Home Shivamogga ಶಿವಮೊಗ್ಗ ಸಾರ್ವಜನಿಕ ಸ್ಥಳದಲ್ಲಿ ಮಧ್ಯ ಸೇವನೆ ಡ್ರೋನ್ ಅಲ್ಲಿ ಸೆರೆ ಆಮೇಲೆ ಎನ್ ಆಯ್ತು..!!

ಶಿವಮೊಗ್ಗ ಸಾರ್ವಜನಿಕ ಸ್ಥಳದಲ್ಲಿ ಮಧ್ಯ ಸೇವನೆ ಡ್ರೋನ್ ಅಲ್ಲಿ ಸೆರೆ ಆಮೇಲೆ ಎನ್ ಆಯ್ತು..!!

46
0

✒️..ಅಮಿತ್ ಆರ್ ಆನಂದಪುರ

ಡ್ರೋಣ್ ಕಣ್ಗಾವಲು ಮೂಲಕ ಶಿವಮೊಗ್ಗ ನಗರದ ಹೊರವಲಯದ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವಿಸುತ್ತಿದ್ದವರನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಂಡ ಘಟನೆ ನಡೆದಿದೆ.

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆ ಗಂಗೂರು ಗ್ರಾಮದ ಹೊರವಲಯದಲ್ಲಿ ಡ್ರೋಣ್ ಹಾರಿಸಿದಾಗ, ಸಾರ್ವಜನಿಕ ಸ್ಥಳದಲ್ಲಿ ಕೆಲವರು ಮದ್ಯಪಾನ ಮಾಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.

ಅಷ್ಟೇ ಅಲ್ಲದೆ ಈ ವೇಳೆ ಕಿಡಿಗೇಡಿಗಳು ಕ್ಯಾಮರವನ್ನು ಕಂಡೊಡನೆ ಹೆದರದೆ ಅದರ ಮೇಲೆ ಕಲ್ಲೆಸೆಯುವ ಸಾಹಸವನ್ನು ಸಹ ಮಾಡಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ಹಿನ್ನೆಲೆ ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು, ಮದ್ಯಪಾನ ಮಾಡುತ್ತಿದ್ದ ಸಂದೀಪ್, ಶಿವನೇಶ ಕುಮಾರ ಮತ್ತು ಮೇಘರಾಜ್ ಎಂಬುವವರನ್ನು ಗುರುತಿಸಿದ್ದಾರೆ. ಆರೋಪಿಗಳ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆಯಡಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.