
ಆನಂದಪುರ:
ಮಲೆನಾಡಿನಲ್ಲಿ ಎಲೆ ಚುಕ್ಕಿ ರೋಗ ಹಾಗೂ ಅಡಿಕೆಗೆ ಕೊಳೆ ರೋಗುವು ವ್ಯಾಪಕವಾಗಿ ಹರಡುತ್ತಿದ್ದು ಇದರಿಂದ ರೈತರು ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದಾರೆ ಇದಕ್ಕೆ ಸೂಕ್ತ ಪರಿಹಾರವನ್ನು ಕೃಷಿ ವಿಜ್ಞಾನಿಗಳು ಕಂಡು ಹಿಡಿಯಬೇಕು ಎಂದು ಶಾಸಕರಾದ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇವರು ಇರುವಕ್ಕಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ 13ನೇ ಸಂಸ್ಥಾಪನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಈ ಬಾರಿ ಮಲೆನಾಡಿನಲ್ಲಿ ಸುರಿದ ಅಧಿಕ ಮಳೆಯಿಂದ ಎಲೆ ಚುಕ್ಕಿ ರೋಗ ಮತ್ತು ಅಡಿಕೆ ಕೊಳೆ ರೋಗವು ಬಾಧಿಸುತ್ತಿದೆ ಇದರಿಂದ ರೈತರು ಆರ್ಥಿಕವಾಗಿ ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಿದ್ದು ಇದಕ್ಕೆ ರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದ ನುರಿತ ವಿಜ್ಞಾನಿಗಳ ಕರೆಸಿ ಈ ರೋಗಗಳಿಗೆ ಸೂಕ್ತ ಪರಿಹಾರವನ್ನು ಕಂಡುಹಿಡಿಯಬೇಕು.
ಕೃಷಿ ವಿದ್ಯಾರ್ಥಿಗಳು ತಂತ್ರಜ್ಞಾನಗಳ ಮೂಲಕ ಹೊಸ ಹೊಸ ಆವಿಷ್ಕಾರ ಮಾಡಿ ರೈತರಿಗೆ ಸೂಕ್ತ ಮಾರ್ಗದರ್ಶನವನ್ನು ನೀಡುವುದರ ಮೂಲಕ ರೈತರಿಗೆ ಸಹಕಾರಿಯಾಗಿ ಎಂದು ತಿಳಿಸಿದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಕುಲಪತಿ ಡಾ.ಆರ್.ಸಿ.ಜಗದೀಶ್ ಮಾತನಾಡಿ ರೈತರಿಗೆ ಸೂಕ್ತ ವಾದ ತರಬೇತಿಯನ್ನು ವಿವಿಯಲ್ಲಿ ಕೊಡಲಾಗುತ್ತಿದೆ ಹಾಗೂ ಈ ಬಾರಿ ವಿಶೇಷವಾಗಿ ಸಹ್ಯಾದ್ರಿ ಸಿರಿ, ಸಹ್ಯಾದ್ರಿ ಪ್ರಗತಿ ಎಂಬ ಹೊಸತಳಿಯ ಬತ್ತವನ್ನು ರೈತರಿಗೆ ಪರಿಚಯಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹೂವಯ್ಯ ಗೌಡ ವಿಶೇಷ ಉಪನ್ಯಾಸ ನೀಡಿದರು.ಈ ಸಂದರ್ಭದಲ್ಲಿ ಸಾಗರ ಉಪವಿಭಾಗಾಧಿಕಾರಿ ವೀರೇಶ್ ಕುಮಾರ್, ಡಾ.ಬಿ.ಕೆ.ಕುಮಾರಸ್ವಾಮಿ, ಜೆ.ಜಿ.ಕಾವೇರಪ್ಪ, ಎಚ್.ಡಿ.ದೇವಿ ໖. ಕುಮಾರ್, ಎಚ್.ಎಸ್.ಶಶಾಂಕ್, ಡಾ. ಹೇಮ್ಲಾನಾಯ್ಕ, ಡಾ.ಬಿ.ಎಂ. ದುಶಾಂತ್ , ಡಾ.ಜಿ.ಕೆ. ಗಿರಿಜೇಶ್, ಡಾ.ಶಶಿಧರ್, ಡಾ.ಶಿವಣ್ಣ, ಡಾ.ಶ್ರೀನಿವಾಸ್, ಸುಧೀರ್‌ಕಾಮತ್, ಡಾ.ತಿಪ್ಪೇಶ್ ಇತರರಿದ್ದರು.
ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t








