Home Shivamogga Sagara ಚಿಕಿತ್ಸೆ ವೆಚ್ಚದ ಚಿಂತೆ; ವಿಷ ಸೇವಿಸಿ ಯುವಕ ಆತ್ಮಹತ್ಯೆ..!!

ಚಿಕಿತ್ಸೆ ವೆಚ್ಚದ ಚಿಂತೆ; ವಿಷ ಸೇವಿಸಿ ಯುವಕ ಆತ್ಮಹತ್ಯೆ..!!

38
0

✒️..ಅಮಿತ್ ಆರ್ ಆನಂದಪುರ

ಆನಂದಪುರ :ಪಿಟ್ಸ್ ಕಾಯಿಲೆಯಿಂದ ಚಿಕಿತ್ಸೆ ಪಡೆದುಕೊಳ್ಳಲು ಹೆಚ್ಚಿನ ಹಣ ಖರ್ಚಾಗುತ್ತಿದ್ದರ ಬಗ್ಗೆ ಚಿಂತೆ ಮಾಡಿ ಯುವಕ ನೋರ್ವ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.

ಮೃತಪಟ್ಟ ದುರ್ದೈವಿ ಧನುಷ್ (25) ತಂದೆ ಲಕ್ಷ್ಮಣ್ ಆನಂದಪುರ ಹೋಬಳಿಯ ಕೋಟೆ ಕೊಪ್ಪ ನಿವಾಸಿ ಎಂದು ತಿಳಿದು ಬಂದಿದೆ.

ಧನುಷ್ ಗೆ ಪಿಟ್ಸ್ ಕಾಯಿಲೆ ಇತ್ತು ಇದರ ಚಿಕಿತ್ಸೆಗಾಗಿ ಹೆಚ್ಚಿನ ಹಣ ಖರ್ಚಾಗುತ್ತಿದ್ದದ್ದನ್ನು ಚಿಂತೆ ಮಾಡಿ ಮೇ 12ರ ಮಂಗಳವಾರ ಹೊಲಕ್ಕೆ ಔಷಧಿ ಸಿಂಪಡಿಸಲು ಹೋದ ವೇಳೆ ಧನುಷ್ ವಿಷವನ್ನು ಕುಡಿದು ಅಸ್ವಸ್ಥನಾಗಿ ಬಿದ್ದು ಒದ್ದಾಡುತ್ತಿದ್ದನ್ನು ಕಂಡು ಮೊದಲು ಸಾಗರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗನ್ ಆಸ್ಪತ್ರೆಗೆ ಕರೆದುಕೊಂಡು ಹೋದ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಈ ಕುರಿತು ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.