
ಆನಂದಪುರ :ಆನಂದಪುರದ ಕರ್ನಾಟಕ ಪಬ್ಲಿಕ್ ಸ್ಕೂಲ್ 17 ವರ್ಷದ ಒಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದು ಕೊಂಡಿದೆ.ಈ ಶಾಲೆಯು 5 ನೇ ಬಾರಿಗೆ ಸತತ ವಾಗಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡು ಜನರ ಹೆಗ್ಗಳಿಕೆಗೆ ಪಾತ್ರರಾಗಿದೆ.

ಬಾಲಕರ ವಿಭಾಗದಲ್ಲಿ ಖೋ ಖೋ ಪ್ರಥಮ, 400×100 ರಿಲೇ ದ್ವಿತೀಯ, 4×400 ರಿಲೇ ದ್ವಿತೀಯ, ಅಶ್ವಿನ್ 100 ಮೀ. ಓಟ ಪ್ರಥಮ, ಸೃಜನ್ 1500 ಮೀ.ಓಟ ದ್ವಿತೀಯ, ತರುಣ್ 110 ಹರ್ಡಲ್ಸ್ ದ್ವಿತೀಯ, ನಿಶಾಂತ್ ನಡಿಗೆ ಪ್ರಥಮ, ಸೃಜನ್ 3000 ಮೀ. ಓಟ ದ್ವಿತೀಯ, ಅಶ್ವಿನ್ 400 ಮೀ ಓಟ ಪ್ರಥಮ, ತರುಣ್ 800 ಮೀ. ಓಟ ದ್ವಿತೀಯ, ಜಿತೇಂದ್ರ 400 ಹರ್ಡಲ್ಸ್ ಪ್ರಥಮ, ತರುಣ್ 400 ಹರ್ಡಲ್ಸ್ ತೃತೀಯ, ತಲ್ಹಾ ತಟ್ಟೆ ಎಸೆತ ತೃತೀಯ ಹೀಗೆ ಬಾಲಕರ ವಿಭಾಗದಲ್ಲಿ ಉತ್ತಮವಾಗಿ ಆಟವಾಡಿ ಈ ಮೇಲ್ಕಂಡಂತೆ ವಿದ್ಯಾರ್ಥಿಗಳು ಉತ್ತಮ ಆಟವಾಡಿ ತಾಲೂಕು ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ಖೋ ಖೋ ಪ್ರಥಮ, ತ್ರೋಬಲ್ ದ್ವಿತೀಯ, ಕಬ್ಬಡಿ ಪ್ರಥಮ, ಬ್ಯಾಡ್ಮಿಂಟನ್ ದ್ವಿತೀಯ, ಬೃಂದಾ 100 ಮೀ. ಓಟ ಪ್ರಥಮ, ಸಾಹಿತ್ಯ 100 ಮೀ. ಓಟ ತೃತೀಯ,400×400 ರಿಲೇ ಪ್ರಥಮ, 4×100 ರಿಲೇ ಪ್ರಥಮ, ಭೂಮಿಕಾ 1500 ಮೀ.ಓಟ ಪ್ರಥಮ, ಪೂರ್ಣಿಮಾ 1500 ಮೀ. ಓಟ ದ್ವಿತೀಯ, ಶ್ರಾವ್ಯ 100 ಹರ್ಡಲ್ಸ್ ಪ್ರಥಮ, ಐಶ್ವರ್ಯ ನಡಿಗೆ ಪ್ರಥಮ, ಭೂಮಿಕಾ 3000 ಓಟ ಪ್ರಥಮ, ಹಂಸಶ್ರೀ 3000 ಮೀ.ಓಟ ದ್ವಿತೀಯ ಹಾಗೂ 800 ಮೀ.ಓಟ ಪ್ರಥಮ, ಅರ್ಪಿತ ಉದ್ದ ಜಿಗಿತ ಪ್ರಥಮ, ಬಿಂದುಶ್ರೀ ಹ್ಯಾಮರ್ ದ್ವಿತೀಯ, ಶೋಭಿತ ಹ್ಯಾಮರ್ ತೃತೀಯ. ಈ ರೀತಿಯಲ್ಲಿ ಬಾಲಕಿಯರ ವಿಭಾಗದಲ್ಲಿ ಉತ್ತಮವಾಗಿ ಆಟವನ್ನು ಆಡಿ ತಾಲ್ಲೂಕು ಮಟ್ಟಕ್ಕೆ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಸಮಗ್ರ ಪ್ರಶಸ್ತಿಯನ್ನು ಪಡೆದ ಖುಷಿಗೆ ವಿದ್ಯಾರ್ಥಿಗಳು ಆನಂದಪುರ ಬಸ್ ನಿಲ್ದಾಣದಲ್ಲಿ ಸಿಡಿಮದ್ದನ್ನು ಸಿಡಿಸಿ ಸಂಭ್ರಮಾಚರಣೆ ಪಟ್ಟರು.ಈ ಸಂದರ್ಭದಲ್ಲಿ ಉಪ ಪ್ರಾಂಶುಪಾಲ ಈಶ್ವರಪ್ಪ,ದೈಹಿಕ ಶಿಕ್ಷಣ ಶಿಕ್ಷಕ ನಟರಾಜ್ ಕೆ.ಆರ್, ಶ್ರೀನಿವಾಸ್, ಅಣ್ಣಪ್ಪ, ಕಡಿಬಸವ ನಾಯ್ಕ್,ಮಂಜುನಾಥ್ ಇನ್ನಿತರರು ಪಾಲ್ಗೊಂಡಿದ್ದರು.








