ಆನಂದಪುರ (ಸಾಗರ): ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಎಲ್‌ಐಸಿ ಯ ಶ್ರೀ ರವಿಕುಮಾರ್ ಡಿ. ಏನ್ ಅವರು ಇಬ್ಬರು ವಿದ್ಯಾರ್ಥಿಗಳನ್ನು ಅವರ ಸ್ವಗೃಹಗಳಿಗೆ ತೆರಳಿ ಸನ್ಮಾನಿಸಿ ಅಭಿನಂದಿಸಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಲಿಂಗದಹಳ್ಳಿ ವಸತಿ ಶಾಲೆಯ ಶ್ರೀ ರಾಮಕೃಷ್ಣ ವಿವೇಕಾನಂದ ರೆಸಿಡೆನ್ಸಿಯಲ್ ಸ್ಕೂಲ್‌ನ ವಿದ್ಯಾರ್ಥಿ, ಆನಂದಪುರ ಸಮೀಪದ ಯಡೇಹಳ್ಳಿಯ ಮಹದೇವ ಅವರ ಪುತ್ರ ವಿಜ್ಞೇಶ್ 91% ಅಂಕ ಗಳಿಸಿ ಸಾಧನೆ ಮಾಡಿದ್ದು, ಅವರನ್ನು .ಶ್ರೀ ರವಿಕುಮಾರ್. ಡಿ. ಏನ್ ಅವರು ಸ್ವಗೃಹದಲ್ಲಿ ಸನ್ಮಾನಿಸಿ ₹5 ಸಾವಿರ ಪ್ರೋತ್ಸಾಹಧನ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ರವಿಕುಮಾರ್. ಡಿ ಏನ್ ರವರು “ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಉನ್ನತ ಸಾಧನೆ ಮಾಡಬೇಕು. ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಮಾಜದ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳು ಶಿಸ್ತು, ಪರಿಶ್ರಮ ಹಾಗೂ ದೃಢ ಸಂಕಲ್ಪದಿಂದ ವಿದ್ಯಾಭ್ಯಾಸ ಮುಂದುವರಿಸಿದರೆ ಯಶಸ್ಸು ಖಚಿತ ಎಂದರು. ವಿದ್ಯಾರ್ಥಿ ವಿಜ್ಞೇಶ್ ಅವರು ಮುಂದಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 95% ಅಥವಾ ಅದಕ್ಕಿಂತ ಹೆಚ್ಚಿನ ಅಂಕ ಗಳಿಸಿದರೆ ಮತ್ತೊಮ್ಮೆ ₹5 ಸಾವಿರ ಪ್ರೋತ್ಸಾಹಧನ ನೀಡಿ ಸನ್ಮಾನಿಸುತ್ತೇನೆ” ಎಂದು ಘೋಷಿಸಿದರು.

ಸನ್ಮಾನ ಸ್ವೀಕರಿಸಿದ ವಿಜ್ಞೇಶ್ ಮತ್ತು ಅವರ ಪೋಷಕರು ತಮಗೆ ಪ್ರೋತ್ಸಾಹ ನೀಡಿದ ರವಿಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಾಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಗಿರೀಶ್. ಡಿ.ಏನ್.ಸಾಗರ ಮಾರಿಕಾಂಬ ಸೇವಾ ಸಮಿತಿಯ ಸದಸ್ಯ ಮೋಹನ್ ಹಾಗೂ ಚೇತನ್. ಎಲ್ ಮತ್ತು ವಿದ್ಯಾರ್ಥಿಯ ಪೋಷಕರು ಉಪಸ್ಥಿತರಿದ್ದರು.
ಇದೇ ವೇಳೆ, ಕುಂಸಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ, ಕುಂಸಿಯ ರವಿ ಅವರ ಪುತ್ರಿ ಜಾನ್ಹವಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇಕಡಾ 97% ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ್ದ ಹಿನ್ನೆಲೆಯಲ್ಲಿ ಹಾಗೂ CET ಪರೀಕ್ಷೆಯಲ್ಲಿ 20000 ನೇ RANK ಪಡೆದಿದ್ದು ಶ್ರೀ ರವಿಕುಮಾರ್ D N ಅವರು ಅವರ ಸ್ವಗೃಹಕ್ಕೆ ತೆರಳಿ ಸನ್ಮಾನಿಸಿ ಅಭಿನಂದಿಸಿದರು. ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಉತ್ತಮ ಸಾಧನೆ ಮಾಡುವಂತೆ ವಿದ್ಯಾರ್ಥಿನಿಗೆ ಹುರಿದುಂಬಿಸಿದರು.
ಈ ಸಂದರ್ಭದಲ್ಲಿ ಆನಂದಪುರ ಜ್ಞಾನ ಸಹ್ಯಾದ್ರಿ ಮುಖ್ಯೋಪಾಧ್ಯಾಯ ಮಂಜಪ್ಪ, ರಮೇಶ್ ಹೊಸಕೊಪ್ಪ ಹಾಗೂ ವಿದ್ಯಾರ್ಥಿನಿಯ ಪೋಷಕರು ಉಪಸ್ಥಿತರಿದ್ದರು.
ಜಾಹೀರಾತು:












