Home Blog ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲಿ ಸಾಗರಕ್ಕೆ ಎರಡನೇ ಸ್ಥಾನ..!!

ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲಿ ಸಾಗರಕ್ಕೆ ಎರಡನೇ ಸ್ಥಾನ..!!

3
0

✒️..ಅಮಿತ್ ಆರ್ ಆನಂದಪುರ

ಸಾಗರ:ಏ-23/ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಯಲ್ಲಿ ಎರಡನೇ ಸ್ಥಾನ ಬಂದಿದ್ದು ಒಟ್ಟು 2919 ವಿದ್ಯಾರ್ಥಿಗಲ್ಲಿ 1489ಗಂಡು, 1430 ಹೆಣ್ಣು ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು ಇದರಲ್ಲಿ 2890 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಅದರಲ್ಲಿ 1472ಗಂಡು ಹಾಗೂ 1420 ಹೆಣ್ಣು ಉತ್ತೀರ್ಣರಾಗಿದ್ದು ತಾಲ್ಲೂಕಿನಲ್ಲಿ ಕೇವಲ 27 ವಿದ್ಯಾರ್ಥಿಗಳು ಮಾತ್ರ ಅನುತ್ತೀರ್ಣರಾಗಿರುತ್ತಾರೆ.

ಈ ವರ್ಷ ಫಲಿತಾಂಶ 99.36% ದಾಖಲಾಗಿದ್ದು ಕಳೆದ ಬಾರಿಯ ಫಲಿತಾಂಶ 92 ಬಂದಿದ್ದು ಶೇಖಡ 7% ಹೆಚ್ಚಾಗಿರುತ್ತದೆ.

ಶೇಕಡ ನೂರರಷ್ಟು ಫಲಿತಾಂಶ ಬಂದ ಶಾಲೆಗಳು:


ಸರ್ಕಾರಿ ಪ್ರೌಢಶಾಲೆಗಳು : 21ರಲ್ಲಿ 11 ಶಾಲೆಗಳು ನೂರು ಫಲಿತಾಂಶ ದಾಖಲಿಸಿವೆ, ಆರ್.ಎಂ.ಎಸ್.ಎ ಉರ್ದು, ಬರೂರು, ಆವಿನಹಳ್ಳಿ, ನಾಗವಳ್ಳಿ, ಬಿಳಿಗಾರು, ಹುಲಿದೇವರಬನ, ಕಾನ್ಲೆ, ತಡಗಳಲೆ, ಬ್ಯಾಕೋಡು, ಎಂ.ಎಲ್.ಹಳ್ಳಿ, ಉಳ್ಳೂರು.

100 ಫಲಿತಾಂಶ ಬಂದ ವಸತಿ ಶಾಲೆ:

ವಸತಿ ಶಾಲೆಗಳಲ್ಲಿ 7 ಶಾಲೆಗಳು ನೂರುಫಲಿತಾಂಶ ಬಂದಿವೆ . ಮೌಲನಾ ಆಜಾದ್, ಅಟಲ್ ಬಿಹಾರಿ ವಾಜಿಪೇಯಿ ವಸತಿ ಶಾಲೆ ಆವಿನಹಳ್ಳಿ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಆವಿನಹಳ್ಳಿ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ತಾಳಗುಪ್ಪ, ಮುರಾರ್ಜಿ ವಸತಿ ಶಾಲೆ ಕೆಳದಿ, ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ ಯಡೆಹಳ್ಳಿ, ಇಂಧಿರಾಗಾಂಧಿ ವಸತಿ ಶಾಲೆ ತುಮರಿ.

ಅನುದಾನಿತ ಪ್ರೌಢಶಾಲೆಗಳು:

16 ಶಾಲೆಗಳಲ್ಲಿ 14 ಶಾಲೆಗಳು ನೂರರಷ್ಟು ಫಲಿತಾಂಶ ದಾಖಲಿಸಿದೆ. ನಿರ್ಮಲಾ ಬಾಲಿಕಾ ಪ್ರೌಢಶಾಲೆ, ಹಾಜಿ ಕೋಯಾ, ಹೆಚ್.ಶಿವಲಿಂಗಪ್ಪ, ಎಂ.ಜಿ.ಎನ್,ಪೈ ಪ್ರೌಢಶಾಲೆ, ಜ್ಞಾನ ಸಹ್ಯಾದ್ರಿ ಯಡೇಹಳ್ಳಿ, ಎಸ್.ವಿ.ವಿ.ತ್ಯಾಗರ್ತಿ, ನಲಂದ ಪ್ರೌಢಶಾಲೆ ತಾಳಗುಪ್ಪ, ವಿ.ಸಂ.ಪ್ರೌಢಶಾಲೆ. ಕೇಡಲಸರ, ಸೆಂಟ್ ಆಂತೋನಿ ಇಡುವಳ್ಳಿ, ಮಲೆನಾಡು ಪ್ರೌಢಶಾಲೆ ಗೌತಮಪುರ, ಇಕ್ಕೇರಿ ಪ್ರೌಢಶಾಲೆ ಯಡಜಿಳಮನೆ, ಕೆ.ವಿ.ಎನ್.ಎನ್. ಜೋಗ್, ಚನ್ನಮ್ಮಾಜಿ ಐಗಿನಬೈಲು, ಶಾಂತವೇರಿ ಗೋಪಾಲಗೌಡ ಸೈದೂರು,

ಅನುದಾನರಹಿತ ಶಾಲೆಗಳು:

14 ಶಾಲೆಗಳಲ್ಲಿ 13 ಶಾಲೆಗಳು ಶೇಕಡ ನೂರರಷ್ಟು ಫಲಿತಾಂಶ ಬಂದಿರುತ್ತದೆ. ಸೇವಾಸಾಗರ, ರಾಭಿಯಾ ಆಂಗ್ಲಮಾಧ್ಯಮ, ಆಯುಷ್ಯ ಐಡ್ರೋಸ್, ಪ್ರಜ್ಞಾ ಭಾರತಿ, ರಾಮಕೃಷ್ಣ ವಸತಿ ಶಾಲೆ ಎಂ.ಎಲ್.ಹಳ್ಳಿ, ಕೊಡಚಾದ್ರಿ ಪ್ರೌಢಶಾಲೆ ಗಿಣಿವಾರ, ಪ್ರಗತಿ ಸಂಯುಕ್ತ ಪ್ರೌಢಶಾಲೆ, ರಾಭಿಯಾ ಪಬ್ಲಿಕ್ ಶಾಲೆ, ರಾಮಕೃಷ್ಣ ಪ್ರೌಢಶಾಲೆ ಸಾಗರ, ಸಾಧನಾ ವಿದ್ಯಾ ಕೇಂದ್ರ ಆನಂದಪುರ, ವಿದ್ಯಾಭಾರತಿ ಗೌತಮಪುರ, ಕ್ರಿಯೇಟೀವ್ ಇಂಟರ್ ನ್ಯಾಷನಲ್ ಸ್ಕೂಲ್ ಆಚಾಪುರ, ಸಂತ ಜೋಸೆಫ್ ಮಂಕಳಲೆ .

ತಾಲ್ಲೂಕಿನ ಟಾಪ್ ವಿದ್ಯಾರ್ಥಿಗಳು:


ಪೂರ್ವ ಪಟೇಲ್ ಕ್ರಿಯೆಟೀವ್ ಇಂಟರ್ ನ್ಯಾಷನಲ್ ಸ್ಕೂಲ್, ಆಚಾಪುರ, 620 ಅಂಕ, ಪ್ರಣವ್ ಕೆ.ಪಿ ರಾಮಕೃಷ್ಣ ವಿದ್ಯಾಲಯ ಸಾಗರ 619, ಶ್ರೇಯಾ ಪಿ ರಾಮಕೃಷ್ಣ ವಿದ್ಯಾಲಯ ಸಾಗರ 618, ಅಂಕಿತಾ ಬಿ.ಬಿ. ಎಂ.ಜಿ.ಎನ್. ಪೈ ಪ್ರೌಢಶಾಲೆ ಸಾಗರ 617, ಕೆವಿನ್ ಸೆಂಟ್ ಜೊಸೇಪ್ ಮಂಕಳಲೆ 617,ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಅತಿ ಹೆಚ್ಚಿನ ಅಂಕಗಳನ್ನು ಪಡೆದು ಟಾಪ್ ಆಗಿ ಹೊರ ಹೊಮ್ಮಿದ್ದಾರೆ.

ಸರ್ಕಾರಿ ಪ್ರೌಢಶಾಲೆಗಳಲ್ಲಿ: ಸಪಪೂಕಾಲೇಜು ಪ್ರೌಢಶಾಲೆ,ಸಾಗರ 95%, ಸುಭಾಷ್‌ನಗರ 97%, ಸಿರಿವಂತೆ 99%, ಕಾರ್ಗಲ್ 97%, ಕಟ್ಟಿನಕಾರು 97%, ತುಮರಿ 93%, ಮಾಸೂರು 97%, ಹಿರೇನೆಲ್ಲೂರು 97%, ತ್ಯಾಗರ್ತಿ 94%, ಕೆ.ಪಿ.ಎಸ್.ಆನಂದಪುರ 97%, ಹಿರೇನೆಲ್ಲೂರು 97%.
ಅನುದಾನಿತ ಶಾಲೆಗಳಲ್ಲಿ : ಭಾರತಿ ಪ್ರೌಢಶಾಲೆ ಕೆಳದಿ 97%, ಎಸ್.ಜೆ.ಜಿ ಪ್ರೌಢಶಾಲೆ ಮುರುಘಾಮಠ 97%,

ಅನುದಾನರಹಿತ ಪ್ರೌಢಶಾಲೆ: ಸಿಗಂದೂರೇಶ್ವರಿ ಉಳ್ಳೂರು 90%

ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಂದ ಅಭಿನಂದನೆ:

ಸಾಗರ ತಾಲ್ಲೂಕು ಶೈಕ್ಷಣಿಕವಾಗಿ ಉತ್ತಮವಾದ ವಾತಾವರಣವಿದ್ದು ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗಾಗಿ ಸಾಕಷ್ಟು ಶ್ರಮಿಸಲಾಗಿದೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಶೇಕಡ ನೂರರಷ್ಟು ಪಡೆದ ಶಾಲೆಗಳಿಗೆ ಹಾಗೂ ಉತ್ತಮವಾದ ಫಲಿತಾಂಶಕ್ಕೆ ಶ್ರಮಿಸಿದ ವಿದ್ಯಾರ್ಥಿಗಳಿಗೆ, ಎಲ್ಲಾರಿಗೂ ಅಭಿನಂದನೆಗಳು ಎಂದು ಸಾಗರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ತಿಳಿಸಿದ್ಧಾರೆ.

ತಾಲ್ಲೂಕಿನಲ್ಲಿ ಉತ್ತಮ ಫಲಿತಾಂಶ ಬರಲು ಕಾರಣರಾದ ವಿದ್ಯಾರ್ಥಿಗಳು, ಮುಖ್ಯ ಶಿಕ್ಷಕರು, ಶಿಕ್ಷಕರು, ಆಡಳಿತ ಮಂಡಳಿಯವರು, ಜನಪ್ರತಿನಿಧಿಗಳು, ಎಲ್ಲಾ ಇಲಾಖೆಯವರು, ಪೋಷಕರು, ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಬಿಇಓ ಸದಾನಂದಸ್ವಾಮಿ ಸಿ ಇವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.