Home Blog ಬೌದ್ದಿಕ ಹಾಗೂ ಮಾನಸಿಕ ನೆಮ್ಮದಿಗೆ ಯೋಗ ಅಗತ್ಯ:ಬಿಇಓ ಸದಾನಂದ ಸ್ವಾಮಿ ..!!

ಬೌದ್ದಿಕ ಹಾಗೂ ಮಾನಸಿಕ ನೆಮ್ಮದಿಗೆ ಯೋಗ ಅಗತ್ಯ:ಬಿಇಓ ಸದಾನಂದ ಸ್ವಾಮಿ ..!!

42
0

ಸಾಗರ: ಜೂ-21/ ಬೌದ್ಧಿಕ ಹಾಗೂ ಮಾನಸಿಕ ಬೆಳವಣಿಗೆಗೆ ಯೋಗವು ಬಹಳ ಮುಖ್ಯವಾಗುತ್ತದೆ, ಇದರಿಂದ ಸಕಲವನ್ನು ಸಿದ್ಧಿಸಬಹುದು ಎಂದು ಬಿಇಓ ಸದಾನಂದ ಸ್ವಾಮಿ ಸಿ ಹೇಳಿದರು.

ಅವರು ಇಂದು ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗ ಸಾಗರ ಇವರು ಲಯನ್ಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಯೋಗ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಂತಾರಾಷ್ಟ್ರೀಯ ಮಟ್ಟದ ಯೋಗ ಪಟುಗಳನ್ನು ಸನ್ಮಾನಿಸಿ ಮಾತನಾಡಿದರು.

ಇವತ್ತು ಪ್ರತಿಯೊಬ್ಬರಿಗೂ ನೆಮ್ಮದಿ ಬೇಕಾಗಿದೆ. ಇಂದು ಜನರ ಜೀವನ ಶೈಲಿ ಬದಲಾಗಿದೆ.ದೈಹಿಕ ಶ್ರಮ ಇಲ್ಲದೆ ಅನಾರೋಗ್ಯ ಕಾಡುತ್ತಿದೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ. ಮನುಷ್ಯ ಸಂಬಂಧಗಳು ದೂರವಾಗುತ್ತಿವೆ. ನೆಮ್ಮದಿಯ ಬದುಕಿಗಾಗಿ ಯೋಗ ಮುಖ್ಯವಾಗಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಭಾರತೀಯ ಯೋಗ ಪರಂಪರೆ ಇದು ವಿಶ್ವದಗಲ ಪಸರಿಸಿದೆ. ಇಂತಹ ಯೋಗಾಭ್ಯಾಸವನ್ನು ಮಕ್ಕಳು ಮೈಗೂಡಿಸಿಕೊಳ್ಳಬೇಕು ಎಂದರು.

ಸಪಪೂಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ಶಂಕರ್ ಶಾಸ್ತ್ರಿ ಮಾತನಾಡಿ ಭಾರತೀಯ ಯೋಗಕ್ಕೆ ಪ್ರಾಚೀನ ಇತಿಹಾಸವಿದೆ. ಋಷಿ ಮುನಿಗಳು ನಡೆಸಿಕೊಂಡು ಬರುತ್ತಿದ್ದರು ಅದು ಇಂದಿಗೂ ನಡೆದುಕೊಂಡು ಬಂದಿದೆ ಇಂದು ಯೋಗದ ಮಹತ್ವ ವಿಶ್ವಕ್ಕೆ ಪರಿಚಿತವಾಗಿದೆ ಹಾಗಾಗಿ ಮಕ್ಕಳಲ್ಲೂ ಯೋಗಾಭ್ಯಾಸವನ್ನು ಮಾಡಿಸಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಟಿಪಿಇಓ ರಮೇಶ್, ಎಸ್.ಡಿ.ಎಂ.ಸಿಯ ನಾರಾಯಣ ಸ್ವಾಮಿ, ಪ್ರಶಾಂತ್, ಶ್ರೀಧರ್, ಹಾಗೂ ಪೋಷಕರು ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಯೋಗ ಪಟುಗಳಾದ ಪರಿಚಿತ, ಅಂಕಿತ, ಅರ್ಪಿತ ಅವರನ್ನು ಸನ್ಮಾನಿಸಲಾಯಿತು.