Home Blog ಹಾಲಪ್ಪನಿಗೆ ಕೆಲಸವಿಲ್ಲ, ಅದಕ್ಕೇ ಬೇಕಾಬಿಟ್ಟಿ ಹೇಳಿಕೆ: ಬೇಳೂರು ವಾಗ್ದಾಳಿ..!!

ಹಾಲಪ್ಪನಿಗೆ ಕೆಲಸವಿಲ್ಲ, ಅದಕ್ಕೇ ಬೇಕಾಬಿಟ್ಟಿ ಹೇಳಿಕೆ: ಬೇಳೂರು ವಾಗ್ದಾಳಿ..!!

38
0

ಆನಂದಪುರ: ಹಾಲಪ್ಪನಿಗೆ ಯಾವುದೇ ಕೆಲಸವಿಲ್ಲದೆ ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪಿಸಿದರು.

ಅವರು ಇತ್ತೀಚಿಗೆ ಬೈಕ್ ಅಪಘಾತದಲ್ಲಿ ಮೃತಪಟ್ಟಂತಹ ಗೌತಮಪುರ ಗ್ರಾಮದ ಮಂಜುನಾಥ್ ಬಿನ್ ಚೌಡಪ್ಪ ಅವರ ಪುತ್ರ ಮಿಲನ್ ಅವರ ಮನೆಗೆ ತೆರಳಿ ಸಾಂತ್ವನ ಸೂಚಿಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿ, 2028ರಲ್ಲಿಯೂ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರುವ ಛಲ ನಮ್ಮ ಮುಖ್ಯಮಂತ್ರಿಯವರಿಗಿದೆ. ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಕೆಲಸ ಮಾಡಲಾಗುತ್ತಿದ್ದು, ಅವರನ್ನು ಬಿಟ್ಟು ನಾವು ಹೋಗುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಪಕ್ಷದಲ್ಲಿ ಆಂತರಿಕ ಗೊಂದಲ ಉಂಟಾಗಿದ್ದು, ಆ ಪಕ್ಷದ ನಾಯಕರಿಗೆ ನೆಮ್ಮದಿಯೇ ಇಲ್ಲ. ಯಾರು ಯಾರೊಂದಿಗೆ ಇದ್ದಾರೆ ಎಂಬುದೇ ಸ್ಪಷ್ಟವಾಗದ ಪರಿಸ್ಥಿತಿ ಬಿಜೆಪಿಯಲ್ಲಿದೆ. ಹೀಗಾಗಿ ಹಾಲಪ್ಪನವರು ಕೆಲಸವಿಲ್ಲದೆ ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಬೇಳೂರು ಟೀಕಿಸಿದರು.

ಆರ್‌ಎಸ್‌ಎಸ್‌ ಬಗ್ಗೆ ನನಗೆ ಗೌರವವಿದೆ.

ಆರ್‌ಎಸ್‌ಎಸ್‌ನವರು ಕೂಡ ನಾನು ಮಂತ್ರಿಯಾಗಬೇಕು ಎಂದು ಹೇಳಿದ್ದ ಸಂದರ್ಭಗಳಿವೆ. ಆದರೆ ಅವರ ಮನಸ್ಥಿತಿ ಈ ರೀತಿಯಾಗಿರಲಿಲ್ಲ. ಹಾಲಪ್ಪನವರು ಹಿಂದೆ ಸಿದ್ದರಾಮಯ್ಯ ಅವರ ಕಾಲು ಹಿಡಿದುಕೊಂಡಿದ್ದರು. ಬಳಿಕ ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಅವರು ‘ಹಾಗೆಲ್ಲ ಮಾಡಬೇಡ, ಬಾ’ ಎಂದು ಹೇಳಿದ ನಂತರ ಬಿಜೆಪಿಗೆ ಬಂದವರು ಎಂದು ಬೇಳೂರು ಆರೋಪಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ಜಾಹೀರಾತು