Home Shivamogga ಮಧ್ಯಪ್ರದೇಶದ ನಗಾಡ್ ಉತ್ಸವದಲ್ಲಿ ಕರ್ನಾಟಕದ ಡೊಳ್ಳು ಕುಣಿತದ ಕಂಪು..!!

ಮಧ್ಯಪ್ರದೇಶದ ನಗಾಡ್ ಉತ್ಸವದಲ್ಲಿ ಕರ್ನಾಟಕದ ಡೊಳ್ಳು ಕುಣಿತದ ಕಂಪು..!!

0
9

ಕೆಂಪಯ್ಯ ಇಕ್ಕೆರಿ, ಟಾಕಪ್ಪ ಕಣ್ಣೂರು ಸಾರಥ್ಯದ ತಂಡದಿಂದ ಜನಪದ ಕಲೆಯ ಅನಾವರಣ..!!

✒️..ಅಮಿತ್ ಆರ್ ಆನಂದಪುರ

ಸಾಗರ: ಮಧ್ಯಪ್ರದೇಶದ ಸಿದ್ಧಿ ಜಿಲ್ಲೆಯ ತಮ್ಸರ್‌ನಲ್ಲಿ ಅಕ್ಟೋಬರ್ 24ರಿಂದ 26ರವರೆಗೆ ನಡೆಯುತ್ತಿರುವ ನಗಾಡ್ ಉತ್ಸವದಲ್ಲಿ ಸಾಗರ ತಾಲೂಕಿನ ಚೆನ್ನಶೆಟ್ಟಿಕೊಪ್ಪದ ಶ್ರೀ ಬಸವೇಶ್ವರ ಡೊಳ್ಳು ಕಲಾ ತಂಡ ಕರ್ನಾಟಕವನ್ನು ಪ್ರತಿನಿಧಿಸುತ್ತಿದೆ.

ಭಾರತದ 10 ರಾಜ್ಯಗಳ ಕಲಾ ತಂಡಗಳು ಭಾಗವಹಿಸುತ್ತಿರುವ ಈ ಉತ್ಸವದಲ್ಲಿ ಕರ್ನಾಟಕದಿಂದ ಪಾಲ್ಗೊಂಡಿರುವ ಶ್ರೀ ಬಸವೇಶ್ವರ ಡೊಳ್ಳು ಕಲಾ ತಂಡವು ನಾಡಿನ ಸಾಂಪ್ರದಾಯಿಕ ಜನಪದ ಕಲೆಯಾದ ಡೊಳ್ಳು ಕುಣಿತವನ್ನು ಪ್ರದರ್ಶಿಸುತ್ತಿದೆ. ಕೆಂಪಯ್ಯ ಇಕ್ಕೆರಿ ಹಾಗೂ ಟಾಕಪ್ಪ ಕಣ್ಣೂರು ಅವರ ಸಾರಥ್ಯದಲ್ಲಿ ತಂಡವು ಉತ್ಸವದಲ್ಲಿ ಭಾಗವಹಿಸಿದೆ.

ಡೊಳ್ಳಿನ ನಾದಕ್ಕೆ ತಕ್ಕ ಲಯಬದ್ಧ ಹೆಜ್ಜೆಗಳು ಮತ್ತು ಸಾಮೂಹಿಕ ಕಲಾ ಪ್ರದರ್ಶನದ ಮೂಲಕ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಅನಾವರಣಗೊಳಿಸುವ ಅವಕಾಶವನ್ನು ಈ ಉತ್ಸವ ಕಲ್ಪಿಸಿದೆ. ಗ್ರಾಮೀಣ ಭಾಗದ ಜನಪದ ಕಲೆಯನ್ನು ರಾಜ್ಯದ ಗಡಿಗಳನ್ನು ಮೀರಿ ಇತರ ರಾಜ್ಯಗಳ ಜನರಿಗೆ ಪರಿಚಯಿಸುವುದು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ವಿಶೇಷತೆಯಾಗಿದೆ.

ತಂಡದ ಕಲಾವಿದರು

ಶ್ರೀ ಬಸವೇಶ್ವರ ಡೊಳ್ಳು ಕಲಾ ತಂಡದ ಪ್ರೇಮ್, ವಿಜಯ್, ಅಣ್ಣಪ್ಪ, ಮನೋಜ್, ರವಿ, ಗೋಪಾಲ, ಭರತ್, ಪವನ್, ಸಂತೋಷ್, ಮಂಜುನಾಥ್, ಹರ್ಷ, ದೇವರಾಜ್ ಹಾಗೂ ಶಶಿ ಅವರು ತಂಡದಲ್ಲಿದ್ದಾರೆ.

ಸಾಗರ ತಾಲೂಕಿನ ಚೆನ್ನಶೆಟ್ಟಿಕೊಪ್ಪದಿಂದ ಮಧ್ಯಪ್ರದೇಶದ ಸಾಂಸ್ಕೃತಿಕ ವೇದಿಕೆಯವರೆಗೆ ಡೊಳ್ಳಿನ ನಾದ ಮೊಳಗಿಸುತ್ತಿರುವ ತಂಡವು ಕರ್ನಾಟಕದ ಜನಪದ ಕಲಾ ಪರಂಪರೆಯನ್ನು ಪರಿಚಯಿಸುವ ಕಾರ್ಯದಲ್ಲಿ ತೊಡಗಿದೆ.

NO COMMENTS