ಮನೆ ರಾಜ್ಯ ಬೆಳಗಾವಿಯಲ್ಲಿ ಹರಳಯ್ಯ ಸಮುದಾಯದ ಪ್ರತಿಭಟನೆ | ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ…

ಬೆಳಗಾವಿಯಲ್ಲಿ ಹರಳಯ್ಯ ಸಮುದಾಯದ ಪ್ರತಿಭಟನೆ | ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ…

64
0

ಬೆಳಗಾವಿ:ಸಮುದಾಯದವರಿಗಾಗಿ ಶಿವಶರಣ ಹರಳಯ್ಯ ನಿಗಮ ಸ್ಥಾಪಿಸುವುದು ಸೇರಿದಂತೆ ತಮ್ಮ ಬೇಡಿಕೆ ಈಡೇರಿಸುವಂತೆ ಕರ್ನಾಟಕ ಸಮಗಾ‌ರ್ (ಚಮ್ಮಾರ) ಹರಳಯ್ಯಾ ಸಂಘದಿಂದ ಬುಧವಾರ ಬೆಳಗಾವಿಯ ಸುವರ್ಣ ವಾರ್ಡ್ ನಲ್ಲಿ ಪ್ರತಿಭಟನೆ ನಡೆಸಿ ಬಳಿಕ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರಿಗೆ ಮನವಿಸಲ್ಲಿಸಿದರು.

ಲಿಡಕರ್‌ನಿಗಮಕ್ಕೆ ನಮ್ಮ ಸಮುದಾಯದವರೇ ಅಧ್ಯಕ್ಷರು ಮತ್ತು ನಿರ್ದೇಶಕರನ್ನಾಗಿ ನೇಮಿಸಬೇ ಕು. ರಸ್ತೆ ಬದಿಗಳಲ್ಲಿ ಪಾದರಕ್ಷೆಗಳನ್ನು ರಿಪೇರಿ ಮಾಡುವವರಿಗೆ ಲಿಡಕರ್‌ಶೆಡ್ ಗಳನ್ನು ಮಂಜೂ ರು ಮಾಡಬೇಕು, ಜೀವ ವಿಮೆ ಮತ್ತು ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಲಿಡಕ‌ರ್ ನಿಗಮ ಚರ್ಮ ಉದ್ಯೋಗ ಹಾಗೂ ಮೂಲ ಚರ್ಮಕಾರರ ಕಲ್ಯಾಣಕ್ಕಾಗಿ ರಚನೆಯಾಗಿದ್ದು, ಈ ನಿಗಮಕ್ಕೆ ಇಲ್ಲಿವರಿಗೆ ಸಮಗಾರ ಸಮುದಾಯದವರಿಗೆ ಅಧ್ಯಕ್ಷ ಸ್ಥಾನ ನೀಡಿಲ್ಲ. ಬೆಂಗಳೂರಿನಲ್ಲಿ ಬಿಡಿಎ ಮೂಲಕ ಸ್ಥಾಪನೆ ಮಾಡಿರುವ ಶಿವಶರಣ ಹರಳಯ್ಯಾಭವನ ಹಾಗೂ ಕೌಶಲ್ಯ ಅಭಿವೃದ್ಧಿ ಕೇಂದ್ರಕ್ಕೆ ಹಣ ನೀಡಬೇಕು. ಶಿವಶರಣ ಹರಳಯ್ಯಾ ಭವನ ಹಾಗೂ ಕಲ್ಯಾಣಮ್ಮ ಸ್ಮಾರಕಗಳ ಅಭಿವೃದ್ಧಿಗೆ ಸರಕಾರ ವಿಶೇಷ ಅನುದಾನ ಜೀರ್ಣೋದ್ಧಾರಗೊಳಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ರಾಜ್ಯಾಧ್ಯಕ್ಷ ಜಗದೀಶ ಬೇಟಗೇರಿ, ಗೌರವಾಧ್ಯಕ್ಷ ಯಲ್ಲಪ್ಪಾ ಬೆಂಡಿಗೇರಿ, ಪರಶುರಾಮ ಅರಕೇರಿ, ಮಹಾದೇವ ಕಬಾಡಿ, ಪಿ.ವಾಸು, ಶಿವಮೊಗ್ಗ ಜಿಲ್ಲಾದ್ಯಕ್ಷ ನಾಗರಾಜ್ ,ಸುನೀಲಮದಲಭಾವಿ, ಮಂಜುನಾಥ ಹಂಜಗಿ, ದೀಪಕ ಕೂಡಾಲಕರ, ರಮೇಶ ವತನ, ಗಣೇಶ ಕಾಳೆ ಇತರರು ಭಾಗವಹಿಸಿದ್ದರು.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t