ಮನೆ ಶಿವಮೊಗ್ಗ ಅನುಮಾನಾಸ್ಪದವಾಗಿ ಮೃತದೇಹ ಪತ್ತೆ. ಸಾಮಾಜಿಕ ಜಾಲತಾಣ ನೋಡಿ ಬಂದ ಸಂಬಂಧಿಕರು.

ಅನುಮಾನಾಸ್ಪದವಾಗಿ ಮೃತದೇಹ ಪತ್ತೆ. ಸಾಮಾಜಿಕ ಜಾಲತಾಣ ನೋಡಿ ಬಂದ ಸಂಬಂಧಿಕರು.

73
0

ಆನಂದಪುರ:ಆನಂದಪುರದ ಮೀನು ಮಾರುಕಟ್ಟೆಯ ಮುಂಭಾಗದಲ್ಲಿನ ಪಾಳು ಬಿದ್ದ ಮನೆಯೊಂದರಲ್ಲಿ ಅನುಮಾನಾಸ್ಪದವಾಗಿ ಒಂದು ಮೃತ ದೇಹ ಪತ್ತೆ ಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ನೋಡಿ ಸಂಬಂಧಿಕರು ಸ್ಥಳಕ್ಕೆ ಧಾವಿಸಿದ್ದಾರೆ.

ಮೃತರಾದ ನಸ್ರುಲ್ಲಾ (49) ತಂದೆ ಬಾಬಾ ಜಾನ್ ಅವರು ಶಿವಮೊಗ್ಗದ ಬಾಪೂಜಿನಗರದ ನಿವಾಸಿಯಾಗಿದ್ದು.ನಸ್ರುಲ್ಲಾ 16 ವರ್ಷದವನಿದ್ದಾಗಿನಿಂದಲೂ ಮಾನಸಿಕವಾಗಿ ಅಸ್ವಸ್ಥನಾಗಿದ್ದು ಚಿಕಿತ್ಸೆ ಕೊಡಿಸಿದರು ಗುಣಮುಖ ರಾಗಿರುವುದಿಲ್ಲ.

ಇದರಿಂದ ಸರಿಯಾಗಿ ಮನೆಯಲ್ಲಿ ಇರದೆ ಊರೂರು ಸುತ್ತುತ್ತ ಅವರಿವರು ಕೊಟ್ಟದ್ದು ತಿನ್ನುತ್ತಾ ಬದುಕು ಸಾಗಿಸುತ್ತಿದ್ದು ಈ ಸಮಯದಲ್ಲಿ ಅನಾರೋಗ್ಯ ಅಥವಾ ಹೃದಯಘಾತದಿಂದ ಮೃತ ಪಟ್ಟಿರಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮೃತದೇಹವು ಅರೆ ಬರೆಯಲ್ಲಿ ಕೊಳೆತ ಸ್ಥಿತಿಯಲ್ಲಿದ್ದು 2 ದಿನದ ಹಿಂದೆಯೇ ಸಾವನಪ್ಪಿರಬೇಕು ಎಂದು ಅಂದಾಜಿಸಲಾಗಿರುತ್ತದೆ.

ಈ ಕುರಿತು ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t