ಮನೆ Blog ಪೋಕ್ಸೋ ಕಾಯ್ದೆಯ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸಬೇಕು :ಕಲೀಮ್ ಉಲ್ಲಾಖಾನ್

ಪೋಕ್ಸೋ ಕಾಯ್ದೆಯ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸಬೇಕು :ಕಲೀಮ್ ಉಲ್ಲಾಖಾನ್

132
0
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.40601853, 0.5275415);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 45;

ಆನಂದಪುರ:

ಈ ದೇಶದಲ್ಲಿ ಹುಟ್ಟಿದಂತಹ ಪ್ರತಿಯೊಬ್ಬ ಮಗುವಿಗೂ ಸಹ ಅವರದೇ ಆದ ಹಕ್ಕು ಬಾಧ್ಯತೆಗಳು ಇರುತ್ತದೆ ಇದನ್ನು ಮಕ್ಕಳಿಗೆ ಶಾಲಾ ಹಂತದಿಂದಲೇ ತಿಳಿಯಪಡಿಸಿ ಸದೃಢ ವ್ಯಕ್ತಿಗಳಾಗಿ ಮಾಡಬೇಕು ಎಂದು ಆಚಾಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕಲೀಮ್ ಉಲ್ಲಾಖಾನ್ ತಿಳಿಸಿದರು.

ಇವರು ಆಚಾಪುರ ಗ್ರಾಮ ಪಂಚಾಯತ್ ಅಡಿಯಲ್ಲಿ ಹಮ್ಮಿಕೊಂಡಿದ್ದಂತಹ ಮಹಿಳಾ ಗ್ರಾಮ ಸಭೆ ಹಾಗೂ ಮಕ್ಕಳ ಗ್ರಾಮ ಸಭೆ ಕುರಿತು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಪೋಕ್ಸೋ ಪ್ರಕರಣಗಳು ಶಿವಮೊಗ್ಗ ಜಿಲ್ಲಾದ್ಯಂತ ಹೆಚ್ಚಾಗುತ್ತಿದ್ದು ಇದರ ಬಗೆಗೆ ಹೆಚ್ಚು ಶಾಲಾ ಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮಗಳು ಮಾಡುವುದು ಅಗತ್ಯವಾಗಿದೆ.ಚಿಕ್ಕ ವಯಸ್ಸಿನಲ್ಲಿಯೇ ಶಾಲೆಯನ್ನು ತೊರೆದು ಕೆಲಸ ಕಾರ್ಯಗಳಲ್ಲಿ ತೊಡಗುವ ವಿದ್ಯಾರ್ಥಿಗಳ ಮನವಲಿಸಿ ಶಾಲೆಗೆ ಪುನಃ ಕರೆ ತರಲು ಪೋಷಕರು ಸಹ ಕೈ ಜೋಡಿಸಬೇಕು.

ಪ್ರಮುಖವಾಗಿ ವಿದ್ಯಾರ್ಥಿಗಳು ತಿಳಿಯದ ಯಶಸ್ಸಿನಯಿಯೇ ಪೋಷಕರು ಬಾಲ್ಯ ವಿವಾಹ ಮಾಡಲು ಮುಂದಾಗುತ್ತ ಇದ್ದಾರೆ ದಯವಿಟ್ಟು ಇಂತಹ ಕೆಲಸ ಯಾರು ಮಾಡಬೇಡಿ ಒಂದು ವೇಳೆ ಮಾಡಿದರೆ ಇದು ಕಾನೂನು ಬಾಹಿರವಾದದ್ದು, ಕಠಿಣ ಶಿಕ್ಷೆಗೆ ಗುರಿಯಾಗುತ್ತಿರಿ ಎಂದು ತಿಳಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಪ್ರಮುಖರಾದ ಶಾಂತ ಮಾತನಾಡಿ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಲೈಂಗಿಕ ದೌರ್ಜನ್ಯ ಆಗುತ್ತಿದ್ದು. ವಿದ್ಯಾರ್ಥಿಗಳು ಬಹಳ ಎಚ್ಚರಿಕೆ ಇಂದ ಇರಬೇಕು ಹಾಗೆ ಪೋಷಕರ ಸಹ ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಜಾಗೃತಿಯನ್ನು ವಹಿಸಬೇಕು ಎಂದು ಸಲಹೆ ನೀಡಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜಪ್ಪ ಮಾತನಾಡಿ ವಿದ್ಯಾರ್ಥಿಗಳು ತಮಗೆ ಯಾವುದೇ ಸಮಯದಲ್ಲಾದರೂ ರಕ್ಷಣೆ ಬೇಕಾದಲ್ಲಿ 1098 ಮಕ್ಕಳ ಸಹಾಯವಾಣಿಗೆ ಕರೆ ಮಾಡಬಹುದು ನಾವು ತಕ್ಷಣ ನಿಮ್ಮ ಕರೆಗೆ ಸ್ಪಂದಿಸಿ ನಿಮ್ಮಗೆ ನೆರವಾಗುತ್ತಿವೆ ಎಂದರು.

ಸಭೆಯಲ್ಲಿ ಉಪಾಧ್ಯಕ್ಷರಾದ ನಾಗರತ್ನಮ್ಮ ಸದಸ್ಯರಾದ ಪ್ರಕಾಶ್, ಬಸವರಾಜು ಹಾಗೂ ಮಕ್ಕಳ ಸಭೆಯ ಅಧ್ಯಕ್ಷರಾದ ತಸ್ಮೀಯ, ಸಿಂಚನ,ಬಿಂದು, ಗೌತಮಿ ,ಅಭಯ್ ಯಮುನಾ, ವರ್ಷಿಣಿ, ಸುಮಯ ವಿದ್ಯಾ ,ಅನುಪ್ ,ಗೌತಮಿ ,ಚಂದನ, ಹಾಗೂ ಸಿಎಚ್ಒ ನೂತನ , ಶಿಶು ಅಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕರಾದ ವನಜಾಕ್ಷಿ.ಗ್ರಾಮ ಪಂಚಾಯತಿಯ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು, ಶಾಲೆಯ ಶಿಕ್ಷಕರು ಮತ್ತು ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು.

ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ: https://chat.whatsapp.com/CnYYumPSez6AMYyw8cHG9A?mode=ac_t