Home Shivamogga ತೀರ್ಥಹಳ್ಳಿ ಬಳಿ ಚಿರತೆ ಮರಿಗಳ ಪ್ರತ್ಯಕ್ಷ: ಸಾರ್ವಜನಿಕರಲ್ಲಿ ಆತಂಕ..!!

ತೀರ್ಥಹಳ್ಳಿ ಬಳಿ ಚಿರತೆ ಮರಿಗಳ ಪ್ರತ್ಯಕ್ಷ: ಸಾರ್ವಜನಿಕರಲ್ಲಿ ಆತಂಕ..!!

35
0

ತೀರ್ಥಹಳ್ಳಿ, ಮೇ 1:
ತಾಲೂಕಿನ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ಚಿರತೆ ಮರಿಗಳು ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿಯ ವಿಠಲನಗರದ ಹೆಗ್ಗೆಬೈಲು ಸಮೀಪ ಇಂದು ಬೆಳಗ್ಗೆ ಚಿರತೆ ಮರಿಗಳು ಕಂಡುಬಂದಿವೆ. ಕುರುವಳ್ಳಿಯಿಂದ ಹರಳಿಮಠಕ್ಕೆ ಹೋಗುವ ರಸ್ತೆಯಲ್ಲೇ ಈ ಮರಿಗಳು ಕಾಣಿಸಿಕೊಂಡ ಕಾರಣ, ಗ್ರಾಮಸ್ಥರು ಹಾಗೂ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.

ಬೆಳಿಗ್ಗೆಯೇ ಮರಿಗಳು ಪ್ರತ್ಯಕ್ಷವಾದ ಹಿನ್ನೆಲೆ, ಅವುಗಳ ಜೊತೆ ಚಿರತೆ ಕೂಡ ಸುತ್ತಮುತ್ತ ಇರಬಹುದೆಂಬ ಭಯ ಜನರಲ್ಲಿ ಹೆಚ್ಚಾಗಿದೆ. ಇದರಿಂದಾಗಿ ಸ್ಥಳೀಯರು ಎಚ್ಚರಿಕೆಯಿಂದ ಸಂಚರಿಸುತ್ತಿದ್ದಾರೆ.

ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಲಾಗಿದ್ದು ಚಿರತೆ ಮರಿಗಳಿಗೆ ಯಾರೂ ತೊಂದರೆ ನೀಡಬಾರದು, ಅವುಗಳನ್ನು ಭಯಪಡಿಸುವಂತಹ ಯಾವುದೇ ಕ್ರಮ ಕೈಗೊಳ್ಳಬಾರದು, ಸಾರ್ವಜನಿಕರು ಬಹಳ ಎಚ್ಚರಿಕೆ ಇಂದ ಇರಬೇಕು ಎಂದು ತಿಳಿಸಿದ್ದಾರೆ.