Home Shivamogga Sagara ಆನಂದಪುರ ಗೌರಿ ಕೆರೆಯಲ್ಲಿ ಮೇ 20ರಂದು ಐತಿಹಾಸಿಕ ಕೆರೆ ಬೇಟೆ..!!

ಆನಂದಪುರ ಗೌರಿ ಕೆರೆಯಲ್ಲಿ ಮೇ 20ರಂದು ಐತಿಹಾಸಿಕ ಕೆರೆ ಬೇಟೆ..!!

19
0

ಆನಂದಪುರ: ಇಲ್ಲಿನ ಪ್ರಸಿದ್ಧ ಗೌರಿ ಕೆರೆಯಲ್ಲಿ ಮೇ 20ರಂದು ಐತಿಹಾಸಿಕ ಕೆರೆ ಬೇಟೆ ಆಯೋಜಿಸಲಾಗಿದೆ.

ಗ್ರಾಮೀಣ ಸಂಪ್ರದಾಯದ ವಿಶೇಷತೆಯಾದ ಕೆರೆ ಬೇಟೆ ಭಾಗವಹಿಸಲು ಆಸಕ್ತರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದ್ದು, ಕಾರ್ಯಕ್ರಮದ ಸುಸೂತ್ರ ನಿರ್ವಹಣೆಗೆ ಸಮಿತಿಯು ಹಲವು ನಿಯಮ ಹಾಗೂ ನಿಬಂಧನೆಗಳನ್ನು ಪ್ರಕಟಿಸಿದೆ.

ಪ್ರತಿ ಟಿಕೆಟ್‌ಗೆ ₹500 ದರ ನಿಗದಿಪಡಿಸಲಾಗಿದೆ. ಭಾಗವಹಿಸುವವರು ಅಂದು ಬೆಳಿಗ್ಗೆ 10ರಿಂದ 11 ಗಂಟೆಯೊಳಗಾಗಿ ಟಿಕೆಟ್ ಪಡೆದುಕೊಳ್ಳಬೇಕು ಎಂದು ಸಮಿತಿ ತಿಳಿಸಿದೆ. ಟಿಕೆಟ್ ಇಲ್ಲದೆ ಕೆರೆಗೆ ಇಳಿದಲ್ಲಿ ₹5,000 ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಕೆರೆ ಬೇಟೆಯಲ್ಲಿ ಕೇವಲ ಪುರುಷರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮಹಿಳೆಯರು ಹಾಗೂ ಸಣ್ಣ ಮಕ್ಕಳಿಗೆ ಭಾಗವಹಿಸಲು ಅವಕಾಶ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಒಂದು ಕೂಣಿಗೆ ಒಬ್ಬರಿಗೆ ಮಾತ್ರ ಕೆರೆಗೆ ಇಳಿಯಲು ಅವಕಾಶವಿದ್ದು, ಜರಡಿ, ಬಲೆ, ದೊಣ್ಣೆ, ಕತ್ತಿ ಸೇರಿದಂತೆ ಯಾವುದೇ ರೀತಿಯ ಸಲಕರಣೆಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ.

ಕೆರೆಯಲ್ಲಿ ಮೀನು ಸಿಗದಿದ್ದಲ್ಲಿ ಹಣ ಮರುಪಾವತಿ ಇರುವುದಿಲ್ಲ. ಹಾಗೆಯೇ ಸಂಭವಿಸುವ ಯಾವುದೇ ಅಹಿತಕರ ಘಟನೆಗಳಿಗೆ ಸಮಿತಿ ಜವಾಬ್ದಾರಿಯಾಗಿರುವುದಿಲ್ಲ ಎಂದು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಶರಣ್ ಸಂಪರ್ಕಿಸಬಹುದಾಗಿದೆ 9482030881