Home Shivamogga ಶಿವಮೊಗ್ಗ ಅಕ್ರಮ ಮರಳು ಗಣಿಗಾರಿಕೆ ಮೇಲೆ ದಾಳಿ, 80 ಲೋಡ್ ಮರಳು ವಶ..!!

ಶಿವಮೊಗ್ಗ ಅಕ್ರಮ ಮರಳು ಗಣಿಗಾರಿಕೆ ಮೇಲೆ ದಾಳಿ, 80 ಲೋಡ್ ಮರಳು ವಶ..!!

7
0

ಶಿವಮೊಗ್ಗ: ಹಾಡೋನಹಳ್ಳಿ ಬಳಿ ತುಂಗಭದ್ರಾ ನದಿಯಲ್ಲಿ ಮರಳು ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಪ್ರದೇಶದಲ್ಲಿ ಉಪವಿಭಾಗಾಧಿಕಾರಿ ಸತ್ಯನಾರಾಯಣ ಅವರ ನೇತೃತ್ವದ ತಂಡ ದಾಳಿ ನಡೆಸಿ ಅಂದಾಜು 80 ಲೋಡ್ ಮರಳನ್ನು ವಶಪಡಿಸಿಕೊಂಡಿದೆ.

ರಾತ್ರಿ ವೇಳೆ ನದಿಯ ಒಡಲಿನಿಂದ ಮಣ್ಣು ತೆಗೆದು ವಾಶ್ ಮೂಲಕ ಮರಳು ಬೇರ್ಪಡಿಸುವ ಅಕ್ರಮ ಚಟುವಟಿಕೆ ಬೆಳಕಿಗೆ ಬಂದಿದೆ. ಹಾಡೋನಹಳ್ಳಿ ಸೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ರೀತಿಯ ಮರಳು ಅಕ್ರಮ ಗಣಿಗಾರಿಕೆ ಬಹಳ ಕಾಲದಿಂದ ನಡೆಯುತ್ತಿದ್ದು, ಅಧಿಕಾರಿಗಳು ಮೇಲಿಂದ ಮೇಲೆ ಕಾರ್ಯಾಚರಣೆ ನಡೆಸುತ್ತಿದ್ದರೂ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತಿಲ್ಲ ಎನ್ನಲಾಗಿದೆ.

2025ರಿಂದ ಈವರೆಗೆ ಹಾಡೋನಹಳ್ಳಿ ಭಾಗದಲ್ಲಿ 13ಕ್ಕೂ ಹೆಚ್ಚು ಬಾರಿ ದಾಳಿ ನಡೆದಿದ್ದರೂ ಮರಳು ಅಕ್ರಮ ಸಂಗ್ರಹ ಮಾತ್ರ ನಿಂತಿಲ್ಲ. ಇದರಿಂದ ತುಂಗಭದ್ರಾ ನದಿಯ ಒಡಲು ದಿನದಿಂದ ದಿನಕ್ಕೆ ಬರಿದಾಗುತ್ತಿದ್ದು, ಪರಿಸರದ ಹಾನಿ ಹೆಚ್ಚುತ್ತಿದೆ ಎಂಬ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.ಮರಳನ್ನು ನದಿಯಲ್ಲೇ ಬಿಡಲಾಗಿದ್ದು, ಸ್ಥಳದಲ್ಲಿ ಪೊಲೀಸ್‌ ಬಂದೋಬಸ್ತ್ ಒದಗಿಸಲಾಗಿದೆ. ಭೂ-ವಿಜ್ಞಾನಿ ಪ್ರಿಯಾ, ಪೊಲೀಸ್‌ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.