✒️..ಅಮಿತ್ ಆರ್ ಆನಂದಪುರ
ಶಿಕಾರಿಪುರ: ಶಿಕಾರಿಪುರದ ಕುಮುದ್ವತಿ ನದಿ ಸೇತುವೆ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 19 ವರ್ಷದ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಬುಧವಾರ (ಜುಲೈ 29) ನಡೆದಿದೆ.
ಮೃತ ಯುವಕನನ್ನು ಸಾಗರ ತಾಲೂಕಿನ ಗೌತಮಪುರ ಗ್ರಾಮದ ಮಂಜುನಾಥ್ ಬಿನ್ ಚೌಡಪ್ಪ ಅವರ ಪುತ್ರ ಮಿಲನ್ (19) ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ಮಿಲನ್ ತನ್ನ ಸ್ನೇಹಿತರಾದ ಜೀವನ್ ಹಾಗೂ ಪ್ರವೀಣ್ ಅವರೊಂದಿಗೆ ಐ.ಟಿ.ಐ. ಪರೀಕ್ಷೆ ಬರೆಯಲು ಶಿರಾಳಕೊಪ್ಪಕ್ಕೆ ತೆರಳಿದ್ದನು. ಪರೀಕ್ಷೆ ಮುಗಿಸಿಕೊಂಡು ಸ್ನೇಹಿತರಿಬ್ಬರು ಒಂದು ಬೈಕ್ ಅಲ್ಲಿ ಹಾಗೂ ಇನ್ನೊಂದು ಬೈಕ್ ಅಲ್ಲಿ ಮಿಲನ್ ಗೌತಮಪುರಕ್ಕೆ ಹಿಂದಿರುಗುತ್ತಿದ್ದ ವೇಳೆ ಶಿಕಾರಿಪುರ ಮಾರ್ಗದ ಕುಮುದ್ವತಿ ಸೇತುವೆ ಸಮೀಪ ಅಪಘಾತ ಸಂಭವಿಸಿದೆ.

ಮಿಲನ್ ಚಲಾಯಿಸುತ್ತಿದ್ದ ಬೈಕ್ ಹಾಗೂ ಶಿಕಾರಿಪುರ ಕಡೆಯಿಂದ ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಬಂದ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮಿಲನ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಅಪಘಾತಕ್ಕೆ ಕಾರಣವಾದ ಕ್ಯಾಂಟರ್ ಚಾಲಕನನ್ನು ಶಿರಾಳಕೊಪ್ಪದ ನೆಹರೂ ಕಾಲೋನಿ ನಿವಾಸಿ ಹನುಮಂತಪ್ಪ (45) ಎಂದು ಗುರುತಿಸಲಾಗಿದೆ.
ಈ ಕುರಿತು ಶಿಕಾರಿಪುರ ಟೌನ್ ಪೊಲೀಸ್ ಠಾಣೆಯಲ್ಲಿ ಗ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.











