Home Shivamogga Sagara ಸಾಮಾಜಿಕ ಬದಲಾವಣೆಯಲ್ಲಿ ಸಿಗಂದೂರು ಆಗ್ರಸ್ಥಾನ’;ಶಾಸಕ ಗೋಪಾಲಕೃಷ್ಣ ಬೇಳೂರು..!!

ಸಾಮಾಜಿಕ ಬದಲಾವಣೆಯಲ್ಲಿ ಸಿಗಂದೂರು ಆಗ್ರಸ್ಥಾನ’;ಶಾಸಕ ಗೋಪಾಲಕೃಷ್ಣ ಬೇಳೂರು..!!

31
0

ಸಾಗರ:ಬಡವರ ಶಿಕ್ಷಣ ಹಾಗೂ ಸಮಾಜದಲ್ಲಿ ಸಾಮಾಜಿಕ ಬದಲಾವಣೆ ತರುವ ಕಾರ್ಯದಲ್ಲಿ ಸಿಗಂದೂರು ಕ್ಷೇತ್ರದ ಕಾರ್ಯ ಅಭಿನಂದನೀಯ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಇವರು ಸಮೀಪದ ಸಿಗಂದೂರಿನಲ್ಲಿ ಬುಧವಾರ ಸಿಗಂದೂರು ಚೌಡಮ್ಮ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಹಮ್ಮಿಕೊಂಡಿದ್ದ ಧರ್ಮಾಧಿಕಾರಿ ಎಸ್ ರಾಮಪ್ಪ ಜನ್ಮದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜನಪರ ಕಾಳಜಿ ಇರುವ ವ್ಯಕ್ತಿಗಳು ಯಾವಾಗಲೂ ಜನರ ಜೊತೆಗೆ ಇರುತ್ತಾರೆ ಎಂಬುದಕ್ಕೆ ಸಿಗಂದೂರು ಧರ್ಮಾಧಿಕಾರಿ ಎಸ್ ರಾಮಪ್ಪ ಸ್ವಾರ್ಥ ರಹಿತ ಸಮಾಜ ಸೇವೆ ಕಾರಣ. ರಾಜ್ಯದ ಆಪಾರ ದೇವಸ್ಥಾನ, ವಿದ್ಯಾರ್ಥಿ ನಿಲಯ, ಕಲ್ಯಾಣ ಮಂಟಪ, ಶಾಲಾ ಕಾಲೇಜಿಗೆ ಸುಣ್ಣ ಬಣ್ಣ ಕಾರ್ಯಕ್ಕೆ ಉದಾರ ನೆರವು ನೀಡಿರುವುದನ್ನು ಅವರು ಶ್ಲಾಘಿಸಿದರು.

ಶರಾವತಿ ತಟದಲ್ಲಿ ಆಧುನಿಕ ಸಂಪರ್ಕ ಇಲ್ಲದ ವೇಳೆಯೇ ಅವಿರತ ಶ್ರಮದಿಂದ ದೇವಾಸ್ಥಾನ ಅಭಿವೃದ್ಧಿಗೆ ಶ್ರಮಿಸಿರುವುದು ಧಾರ್ಮಿಕ ಕ್ರಾಂತಿಯೇ ಸರಿ ಸಿಗಂದೂರು ಇಂದು ರಾಜ್ಯದ ಪ್ರಮುಖ ಶಕ್ತಿ ಕೇಂದ್ರಗಳಲ್ಲಿ ಒಂದಾಗಿರುವುದು ಹೆಮ್ಮೆ ಎನಿಸುತ್ತದೆ ಎಂದು ಆನಂದಪುರ ಮುರುಫಾಮಠದ ಮಲ್ಲಿಕಾರ್ಜುನ ಮುರುಫಾ ರಾಜೇಂದ್ರ ಸ್ವಾಮೀಜಿ ಹೇಳಿದರು.

ಜನ್ಮದಿನದ ಪ್ರಯುಕ್ತ ಸಹ್ಯಾದ್ರಿ ನಾರಾಯಣ ಅಸ್ಪತ್ರೆಯಿಂದ ಹೃದಯ ತಪಾಸಣೆ, ರೆಡ್ ಕ್ರಾಸ್ ಸಂಸ್ಥೆಯಿಂದ ರಕ್ತದಾನ ಶಿಬಿರ ನೆಡೆಯಿತು.

ಈ ವೇಳೆ ಸಿಗಂದೂರು ದೇವಸ್ಥಾನದ ಕಾರ್ಯದರ್ಶಿ ಎಚ್ ಆರ್ ರವಿಕುಮಾರ್ ಪ್ರಮುಖರಾದ ರಾಜ ನಂದಿನಿ ಕಾಗೋಡು, ಶ್ರೀಧರ್ ಹುಲ್ತಿಕೊಪ್ಪ, ಚಂದ್ರಪ್ಪ ಕಲಸೆ, ಗಣಪತಿ ಮಂಡಗಳಲೆ, ಕೆ ಜಿ ಪ್ರಶಾಂತ್, ಇಂಧೂಧರ ಗೌಡ,ದಿನೇಶ್ ಕುಮಾರ್, ಕಿಶೋರ್ ಬೈರಾಪುರ, ಸತ್ಯನಾರಾಯಣ ಜಿ ಟಿ, ಚಂದ್ರಪ್ಪ ಅಳೂರು ಇದ್ದರು.