Home Blog ಮಲೆನಾಡಲ್ಲಿ ಮಂಗನಕಾಯಿಲೆ ಉಲ್ಬಣ/ಜನರಿಗೆ ಹೆಚ್ಚಿದ ಆತಂಕ..!!

ಮಲೆನಾಡಲ್ಲಿ ಮಂಗನಕಾಯಿಲೆ ಉಲ್ಬಣ/ಜನರಿಗೆ ಹೆಚ್ಚಿದ ಆತಂಕ..!!

155
0

ಶಿವಮೊಗ್ಗ: ಮಂಗನ ಕಾಯಿಲೆ (ಕೆಎಫ್‌ಡಿ) ಈ ಬಾರಿದೊಡ್ಡ ಪ್ರಮಾಣದಲ್ಲಿ ಸ್ಫೋಟವಾಗುವ ಮನ್ಸೂಚನೆ ನೀಡಿದೆ. ಕಳೆದ ವಾರ ಹೊಸನಗರ ತಾಲೂಕಿನ ಬಿಳ್ಳೋಡಿ ಗ್ರಾಮದಲ್ಲಿ 55 ವರ್ಷದ ಮಹಿಳೆಯಲ್ಲಿ ಕಾಣಿಸಿಕೊಂಡಿತ್ತು. ಆರೋಗ್ಯ ಇಲಾಖೆ ಅದೇ ಊರಿನ ಮತ್ತಷ್ಟು ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಇನ್ನೂ ನಾಲ್ವರಿಗೆ ಪಾಸಿಟಿವ್ ಬಂದಿದೆ.

ಬಿಳ್ಳೂಡಿ ಗ್ರಾಮದಲ್ಲಿ ಪಾಸಿಟಿವ್ ಬಂದಿರುವ ಐವರಲ್ಲಿ ನಾಲ್ವರು ಮಹಿಳೆಯರು, ಓರ್ವ ಪುರುಷ ಇದ್ದು ಎಲ್ಲರೂ ಆರೋಗ್ಯವಾಗಿದ್ದಾರೆ. ಜನವರಿ ಆರಂಭದಲ್ಲಿ ಹೆಚ್ಚಿನ ಪಾಸಿಟಿವ್‌ ಪ್ರಕರಣಗಳು ಕಂಡುಬರುತ್ತಿದ್ದವು. ಈ ಬಾರಿ ನವೆಂಬರ್‌ನಿಂದಲೇ ಸರ್ವೇಕ್ಷಣೆ ಆರಂಭಿಸಿರುವುದರಿಂದ ಆರೋಗ್ಯ ಇಲಾಖೆ ನಿರೀಕ್ಷೆ ಮಾಡದ ರೀತಿಯಲ್ಲಿ ಪಾಸಿಟಿವ್‌ ಪ್ರಕರಣಗಳು ಕಂಡುಬಂದಿವೆ. ಮಂಗನ ಕಾಯಿಲೆಗೆ ಲಸಿಕೆ ನಿಲ್ಲಿಸಿ ಮೂರು ವರ್ಷ ಕಳೆದಿದ್ದು ಆರೋಗ್ಯ ಇಲಾಖೆ ಹೆಚ್ಚಿನ ನಿಗಾ ವಹಿಸಿದೆ.

ಎಷ್ಟೋ ಕಡೆ ಉಣುಗು, ಸತ್ತ ಮಂಗಗಳಲ್ಲಿ ಪಾಸಿಟಿವ್‌ ಕಂಡುಬರದೇ ಇದ್ದರೂ ಮನುಷ್ಯರಿಗೆ ಪಾಸಿಟಿವ್ ಬಂದಿದೆ. ಇದಲ್ಲದೇ ಚಿಕ್ಕಮಗಳೂರು ಜಿಲ್ಲೆಯ ಗಡಿಭಾಗದ ಕೊಪ್ಪ ತಾಲೂಕಿನ ಕಮ್ಮರಡಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಪಾಸಿಟಿವ್ ಬಂದಿದೆ. ಇದು ಚಿಕ್ಕಮಗಳೂರು ಜಿಲ್ಲೆಯ ಮೊದಲ ಪ್ರಕರಣವಾಗಿದೆ.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t