
ಸಾಗರ (ಆನಂದಪುರ): ನಮ್ಮ ಅಜ್ಜನ ಕಾಲದಿಂದಲೂ ಸಾಗುವಳಿ ಮಾಡಿಕೊಂಡು ಬಂದಿರುವ ಜಮೀನನ್ನು ಅಕ್ರಮವಾಗಿ ಜಾಗ ಹೊಡೆದುಕೊಳ್ಳುತ್ತಿದ್ದೇವೆ ಎಂದು ನಮ್ಮ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಇದೇ ರೀತಿ ಮುಂದುವರಿದರೆ ರತ್ನಾಕರ ಹಾಗೂ ರವಿ ಗೌಡರ ಮನೆ ಮುಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಬಹುದು ಎಂದು ನಾಗವೇಣಿ ಆರೋಪಿಸಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ನಾವು ನಮ್ಮ ಅಜ್ಜನ ಕಾಲದಿಂದಲೂ ಈ ಗ್ರಾಮಠಾಣಾ ಜಾಗದಲ್ಲಿ ಸಾಗುವಳಿ ಮಾಡಿಕೊಂಡು ಬಂದಿದ್ದೇವೆ. ನಮ್ಮ ತಂದೆ ಟೀಕಪ್ಪ ಗೌಡರ ನಿಧನದ ಬಳಿಕ ನಾವು ಹೆಣ್ಣುಮಕ್ಕಳಾಗಿರುವ ಕಾರಣದಿಂದ ಸಾಗುವಳಿ ಮುಂದುವರಿಸಲು ಸಾಧ್ಯವಾಗದೆ ಜಾಗವನ್ನು ಹಾಗೆಯೇ ಬಿಟ್ಟಿದ್ದೆವು. ಈ ಜಾಗದಲ್ಲಿ ನಾವು ಸಾಗುವಳಿಗೆ ಬಳಸುತ್ತಿದ್ದ ಬಾವಿಯೂ ಇದೆ” ಎಂದು ತಿಳಿಸಿದರು.
“ಜಾಗದಲ್ಲಿ ಜೋಳ ಬಿತ್ತನೆ ಮಾಡಲು ಸ್ವಚ್ಛಗೊಳಿಸುವ ಉದ್ದೇಶದಿಂದ ಗಜೇಂದ್ರ ಅವರ ಜೆಸಿಬಿ ತರಲು ಮಾತ್ರ ಹೇಳಿದ್ದೆವು. ಆದರೆ ಈ ವಿಚಾರದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಗಜೇಂದ್ರ ಅವರ ಹೆಸರನ್ನು ಅನಗತ್ಯವಾಗಿ ಎಳೆದು ಸುಳ್ಳು ಪ್ರಚಾರ ಮಾಡಲಾಗುತ್ತಿದೆ” ಎಂದು ಆರೋಪಿಸಿದರು.

“ನಾವು 10 ಎಕರೆ ಜಮೀನು ಒತ್ತುವರಿ ಮಾಡಿದ್ದೇವೆ ಎಂದು ರತ್ನಾಕರ ಅವರು ಆರೋಪಿಸಿದ್ದಾರೆ. ಆದರೆ ಇಲ್ಲಿ ಇರುವ ಜಾಗ ಕೇವಲ ಎರಡರಿಂದ ಮೂರು ಎಕರೆ ಮಾತ್ರ. ಈ ವಿಚಾರದಲ್ಲಿ ನಮಗೆ ಜೀವಭಯವಿದ್ದು, ಅದಕ್ಕೆ ರತ್ನಾಕರ, ಮೋಹನ್ ಹಾಗೂ ರವೀಂದ್ರ ಗೌಡ ಕಾರಣ” ಎಂದು ಹೇಳಿದರು.
ಇದೇ ಜಾಗಕ್ಕೆ ಸಂಬಂಧಿಸಿದಂತೆ ಹದ್ದುಬಸ್ತು ಮಾಡಿಕೊಡುವಂತೆ ಸೋಮಶೇಖರ್ ಲಾವಿಗೆರೆ ಅವರಿಗೆ ಹೇಳಿದ್ದೆ. ಅವರು, “ಬಡವರಿಗೆ ಮಾಡಿಕೊಡದೆ ಮತ್ತಾರಿಗೆ ಮಾಡಿಕೊಡುವುದು? ಪಿ ಡಿ ಓ ಅವರಿಗೆ ಅರ್ಜಿ ಕೊಡಿ,ಮಾತನಾಡಿ ಮಾಡಿಸೋಣ” ಎಂದು ತಿಳಿಸಿದ್ದರು. ಇದಲ್ಲದೆ ಅವರು ಈ ಜಾಗದಲ್ಲಿ ಯಾವುದೇ ರೀತಿಯ ಪಾಲು ಕೇಳಿಲ್ಲ ಎಂದರು.
“ಸುತ್ತಮುತ್ತಲಿನ ಅನೇಕರು ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ. ರವಿ ಗೌಡರ ಜಾಗವೂ ಇದೆ. ರತ್ನಾಕರ ಅವರು ಇತರರಿಗೂ ಜಾಗ ಕೊಡಿಸಿದ್ದಾರೆ. ಆದರೆ ಎಲ್ಲವನ್ನೂ ಬಿಟ್ಟು ನಾವು ಸಾಗುವಳಿ ಮಾಡಿಕೊಂಡು ಬಂದಿರುವ ಜಾಗವನ್ನೇ ಬಿಟ್ಟು ಕೊಡಿ ಎಂದು ಒತ್ತಾಯಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಾವು ಈ ಜಾಗವನ್ನು ಬಿಟ್ಟುಕೊಡುವುದಿಲ್ಲ. ನಮಗೆ ಜೀವಭಯವೂ ಇದೆ”,ರತ್ನಾಕರ ಅವರಿಗೂ ಹೆಣ್ಣುಮಕ್ಕಳು ಇದ್ದಾರೆ ನಮ್ಮ ಕಷ್ಟದ ಅರಿವು ನಿಮಗೆ ತಿಳಿಯಬೇಕು ಎಂದರು
ಈ ಸಂದರ್ಭದಲ್ಲಿ ಜಯಮ್ಮ ಟೀಕಪ್ಪ ಗೌಡ ಉಪಸ್ಥಿತರಿದ್ದರು.
ಜಾಹೀರಾತು:











