Home Blog ಜ್ಞಾನಕ್ಕೆ ವಿರೋಧವಿಲ್ಲ, ವೈವಿಧ್ಯತೆಯಲ್ಲೇ ಏಕತೆ: ಬಿದರಹಳ್ಳಿ ನರಸಿಂಹಮೂರ್ತಿ..!!

ಜ್ಞಾನಕ್ಕೆ ವಿರೋಧವಿಲ್ಲ, ವೈವಿಧ್ಯತೆಯಲ್ಲೇ ಏಕತೆ: ಬಿದರಹಳ್ಳಿ ನರಸಿಂಹಮೂರ್ತಿ..!!

33
0

ಶಿಕಾರಿಪುರ: ಜ್ಞಾನದ ವೈವಿಧ್ಯತೆ ತಾರ್ಕಿಕ ವಿರೋಧ, ವಿಶ್ಲೇಷಣೆ ಮತ್ತು ಸಂಶ್ಲೇಷಣೆಗಳ ಮೂಲಕ ಒಂದಾಗುತ್ತದೆ. ಯಾವುದೇ ಜ್ಞಾನ ಪರಸ್ಪರ ವಿರುದ್ಧವಾಗಿರುವುದಿಲ್ಲ ಎಂದು ಖ್ಯಾತ ಸಾಹಿತಿ ಬಿದರಹಳ್ಳಿ ನರಸಿಂಹಮೂರ್ತಿ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಮಾಲಿಕೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಕಾಲೇಜಿನ ಮಾಸಿಕ e-ಕುಮುದ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಈ ಪತ್ರಿಕೆಯಲ್ಲಿ ಕಾಲೇಜಿನಲ್ಲಿ ಪ್ರತಿ ತಿಂಗಳು ನಡೆದ ಕಾರ್ಯಕ್ರಮಗಳ ವರದಿಗಳು, ಪ್ರಕಟಣೆಗಳು, ಅಧ್ಯಾಪಕರ ಲೇಖನಗಳು ಹಾಗೂ ವಿದ್ಯಾರ್ಥಿಗಳ ಸೃಜನಶೀಲ ಬರಹಗಳಿಗೆ ಸ್ಥಾನ ಕಲ್ಪಿಸಲಾಗಿದೆ.

ಬಳಿಕ ಕಾಲೇಜಿನ ಐಕ್ಯೂಎಸಿ, ಕನ್ನಡ ಹಾಗೂ ಇಂಗ್ಲಿಷ್ ವಿಭಾಗಗಳ ಸಹಯೋಗದಲ್ಲಿ ಐಚ್ಛಿಕ ಕನ್ನಡ ಮತ್ತು ಇಂಗ್ಲಿಷ್ ವಿದ್ಯಾರ್ಥಿಗಳಿಗಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಮೊದಲ ಅವಧಿಯಲ್ಲಿ ಖ್ಯಾತ ಸಾಹಿತಿ ಹಾಗೂ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಸಬಿತಾ ಬನ್ನಾಡಿ ಅವರು “ಕನ್ನಡ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ” ವಿಷಯದ ಕುರಿತು ಉಪನ್ಯಾಸ ನೀಡಿದರು. ಎರಡನೇ ಅವಧಿಯಲ್ಲಿ ಶಿವಮೊಗ್ಗದ ಡಿವಿಎಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಗೌರಿಶಂಕರ್ ಅವರು “ಷೇಕ್ಸ್‌ಪಿಯರ್ ಸಾಹಿತ್ಯ ಮತ್ತು ಇಂಗ್ಲಿಷ್ ಬಳಕೆ” ವಿಷಯದ ಕುರಿತು ಉಪನ್ಯಾಸ ನೀಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಜಿ. ಚನ್ನಪ್ಪ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಚಾಲಕ ಡಾ. ಹರೀಶ್ ವಿ., ಪ್ರಾಧ್ಯಾಪಕರಾದ ಲಿಂಗರಾಜು ಎಂ.ಸಿ., ಮಲ್ಲಿಕಾರ್ಜುನಪ್ಪ ಎನ್.ಎಸ್., ನವೀನ ಎಚ್.ಜೆ., ದೇವರಾಜ ಸಿ. ಪಾಟೀಲ್ ಹಾಗೂ ಶಿವರುದ್ರಪ್ಪ ಡಿ. ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಹುಚ್ಚರಾಯಪ್ಪ ನಿರೂಪಿಸಿದರು. ಕೃಷ್ಣಪ್ಪ ಬಡಿಗೇರ್ ವಂದಿಸಿದರು.

ಜಾಹೀರಾತು