Home Blog ನರಸೀಪುರದ ಕಿರಣ್ ಕುಮಾರ್ ಅವರಿಗೆ ಕುವೆಂಪು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್..!!

ನರಸೀಪುರದ ಕಿರಣ್ ಕುಮಾರ್ ಅವರಿಗೆ ಕುವೆಂಪು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್..!!

32
0

✒️.. ಅಮಿತ್ ಆರ್ ಆನಂದಪುರ

ಶಿವಮೊಗ್ಗ : ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದ ನರಸೀಪುರ ಗ್ರಾಮದ ಯೋಮಕೇಶ್ (ಗೌತಮಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು) ಹಾಗೂ ಇಂದಿರಾ ದಂಪತಿಯ ಪುತ್ರ, ಶಿರಸಿಯ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಕಿರಣ್ ಕುಮಾರ್ ಅವರು ಕುವೆಂಪು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ.

ಕುವೆಂಪು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದಲ್ಲಿ ಡಾ. ಗಜಾನನ ಪ್ರಭು ಅವರ ಮಾರ್ಗದರ್ಶನದಲ್ಲಿ “A Study on Effects of Sports Massage During Pre and Post Performance Situation on Selected Performance Variables of Competitive Runners” ಎಂಬ ವಿಷಯದ ಕುರಿತು ಸಂಶೋಧನೆ ನಡೆಸಿ ಈ ಪದವಿಗೆ ಭಾಜನರಾಗಿದ್ದಾರೆ.

ಕ್ರೀಡಾ ಮಸಾಜ್‌ ಪ್ರಕ್ರಿಯೆಯು ಸ್ಪರ್ಧಾತ್ಮಕ ಓಟಗಾರರ ಪ್ರದರ್ಶನದ ಪೂರ್ವ ಮತ್ತು ನಂತರದ ಆಯ್ದ ಕಾರ್ಯಕ್ಷಮತಾ ಅಂಶಗಳ ಮೇಲೆ ಬೀರುವ ಪರಿಣಾಮಗಳ ಕುರಿತು ಅವರು ಸಂಶೋಧನೆ ಕೈಗೊಂಡಿದ್ದರು.