Home Shivamogga Sagara ವಿದ್ಯಾರ್ಥಿಗಳಿಗೆ ಸ್ವಂತ ವೆಚ್ಚದಲ್ಲಿ ಸಮವಸ್ತ್ರ ವಿತರಿಸಿದ ನಿವೃತ್ತ ಶಿಕ್ಷಕ ಎಲಿಗಾರ್..!!

ವಿದ್ಯಾರ್ಥಿಗಳಿಗೆ ಸ್ವಂತ ವೆಚ್ಚದಲ್ಲಿ ಸಮವಸ್ತ್ರ ವಿತರಿಸಿದ ನಿವೃತ್ತ ಶಿಕ್ಷಕ ಎಲಿಗಾರ್..!!

23
0

ಸಾಗರ: ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸ್ವಂತ ವೆಚ್ಚದಲ್ಲಿ ಸಮವಸ್ತ್ರ, ಬೆಲ್ಟ್ ಸೇರಿದಂತೆ ಅಗತ್ಯ ವಸ್ತುಗಳನ್ನು ಶಿವಮೊಗ್ಗದ ಸಮಾಜ ಸೇವಕ ಹಾಗೂ ನಿವೃತ್ತ ಶಿಕ್ಷಕ ಮಹೇಶ್ ಎಲಿಗಾರ್ ವಿತರಿಸಿದರು.

ಸಾಗರ ತಾಲೂಕಿನ ನರಸೀಪುರ ಸರ್ಕಾರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಇತರೆ ವಸ್ತುಗಳನ್ನು ವಿತರಿಸಲಾಯಿತು.

ಈ ಹಿಂದೆ ಇದೇ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದ ಮಹೇಶ್ ಎಲಿಗಾರ್, ಶಾಲೆಯೊಂದಿಗಿನ ಆತ್ಮೀಯ ಸಂಬಂಧದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಕೈಲಾದ ನೆರವು ನೀಡುವ ಉದ್ದೇಶದಿಂದ ಈ ಸೇವಾ ಕಾರ್ಯ ಕೈಗೊಂಡಿದ್ದಾರೆ. ಈ ಕಾರ್ಯಕ್ಕೆ ತಮ್ಮ ಪತ್ನಿ ಹಾಗೂ ಶಿಕ್ಷಕಿ ಶಕುಂತಲಾ ಅವರು ಸಹಕಾರ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಜೇಶ್ ಎನ್.ಎಚ್., ಉಪಾಧ್ಯಕ್ಷ ಮಂಜುನಾಥ್ ಎನ್.ಎಂ., ಮುಖ್ಯೋಪಾಧ್ಯಾಯ ಹೊಸೂರಪ್ಪ ಪಿ.ಟಿ., ಸಹ ಶಿಕ್ಷಕಿ ಜ್ಯೋತಿ ಎಸ್., ಡಿಎಂಸಿ ಸದಸ್ಯರಾದ ಲಕ್ಷ್ಮಣ್, ಚಂದ್ರಶೇಖರ್, ಲೋಕೇಶ್, ಲೋಹಿತ್ ಕುಮಾರ್, ಸಂತೋಷ್, ಕುಸುಮ ಮಾಕನಕಟ್ಟೆ, ಪ್ರಮುಖರಾದ ಧರ್ಮಪ್ಪ ತಳಗೇರಿ, ನಾಗರಾಜ ತಳಗೇರಿ, ಸೋಮಪ್ಪ, ಕೆರಿಯಪ್ಪ, ಈರಮ್ಮ ದೇವಾಡಿಗ, ಗೀತಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.