Home Shivamogga ಶಿಕಾರಿಪುರ/ಕಾಡು ಹಂದಿ ಮಾಂಸ ಮಾರಾಟಕ್ಕೆ ಸಿದ್ಧತೆ; ಅರಣ್ಯ ಇಲಾಖೆ ದಾಳಿ..!!

ಶಿಕಾರಿಪುರ/ಕಾಡು ಹಂದಿ ಮಾಂಸ ಮಾರಾಟಕ್ಕೆ ಸಿದ್ಧತೆ; ಅರಣ್ಯ ಇಲಾಖೆ ದಾಳಿ..!!

41
0

✒️..ಅಮಿತ್ ಆರ್ ಆನಂದಪುರ

ಶಿಕಾರಿಪುರ: ಅಕ್ರಮವಾಗಿ ಕಾಡು ಹಂದಿಯನ್ನು ಬೇಟೆಯಾಡಿ ಅದರ ಮಾಂಸವನ್ನು ಮನೆಯಲ್ಲಿ ಸಂಗ್ರಹಿಸಿ ಮಾರಾಟಕ್ಕೆ ಸಿದ್ಧತೆ ನಡೆಸುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಬಂಧಿಸಿರುವ ಘಟನೆ ತಾಲ್ಲೂಕಿನ ಗಾಮ ಗ್ರಾಮದಲ್ಲಿ ನಡೆದಿದೆ.

ಗಾಮ ಗ್ರಾಮದ ನಿವಾಸಿ ಕುಮಾರ ಬಂಧಿತ ಆರೋಪಿಯಾಗಿದ್ದು, ಈತನಿಂದ 27 ಕೆ.ಜಿ. ಕಾಡು ಹಂದಿಯ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಕೃತ್ಯಕ್ಕೆ ಬಳಸಲಾಗಿದ್ದ ಕತ್ತಿ, ಮಚ್ಚು ಹಾಗೂ ತಕ್ಕಡಿಯನ್ನೂ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಶಿಕಾರಿಪುರ ಉಪವಿಭಾಗದ ಅಂಬ್ಲಿಗೊಳ ವಲಯ ಅರಣ್ಯಾಧಿಕಾರಿ (RFO) ಶಾಂತಪ್ಪ ಪೂಜಾರ್ ಅವರ ನೇತೃತ್ವದಲ್ಲಿ, ಉಪ ವಲಯ ಅರಣ್ಯಾಧಿಕಾರಿಗಳಾದ (DRFO) ಅಬ್ದುಲ್ ಕರೀಮ್ ಹಾಗೂ ಅಮಿತ್, ಗಸ್ತು ಅರಣ್ಯ ಪಾಲಕರಾದ ಕೃಷ್ಣಮೂರ್ತಿ, ಸುರೇಶ್ ಮತ್ತು ಚಂದ್ರಪ್ಪ ಲಮಾಣಿ ಅವರನ್ನೊಳಗೊಂಡ ತಂಡ ದಾಳಿ ನಡೆಸಿತು.

ಈ ಸಂಬಂಧ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆಯನ್ನು ಅರಣ್ಯ ಇಲಾಖೆ ಕೈಗೊಂಡಿದೆ.

ಜಾಹೀರಾತು