Home Shivamogga ಸಾಗರ ಶಿವಮೊಗ್ಗ ಮಧ್ಯೆ ಹೆದ್ದಾರಿ ಬಂದ್.., ಪರ್ಯಾಯ ಮಾರ್ಗಕ್ಕೆ ಪೊಲೀಸರ ಸೂಚನೆ..!!

ಸಾಗರ ಶಿವಮೊಗ್ಗ ಮಧ್ಯೆ ಹೆದ್ದಾರಿ ಬಂದ್.., ಪರ್ಯಾಯ ಮಾರ್ಗಕ್ಕೆ ಪೊಲೀಸರ ಸೂಚನೆ..!!

29
0

✒️..ಅಮಿತ್ ಆರ್ ಆನಂದಪುರ

(ಸಾಗರ)ಆನಂದಪುರ, ಜೂನ್ 1: ಎನ್‌ಎಚ್-69ರ ಆನಂದಪುರ ಯಡೇಹಳ್ಳಿ ಪೆಟ್ರೋಲ್ ಬಂಕ್ ಸಮೀಪ ಹೆದ್ದಾರಿ ರಸ್ತೆಗೆ ಅಡ್ಡಲಾಗಿ ದೊಡ್ಡ ಮರ ಬಿದ್ದ ಪರಿಣಾಮ ಸಾಗರದಿಂದ ಶಿವಮೊಗ್ಗಕ್ಕೆ ,ಶಿವಮೊಗ್ಗದಿಂದ ಸಾಗರಕ್ಕೆ ಸಂಚರಿಸುವ ವಾಹನಗಳಿಗೆ ಅಡಚಣೆ ಉಂಟಾಗಿದೆ.

ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮರ ತೆರವು ಕಾರ್ಯಾಚರಣೆಯಲ್ಲಿ ಸ್ವಲ್ಪ ವಿಳಂಬವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ಹಾಗೂ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಆನಂದಪುರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರವೀಣ್ ಮನವಿ ಮಾಡಿದ್ದಾರೆ.

ಶಿವಮೊಗ್ಗ ಕಡೆಗೆ ತೆರಳುವವರು ರಿಪ್ಪನ್‌ಪೇಟೆ–ಆಯನೂರು ಮಾರ್ಗವನ್ನು ಬಳಸುವಂತೆ ಸೂಚಿಸಲಾಗಿದೆ. ಹಾಗೆಯೇ ಶಿವಮೊಗ್ಗದಿಂದ ಸಾಗರ ಕಡೆಗೆ ತೆರಳುವವರು ಆಯನೂರು–ರಿಪ್ಪನ್‌ಪೇಟೆ–ಆ ನಂದಪುರ ಮಾರ್ಗವಾಗಿ ಸಂಚರಿಸುವಂತೆ ತಿಳಿಸಲಾಗಿದೆ.

ಸಾರ್ವಜನಿಕರು ಅನಗತ್ಯವಾಗಿ ಯಡೆಹಳ್ಳಿ ಮಾರ್ಗದಲ್ಲಿ ಪ್ರಯಾಣಿಸಲು ಮುಂದಾಗದೇ, ಪೊಲೀಸ್ ಇಲಾಖೆಯ ಸೂಚನೆಗಳನ್ನು ಪಾಲಿಸಿ ಸಹಕರಿಸುವಂತೆ ಆನಂದಪುರ ಪೊಲೀಸ್ ಠಾಣೆಯ ಪಿಎಸ್‌ಐ ಮನವಿ ಮಾಡಿದ್ದಾರೆ.