Home Blog ಅಸ್ಪೃಶ್ಯತೆ ವಿರುದ್ಧ ಚೌಡರ್, ಬ್ರಿಟಿಷರ ವಿರುದ್ಧ ದಂಡಿ, ಭೂಹಕ್ಕಿಗಾಗಿ ಕಾಗೋಡು ಸತ್ಯಾಗ್ರಹ..!!

ಅಸ್ಪೃಶ್ಯತೆ ವಿರುದ್ಧ ಚೌಡರ್, ಬ್ರಿಟಿಷರ ವಿರುದ್ಧ ದಂಡಿ, ಭೂಹಕ್ಕಿಗಾಗಿ ಕಾಗೋಡು ಸತ್ಯಾಗ್ರಹ..!!

47
0

✒️..ಅಮಿತ್ ಆರ್ ಆನಂದಪುರ

ಸಾಗರ/ಅಸ್ಪೃಶ್ಯತೆ ಖಂಡಿಸಿ ಅಂಬೇಡ್ಕರ್ ಚೌಡರ್ ಕೆರೆ ನೀರು ಕುಡಿದು ಪ್ರತಿಭಟಿಸಿದ ಚಳವಳಿ, ಬ್ರಿಟಿಷರ ವಿರುದ್ಧ ಗಾಂಧೀಜಿ ನಡೆಸಿದ ದಂಡಿ ಸತ್ಯಾಗ್ರಹದಷ್ಟೇ ಮಹತ್ವ ಕಾಗೋಡು ಸತ್ಯಾಗ್ರಹಕ್ಕೆ ಇದೆ ಎಂದು ಅಭಿಪ್ರಾಯಪಟ್ಟರು ಎಂದು ಭಾಷಾ ಶಾಸ್ತ್ರಜ್ಞ, ಲೇಖಕ ಮೇಟಿ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.

ಸಮೀಪದ ವಡ್ನಾಲ ಗ್ರಾಮದ ಎಚ್‌.ಗಣಪತಿಯಪ್ಪ ಸ್ಮಾರಕದಲ್ಲಿ ರೈತ-ದಲಿತ ಜನರ ಸಂಘಟನೆಗಳ ಒಕ್ಕೂಟ ಗುರುವಾರ ಏರ್ಪಡಿಸಿದ್ದ ಕಾಗೋಡು ಚಳವಳಿ-75 ಭೂಮಿ ಹೋರಾಟದ ನೆನಪಿನ ಕಾರ್ಯಕ್ರಮ-ದಲ್ಲಿ ‘ಭೂಮಿ ಪ್ರಶ್ನೆ ಅಂದು-ಇಂದು’ ಕುರಿತು ಅವರು ಮಾತನಾಡಿದರು.

ಭೂ ಮಾಲಿಕರು, ಗೇಣಿದಾರರ ನಡುವಿನ ಸಂಬಂಧದಲ್ಲಿನ ಜೀವ ವಿರೋಧಿ ಅಸಮಾನತೆ ನಿಲುವಿನ ವಿರುದ್ಧ ಕಾಗೋಡು ಸತ್ಯಾಗ್ರಹ ಕ್ರಾಂತಿಯ ಕಿಡಿ ಹಚ್ಚಿದ ಚರಿತ್ರೆಯಲ್ಲಿನ ನಮ್ಮ ಕಣ್ಣ ಮುಂದಿನ ಕಂದೀಲು ಆಗಿದೆ ಎಂದರು.

ಭೂಮಿಯ ಪ್ರಶ್ನೆ ಕೇವಲ ಮಣ್ಣಿನ ಹಕ್ಕಿನ ಪ್ರಶ್ನೆಯಾಗಿರದೇ ಅದೊಂದು ಬದುಕಿನ ಅಸ್ತಿತ್ವದ ಪ್ರಶ್ನೆಯೂ ಆಗಿದೆ ಎಂಬ ಚಿಂತನೆ ಕಾಗೋಡು ಚಳವಳಿಗೆ ಇಂಬು ಕೊಟ್ಟ ಸಂಗತಿಯಾಗಿದೆ. ಆದರೆ ಪ್ರಸ್ತುತ ಬಂಡವಾಳಶಾಹಿ ಮತ್ತು ರಾಜಕೀಯ ನೀತಿ, ನಿರೂಪಣೆಗಳ ಕಾರಣಕ್ಕೆ ಶ್ರಮದ ಭಾಗವಾಗಿದ್ದ ಭೂಮಿ ಉದ್ದಿಮೆಯ ಹಿಡಿತಕ್ಕೆ ಸಿಲುಕಿ ನರಳುತ್ತಿದೆ ಎಂದು ಅವರು ಈ ಹಿಂದೆ ಭೂ ಮಾಲೀಕರ ಕೆಳಗೆ ಗೇಣಿದಾರರಾಗಿದ್ದವರು ಹಕ್ಕು ಪಡೆದರೂ ರಿಯಲ್ ಎಸ್ಟೇಟ್ ಪ್ರವೇಶದಿಂದ ಈಗ ಕಂಪೆನಿ, ಕಾರ್ಖಾನೆಗಳಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಲು ಅವಕಾಶವಿ ಲ್ಲದ ಹುದ್ದೆಯಲ್ಲಿ ನೌಕರರಾಗಿದ್ದಾರೆ. ಅಸಮಾನತೆ, ಶೋಷಣೆಯ ನೆಲೆ ಈ ಸ್ವರೂಪ ಪಡೆದುಕೊಂಡಿದೆ ಎಂದು ವಿವರಿಸಿದರು.

ಅಧಿಕಾರ, ಅವಕಾಶ, ರಾಜಕಾರಣ, ಬಂಡವಾಳ, ಭೂಮಿಯ ಪ್ರಶ್ನೆಗಳನ್ನು ಇತ್ಯರ್ಥ ಪಡಿಸಿಕೊಳ್ಳು-ವಲ್ಲಿ ಸೋತಿರುವುದೇ ಚಳವಳಿಗಳ ಇಬ್ಬಾಗಕ್ಕೆ ಕಾರಣವಾಗಿದೆ. ತಮ್ಮ ಅಹಂ ಅನ್ನು ನಿರಸನಗೊಳಿಸಿಕೊಳ್ಳಲಾ-ಗದ ಚಳವಳಿಕಾರರ ದೌರ್ಬಲ್ಯ, ನೈತಿಕ ಬದ್ಧತೆಯ ಕೊರತೆಯೂ ಭೂಮಿಯ ಪ್ರಶ್ನೆಯನ್ನು ಜಟಿಲಗೊಳಿಸಿದೆ ಎಂದು ಅವರು ತಿಳಿಸಿದರು.

ಶಿಕ್ಷಣ ಬಿಡುಗಡೆಯ, ಏಳೆಯ ಸಂಕೇತ ಎನ್ನುವುದೇನೋ ಸರಿ. ಆದರೆ ಪ್ರಸ್ತುತ ಸಾಮಾಜಿಕ ಅವಘಡಸಾಂಸ್ಕೃತಿಕ ಮೋಸಗಳು ಸುಶಿಕ್ಷಿ-ತರಿಂದಲೆ ನಡೆಯುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ನೈತಿಕ ಧೈರ್ಯ ಮತ್ತು ಸಾಮಾಜಿಕ ಬದ್ದತೆಯ ಮೂಲಕವೇ ಭೂಮಿಯ ಪ್ರಶ್ನೆಗಳಿಗೆ ಮುಖಾಮುಖಿಯಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಭೂ ಮಾಲಿಕರ ದೌರ್ಜನ್ಮದ ವಿರುದ್ಧ ಮಾತನಾಡಲಾಗದ ಸ್ಥಿತಿ ಇದ್ದಾಗ ಅದರ ವಿರುದ್ಧ ರೈತರನ್ನು ಸಂಘಟಿಸಿ ಕಾಗೋಡು ಸತ್ಯಾಗ್ರಹ ಕಟ್ಟಿದ ಎಚ್.ಗಣಪತಿಯಪ್ಪ ಅವರ ಸಂಘಟನಾ ಸಾಮರ್ಥ್ಯ ಅನನ್ಯವಾದದ್ದು ಎಂದು ರೈತ ಸಂಘದ ಉಪಾಧ್ಯಕ್ಷ ಶಿವಾನಂದ ಕುಗ್ಡೆ ಹೇಳಿದರು.

ಗ್ರಾಮ ಸುಧಾರಣಾ ಸಮಿತಿ ಅಧ್ಯಕ್ಷ ಈಶ್ವರ, ಶಿವಮೊಗ್ಗ ರಂಗಾಯಣದ ನಿರ್ದೇಶಕ ಪ್ರಸನ್ನ ಡಿ. ಸಾಗರ್, ಪ್ರಮುಖರಾದ ಎನ್. ಲಲಿತಮ್ಮ, ಸುಂದ‌ರ್ ಸಿಂಗ್, ಮಂಜಪ್ಪ ಹಿರೇನೆಲ್ಲೂರು, ರಾಮಣ್ಣ ಹಸಲರು, ಲಕ್ಷ್ಮಣ್ ಸಾಗರ್, ನಾರಾಯಣ ಗೋಳಗೋಡು, ಎಚ್. ಬಿ.ರಾಘವೇಂದ್ರ ಇದ್ದರು. ವಸಂತ ಕುಪ್ಪೆ ಮತ್ತು ಸಂಗಡಿಗರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.