ಮನೆ ಶಿವಮೊಗ್ಗ ಶಿಕಾರಿಪುರ/ಸರ್ಕಾರಿ ಶಾಲೆಯ ಶಿಕ್ಷಕ ಶಾಲೆಯಲ್ಲಿಯೇ ನೇಣು ಬಿಗಿದುಕೊಂಡು ಸಾವು..!!

ಶಿಕಾರಿಪುರ/ಸರ್ಕಾರಿ ಶಾಲೆಯ ಶಿಕ್ಷಕ ಶಾಲೆಯಲ್ಲಿಯೇ ನೇಣು ಬಿಗಿದುಕೊಂಡು ಸಾವು..!!

3
0

ಶಿವಮೊಗ್ಗ(ಶಿಕಾರಿಪುರ): ಸರ್ಕಾರಿ ಶಾಲೆಯ ಕೊಠಡಿಯಲ್ಲಿ ಶಿಕ್ಷಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿಕಾರಿಪುರದ ಬಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಮೃತ ಶಿಕ್ಷಕ ಯಾರು..?

ಸರ್ಕಾರಿ ಶಾಲೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮೃತ ಶಿಕ್ಷಕ ಧನಂಜಯ್ ತಂದೆ ಗಂಗಪ್ಪ (51) ಇವರು ಮೂಲತಹ ದಾವಣಗೆರೆ ಜಿಲ್ಲೆಯ ನ್ಯಾಮತಿಯ ಜೀನಳ್ಳಿ ಯವರು ಎಂದು ತಿಳಿದು ಬಂದಿದೆ.ಇವರು ಶಿಕಾರಿಪುರದ ಬಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐದಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಅಷ್ಟಕ್ಕೂ ಸರ್ಕಾರಿ ಶಿಕ್ಷಕನ ಸಾವಿನ ಕಾರಣವೇನು..?

ಮೃತ ಸರ್ಕಾರಿ ಶಾಲೆಯ ಶಿಕ್ಷಕ ಧನಂಜಯ್ ಅವರಿಗೆ ಕೆಲಸದ ಒತ್ತಡ ಬಹಳಷ್ಟು ಇರುವುದಾಗಿ ಹಾಗೂ ಇತ್ತೀಚಿಗೆ ಬಿ.ಎಲ್. ಓ ಕರ್ತವ್ಯಕ್ಕೆ ನೇಮಕ ಗೊಂಡಿದ್ದು ಈ ಕೆಲಸದ ಒತ್ತಡವು ಬಹಳಷ್ಟು ಇರುವುದಾಗಿ ತಮ್ಮ ಧರ್ಮಪತ್ನಿ ಯಾದ ಆಶಾ ಬಳಿ ಆಗಾಗ ಹೇಳಿ ಕೊಳ್ಳುತ್ತಿದ್ದರಂತೆ.ಹಾಗಾಗಿ ಕೆಲಸದ ಒತ್ತಡದಿಂದ ಮನನೊಂದು ಕರ್ತವ್ಯಕ್ಕೆಂದು ಹೋದ ಶಾಲೆಯಲ್ಲಿ ದಿನಾಂಕ ಜ.13 ರ ಸೋಮವಾರ 11:30 ಸಮಯಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ತಿಳಿದು ಬಂದಿದೆ.

ಈ ಕುರಿತು ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

✒️…ಅಮಿತ್ ಆರ್ ಆನಂದಪುರ

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ