರುಗಳಿಗೆ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಕಾರ್ಯಾಗಾರದಲ್ಲಿ ಉಚಿತ ಆರೋಗ್ಯ ತಪಾಸಣೆ, ನಿವೃತ್ತಿ ನಂತರ ಜೀವನ ಶೈಲಿ, ಯೋಗ, ಆರೋಗ್ಯಕರ ಆಹಾರ ಪದ್ದತಿ,ಪಿಂಚಣಿ ಮೊತ್ತ ಸದುಪಯೋಗ, ಮುಂತಾದ ವಿಷಯಗಳ ಬಗ್ಗೆ ಉಪನ್ಯಾಸ ಮತ್ತು ಚರ್ಚಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಕಾರ್ಯಕ್ರಮದಲ್ಲಿ ಮೂತ್ರಕೋಶ ತಜ್ಞರಾದ ಡಾ. ಚಂದ್ರಶೇಖರ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಎ.ಜಿ. ಕಾರಿಯಪ್ಪ, ಡಿ.ವೈ.ಎಸ್.ಪಿ. ಬಾಬು ಅಂಜನಪ್ಪ, ಜಿಲ್ಲಾ ಪೊಲೀಸ್ ಇಲಾಖೆಯ ಆಪ್ತ ಸಮಾಲೋಚಕರಾದ ವಿ.ಪಿ. ಮಲ್ಲಪ್ಪ, ಬಿ.ಎಸ್.ಎನ್.ಎಲ್. ನಿವೃತ್ತ ಅಧಿಕಾರಿ ಹೆಚ್.ಸಿ. ಕೃಷ್ಣಮೂರ್ತಿ, ಸರ್ಜಿ ಆಸ್ಪತ್ರೆಯ ಡಯಟಿಷಿಯನ್ ಶ್ರೇಯಸ್, ರಾಘವೇಂದ್ರ ಯೋಗ ಕೇಂದ್ರದ ಸಂಸ್ಥಾಪಕರು, ಯೋಗ ತಜ್ಞರು ಯೋಗ ಸಾಮ್ರಾಟ್ ಎಸ್.ಗೋಪಾಲಕೃಷ್ಣ, ಹೆಚ್ಚುವರಿ ಎಸ್.ಪಿ. ಆಪ್ತಸಹಾಯಕರು ಹಾಗೂ ಕಾರ್ಯಕ್ರಮದ ನಿರೂಪಕಿಯಾದ ಅನಿತಾ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.