Home Shivamogga Sagara ಹರಿದು ಹೋಗುತ್ತಿದ್ದ ಮಳೆನೀರು ಗಾಣಿಗನ ಕೆರೆಗೆ; ನಾಗರಾಜ್ ದಾಸಕೊಪ್ಪ ಜನಪರ ಕಾರ್ಯಕ್ಕೆ ಮೆಚ್ಚುಗೆ..!!

ಹರಿದು ಹೋಗುತ್ತಿದ್ದ ಮಳೆನೀರು ಗಾಣಿಗನ ಕೆರೆಗೆ; ನಾಗರಾಜ್ ದಾಸಕೊಪ್ಪ ಜನಪರ ಕಾರ್ಯಕ್ಕೆ ಮೆಚ್ಚುಗೆ..!!

28
0

ಸಾಗರ: ತಾಲೂಕಿನ ಆನಂದಪುರ ಸಮೀಪದ ದಾಸಕೊಪ್ಪದ ಗಾಣಿಗನ ಕೆರೆಗೆ, ಕಾಲುವೆ ಮೂಲಕ ಅಂಬ್ಲಿಗೋಳ ಡ್ಯಾಂ ಕಡೆ ಹರಿದು ಹೋಗುತ್ತಿದ್ದ ಮಳೆನೀರನ್ನು ವ್ಯರ್ಥವಾಗಿ ಹೊರಹೋಗದಂತೆ ತಡೆಗಟ್ಟಿ ಕೆರೆಗೆ ಹರಿಸಲಾಗಿದೆ. ಈ ಕಾರ್ಯಕ್ಕೆ ಸ್ಥಳೀಯರಾದ ನಾಗರಾಜ್ ದಾಸಕೊಪ್ಪ ಅವರು ಸಹಕಾರ ನೀಡಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಲಭ್ಯವಿರುವ ಮಳೆನೀರನ್ನು ಸಮರ್ಪಕವಾಗಿ ಸಂರಕ್ಷಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಗಾಣಿಗನ ಕೆರೆ ಶೀಘ್ರ ಭರ್ತಿಯಾಗುವ ನಿರೀಕ್ಷೆಯಿದ್ದು, ಸುತ್ತಮುತ್ತಲಿನ ಪ್ರದೇಶದ ನೀರಿನ ಲಭ್ಯತೆಗೆ ಸಹಕಾರಿಯಾಗಲಿದೆ ಎಂದು ನಾಗರಾಜ್ ದಾಸಕೊಪ್ಪ ತಿಳಿಸಿದರು.

ಮಳೆನೀರನ್ನು ವ್ಯರ್ಥವಾಗದಂತೆ ತಡೆದು ಸ್ಥಳೀಯ ಜಲಮೂಲಗಳಿಗೆ ಹರಿಸುವ ಈ ಪ್ರಯತ್ನ ಜಲಸಂಪನ್ಮೂಲ ಸಂರಕ್ಷಣೆಯ ದೃಷ್ಟಿಯಿಂದ ಮಹತ್ವದ್ದಾಗಿದ್ದು, ಇಂತಹ ಜನಪರ ಕಾರ್ಯಗಳು ಇತರ ಪ್ರದೇಶಗಳಿಗೂ ಮಾದರಿಯಾಗಲಿ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ನವೀನ್,ದರ್ಶನ್,ಸುದೀಪ್ ಮತ್ತು ರಾಜಣ್ಣ ಪಾಲ್ಗೊಂಡಿದ್ದರು.

ಜಾಹೀರಾತು