Home Shivamogga ಸಾವಿನಲ್ಲೂ ಬಹು ಅಂಗಾಂಗಗಳನ್ನು ದಾನ ಮಾಡಿ ಸಾರ್ಥಕತೆ ಮರೆದ ಭದ್ರಾವತಿಯ ಕೀರ್ತನ..!!

ಸಾವಿನಲ್ಲೂ ಬಹು ಅಂಗಾಂಗಗಳನ್ನು ದಾನ ಮಾಡಿ ಸಾರ್ಥಕತೆ ಮರೆದ ಭದ್ರಾವತಿಯ ಕೀರ್ತನ..!!

23
0

ಭದ್ರಾವತಿ,ಜೂ.3: ಹಳೇನಗರದ ಸುಭಾಷ್ ನಗರದ ವಾಸಿ ಕುಮಾರ್ ಮತ್ತು ಲೀಲಾ ಎಂಬುವರ ಪುತ್ರಿ ಕೀರ್ತನಾ (23) ತಮ್ಮ ಸಾವಿನಲ್ಲೂ ಬಹು ಅಂಗಾಂಗಗಳನ್ನು ದಾನ ಮಾಡಿ ಸಾರ್ಥಕತೆ ಮರೆದ ಘಟನೆ ನಡೆದಿದೆ.

ಕೀರ್ತನಾ ತುಮಕೂರಿನ ಸಿದ್ದಗಂಗಾ ಇನ್ ಟಿಟ್ಯೂಟ್ ಆಫ್ ಮೆಡಿಕಲ್‌ ಸೈನ್ಸ್‌ನ ನರ್ಸಿಂಗ್ ವಿಭಾಗದಲ್ಲಿ ನೌಕರಿಯಲ್ಲಿದ್ದರು. ತಮ್ಮ ಮನೆಯಿಂದ ಕಳೆದ ಮಂಗಳವಾರ ನೌಕರಿಗೆ ತೆರಳಿದ್ದರು.

ಅಂದೇ ರಾತ್ರಿ ಪಾಳೆಯದಲ್ಲಿ ಇವರು ಕರ್ತವ್ಯದಲ್ಲಿದ್ದಾಗ ಇದ್ದಕ್ಕಿದ್ದ ಹಾಗೆ ನೆಲಕ್ಕುರುಳಿ ಪ್ರಜ್ಞೆ ತಪ್ಪಿದೆ. ತಕ್ಷಣ ಅವರನ್ನು ಚಿಕಿತ್ಸೆಗೆ ಒಳಪಡಿಸಲಾಗಿತ್ತು. ರಾತ್ರಿ 12 ಗಂಟೆಗೆ ಆಸ್ಪತ್ರೆಯಿಂದ ಭದ್ರಾವತಿಯಲ್ಲಿನ ಅವರ ತಂದೆ ಕುಮಾರ್‌ಗೆ ಫೋನ್ ಮಾಡಿ ವಿಷಯ ತಿಳಿಸಿದ್ದರು.

ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದ್ದರೂ ಪ್ರಜ್ಞೆ ಬಂದಿಲ್ಲ. ಭಾನುವಾರ ರಾತ್ರಿ ವೈದ್ಯರು ಚಿಕಿತ್ಸೆಫಲಕಾರಿಯಾಗದೆ ಕೊನೆ ಉಸಿರೆಳೆದಿದ್ದಾರೆಂದು ದೃಢಪಡಿಸಿದ್ದಾರೆ.

ನಂತರ ಮೃತ ದೇಹವನ್ನು ಸೋಮವಾರ ಬೆಂಗಳೂರಿನ ಮಹಾದೇವ ಪುರದಲ್ಲಿರುವ ಕೃಷ್ಣ ಕಿಮ್ಸ್ ಆಸ್ಪತ್ರೆಯಲ್ಲಿ ಬಹು ಅಂಗಾಂಗಗಳನ್ನು ಪಡೆಯಲಾಗಿದೆ. ಮಂಗಳವಾರ ಮೃತ ದೇಹವನ್ನು ನಗರಕ್ಕೆ ತಂದು ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗಿದೆ ಎಂದು ತಿಳಿದುಬಂದಿದೆ.