Home Shivamogga ಪ್ರಥಮ ಪಿಯುಸಿಗೆ ವಿದ್ಯಾರ್ಥಿಗಳನ್ನು ದಾಖಲೆ ಮಾಡುವಾಗ ಪೋಷಕರೇ ಎಚ್ಚರಿಕೆ..!!

ಪ್ರಥಮ ಪಿಯುಸಿಗೆ ವಿದ್ಯಾರ್ಥಿಗಳನ್ನು ದಾಖಲೆ ಮಾಡುವಾಗ ಪೋಷಕರೇ ಎಚ್ಚರಿಕೆ..!!

29
0

✒️..ಅಮಿತ್ ಆರ್ ಆನಂದಪುರ

ಶಿವಮೊಗ್ಗ : 2026-27 ನೇ ಸಾಲಿಗೆ ಪ್ರಥಮ ಪಿಯುಸಿಗೆ ದಾಖಲಾತಿ ಮಾಡುವಾಗ ಪೋಷಕರು ದಾಖಲಾತಿ ಮಾಡುವ ಕಾಲೇಜಿಗೆ ಇಲಾಖೆಯಿಂದ ಅನುಮತಿ ಪಡೆದಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಖಲಿಸುವಂತೆ ಶಾಲಾ ಕಾಲೇಜು ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಜಿಲ್ಲೆಯ ಕೆಲವೊಂದು ಸಂಸ್ಥೆಯವರು ಹೊಸ ಕಾಲೇಜಿನ ಅನುಮತಿ ಪಡೆಯದೇ ಜಾಹಿರಾತು ಗಳನ್ನು ನೀಡುತ್ತಿರುವುದು ಗಮನಕ್ಕೆ ಬಂದಿದ್ದು, ಅಂತಹ ಕಾಲೇಜುಗಳ ಬಗ್ಗೆ ಪೋಷಕರು ಎಚ್ಚರ ವಹಿಸುವುದು.

ಒಂದು ವೇಳೆ ಈ ಸಂಸ್ಥೆ/ಕಾಲೇಜುಗಳು ಅನಧಿಕೃತವಾಗಿ ದಾಖಲಾತಿ ಮಾಡಿಕೊಂಡಲ್ಲಿ ಅವರ ಮೇಲೆ ಇಲಾಖಾ ನಿಯಮಾನುಸಾರ ಶಿಸ್ತು ಕ್ರಮ ತೆಗೆದುಕೊಳ್ಳಾಗುವುದು.

ಪೋಷಕರಿಗೆ ಅನುಮಾನ ಬಂದರೆ ಉಪನಿರ್ದೇಶಕರ ಕಚೇರಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಬಿ.ಹೆಚ್ ರಸ್ತೆ ಶಿವಮೊಗ್ಗ ಇಲ್ಲಿಯ ಕಚೇರಿ ಸಮಯದಲ್ಲಿ ಬಂದು ವಿಚಾರಿಸುವಂತೆಅವರು ತಿಳಿಸಿದ್ದಾರೆ.