Home Blog ಕುವೆಂಪು ವಿಶ್ವಮಾನವ ಸಂದೇಶ ಮತ್ತು ಆದರ್ಶಗಳಿಂದ ವಿವಿ ಪ್ರೇರಿಪಿತವಾಗಿದೆ :ಥಾವರ್‌ಚಂದ್ ಗೆಹ್ಲೋಟ್

ಕುವೆಂಪು ವಿಶ್ವಮಾನವ ಸಂದೇಶ ಮತ್ತು ಆದರ್ಶಗಳಿಂದ ವಿವಿ ಪ್ರೇರಿಪಿತವಾಗಿದೆ :ಥಾವರ್‌ಚಂದ್ ಗೆಹ್ಲೋಟ್

28
0

ಶಿವಮೊಗ್ಗ;ಮಹಾನ್ ಸಾಹಿತಿ ಮತ್ತು ಚಿಂತಕ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಕುವೆಂಪು)ಅವರ ಹೆಸರಿನಲ್ಲಿ ಸ್ಥಾಪಿತವಾದ ಈ ವಿಶ್ವವಿದ್ಯಾಲಯವು, ಅವರು ನೀಡಿದ ‘ವಿಶ್ವಮಾನವ’ ಸಂದೇಶ ಮತ್ತು ಆದರ್ಶಗಳಿಂದ ಪ್ರೇರಿತವಾಗಿದೆ ಎಂದು ರಾಜ್ಯಪಾಲ ಹಾಗೂ ವಿ.ವಿ.ಕುಲಾಧಿಪತಿಗಳಾದ ಥಾವರ್‌ಚಂದ್ ಗೆಹ್ಲೋಟ್ ಹೇಳಿದರು.

ಅವರು ಬುಧವಾರ ಕುವೆಂಪು ವಿಶ್ವದ್ಯಾಲಯದ 35ನೇ ವಾರ್ಷಿಕ ಘಟಿಕೋತ್ಸ ವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕುವೆಂಪು ವಿವಿಯು ಮಹಾನ್ ಸಾಹಿತಿ, ಚಿಂತಕ ಕುವೆಂಪುರವರ ಆದರ್ಶಗಳಿಂದ ಪ್ರೇರಣೆ ಪಡೆದಿದ್ದು, ವಿವಿ ಶಿಕ್ಷಣ ಕೇಂದ್ರ ಉತ್ತಮ ಕೊಡುಗೆ ನೀಡುತ್ತಿದೆ. ಘಟಿಕೋತ್ಸವದ ಮೂಲಕ ಕುವೆಂಪು ಅವರ ವಿಶ್ವಮಾನವ ಆದರ್ಶ ಎಲ್ಲೆಡೆ ಪ್ರಸಾರವಾಗುತ್ತದೆ. ವಿದ್ಯಾರ್ಥಿಗಳಿಗೆ ಪರಿಶ್ರಮ ಬಹಳ ಮುಖ್ಯ. ನೀವು ಪಡೆದಿರುವ ಪದವಿ ಕೂಡ ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲವಾಗಿದೆ ಎಂದರು.

ನಾವು ಇಂದು ಕೌಶಲ್ಯಾಭಿವೃದ್ಧಿಗೆ ಒತ್ತುಕೊಡಬೇಕಾಗಿದೆ. ಭಾರತ ಆರ್ಥಿಕವಾಗಿ ಮುಂದುವರಿಯುತ್ತಿದ್ದು, ಮೇಕ್ ಇನ್ ಇಂಡಿಯಾದಿಂದ ವಿಕಸಿತ ಭಾರತವಾಗಲು ಸಾಧ್ಯವಾಗಿದೆ. ಹಾಗಾಗಿ ನಾವು ಎಐ ಮತ್ತು ಡಿಜಿಟಲ್ ಕ್ರಾಂತಿಯತ್ತ ಹೊರಳಬೇಕಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಷ್ಟ್ರೀಯ ಮಾನ್ಯತಾ ಮಂಡಳಿಯ ಅಧ್ಯಕ್ಷ ಪ್ರೊ. ಅನಿಲ್ ಡಿ. ಸಹಸ್ರಬುದ್ದೆ ಮಾತನಾಡಿ, ಇಂದಿನ ಜಗತ್ತು ಅತ್ಯಂತ ಸಂಕೀರ್ಣವಾಗಿದ್ದು, ವಿದ್ಯಾರ್ಥಿ ಗಳು ಕೃತಕ ಬುದ್ಧಿಮತ್ತೆ ಮತ್ತು ಆಧುನಿಕ ತಂತ್ರಜ್ಞಾನಕ್ಕೆ ಪೂರಕ ವಾಗಿ ನಿರಂತರ ಕಲಿಕೆಯಲ್ಲಿ ತೊಡಗಿರಬೇಕು ಎಂದರು.

ಉನ್ನತ ಶಿಕ್ಷಣ ಸಚಿವ ಹಾಗೂ ಸಹ ಕುಲಾಧಿಪತಿಗಳಾದ ಡಾ.ಎಂ.ಸಿ.ಸುಧಾಕರ್ ಮಾತನಾಡಿ, 1986 ರಲ್ಲಿ ಮೈಸೂರು ವಿ.ವಿ.ಯಿಂದ ಬೇರ್ಪಟ್ಟ ಕುವೆಂಪು ವಿವಿ ಈಗ ಉನ್ನತ ಮಟ್ಟಕ್ಕೆ ತಲುಪಿದೆ. ಹೊಸ ವಿವಿ ಸ್ಥಾಪನೆಗಳತ್ತ ನಾವು ನೋಡುತ್ತಿದ್ದೇವೆ. ವಿವಿಗಳ ಪರಿಸ್ಥಿತಿಗಳು ಹದಗೆಡುತ್ತಿವೆ. ವಿಶ್ವಮಾನವ ಹೆಸರು ಹೊಂದಿರುವ ವಿವಿಗಳಲ್ಲೂ ಹಲವು ಸಮಸ್ಯೆಗಳಿವೆ. ತನಿಖೆಗಳು ನಡೆಯುತ್ತಿವೆ ಎಂದು ವಿಷಾದಿಸಿದ ಅವರು, ವಿವಿಗಳು ಸ್ವಂತ ಕಾಲಮೇಲೆ ನಿಲ್ಲಲು ಕಷ್ಟಪಡುತ್ತಿವೆ. ಇದರ ಜೊತೆಗೆ ಸಂಶೋಧನೆಗೂ ಒತ್ತುಕೊಡಬೇಕಾಗಿದೆ ಎಂದರು.

ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ವರದಿ ವಾಚಿಸಿದರು.ಕಾರ್ಯಕ್ರಮದಲ್ಲಿ , ಕುಲಸಚಿವರುಗಳಾದ ಹೇಮಂತ್ ಎನ್., ಪ್ರೊ.ಆರ್.ತಿಮ್ಮರಾಯಪ್ಪ ಸೇರಿದಂತೆ ಹಲವರಿದ್ದರು.