Home Shivamogga ಆಕಾಶವಾಣಿಗೆ 90 ವರ್ಷ: ಬಾನುಲಿ ಬರಹ ಕಾರ್ಯಾಗಾರದಲ್ಲಿ ಮಾಧ್ಯಮದ ಮಹತ್ವ ಅನಾವರಣ..!!

ಆಕಾಶವಾಣಿಗೆ 90 ವರ್ಷ: ಬಾನುಲಿ ಬರಹ ಕಾರ್ಯಾಗಾರದಲ್ಲಿ ಮಾಧ್ಯಮದ ಮಹತ್ವ ಅನಾವರಣ..!!

22
0

✒️..ಅಮಿತ್ ಆರ್ ಆನಂದಪುರ

ಶಿವಮೊಗ್ಗ: ಆಕಾಶವಾಣಿಗೆ 90 ವರ್ಷ ತುಂಬುತ್ತಿದ್ದು, ದೇಶದ ಪ್ರಥಮ ಎಲೆಕ್ಟ್ರಾನಿಕ್ ಮಾಧ್ಯಮವಾಗಿ ಆರಂಭವಾದ ಆಕಾಶವಾಣಿ ಹತ್ತು ಹಲವು ಪ್ರತಿಭೆಗಳನ್ನು ಹೊರತಂದಿದೆ ಎಂದು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥ ಎಸ್.ಆರ್.ಭಟ್ ಹೇಳಿದರು.

ಅವರು ಆಕಾಶವಾಣಿಗೆ 90ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಆಕಾಶವಾಣಿ ಭದ್ರಾವತಿ ಹಾಗೂ ಕುವೆಂಪು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ಭದ್ರಾವತಿಯ ಆಕಾಶವಾಣಿ ಕೇಂದ್ರದಲ್ಲಿ ಏರ್ಪಡಿಸಿದ “ಬಾನುಲಿ ಬರಹ” ವಿಶೇಷ ಕಾರ್ಯಾಗಾರದಲ್ಲಿ ಮಾತನಾಡಿ, ಪ್ರತಿ ದಿನ ವಿವಿಧ ರೀತಿಯ ಕಾರ್ಯಕ್ರಮ ನೀಡುತ್ತಿದೆ. ಪ್ರತಿಕೋದ್ಯಮದ ವಿದ್ಯಾರ್ಥಿಗಳು ಸಂಶೋಧಕರಾಗಿ ವಸ್ತುನಿಷ್ಟ ವರದಿ ಮಾಡಿದರೆ ಜನಮನಗೆಲ್ಲಲು ಸಾಧ್ಯ ಎಂದು ತಿಳಿಸಿದರು.

ಕುವೆಂಪು ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಸತೀಶ್ ಕುಮಾರ್ ಅಡಂಜಿ ಅವರು ಪತ್ರಿಕೆ ಮತ್ತು ಆಕಾಶವಾಣಿ ಬರಹದ ವ್ಯತ್ಯಾಸ ತಿಳಿಸುಸುವುದರೊಂದಿಗೆ ಆಕಾಶವಾಣಿ ನಿಖರ ಹಾಗೂ ಸತ್ಯನಿಷ್ಟೆಗೆ ಹೆಸರಾಗಿದೆ ಮತ್ತು ನನ್ನ ಬಾಲ್ಯದ ಗೆಳೆಯ ಆಕಾಶವಾಣಿ ಆಗಿತ್ತು ಎಂದು ಅಭಿಪ್ರಾಯ ಪಟ್ಟರು.

ಆಕಾಶವಾಣಿಯ ತಾಂತ್ರಿಕ ವಿಭಾಗದ ಮುಖ್ಯಸ್ಥ ಎಸ್.ಎಸ್.ಕೃಷ್ಣಪ್ಪ ಮಾತನಾಡಿ,ಇಂದು ರೇಡಿಯೋ ಕೇವಲ ರೇಡಿಯೋದಲ್ಲಿ ಅಷ್ಟೇ ಅಲ್ಲದೆ ಮೊಬೈಲ್ ಆ್ಯಪ್ ಹಾಗು ಡಿಜಿಟಲ್ ಮಿಡಿಯಾದಲ್ಲಿ ಜಗತ್ತಿನಾದ್ಯಂತ ಕೇಳಬಹುದು ಎಂದರು.

ನಾಟಕ ರಚನೆ, ಉದ್ಯೋಷಕರ ಬರವಣಿಗೆ, ಕೃಷಿ ಬರವಣಿಗೆ, ಜಾನಪದ ಬರವಣಿಗೆ ಬಗ್ಗೆ ಎಂ.ಕೆ.ಶಿವಕುಮಾ‌ರ್, ಎಸ್.ಎಂ.ಸುಧಾಕ‌ರ್ ಹಾಗೂ ಜಾನಪದ ತಜ್ಞ ಬಸವರಾಜ ನೆಲ್ಲಿಸರ ಅವರು ಚರ್ಚಿಸಿದರು. ಜಿ ವಿಜಯಕುಮಾರ್ ಕೇಳುಗರ ಬರವಣಿಗೆ ಬಗ್ಗೆ ಮಾಹಿತಿ ನೀಡಿದರು.

ಭದ್ರಾವತಿ ಹಾಗೂ ಚಿತ್ರದುರ್ಗ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥ ಎಸ್. ಆರ್.ಭಟ್, ಬಾನುಲಿ ನಾಟಕದದಲ್ಲಿ ಪಿ.ಹೆಚ್.ಡಿ ಪಡೆದ ಎನ್‌.ಸುಧೀಂದ್ರ, ಹಿರಿಯ ಉದ್ಯೋಷಕ ಎಂ.ಕೆ.ಶಿವಕುಮಾರ್, ರೋಟರಿಯ ಜಿ.ವಿಜಯಕುಮಾ‌ರ್, ಡಾ. ಎಸ್ ಎಂ ಸುಧಾಕರ್ ಅವರು ಬಾನುಲಿಯ ವಿವಿಧ ಪ್ರಕಾರದ ಬರವಣಿಗೆ ಬಗ್ಗೆ ಮಾಹಿತಿ ನೀಡಿದರು.

ಡಾ. ಬಸವರಾಜ ಗುಬ್ಬಿ ಅವರ ನಿರೂಪಣೆ ಹಾಗೂ ವಿದ್ಯಾದೇವಿ ಕಾರಂತ್ ವಂದನಾರ್ಪಣೆ ಮಾಡಿದರು.