Home Shivamogga ಹಾವಿಗೆ ಹಾಲು ನೀಡುವ ಬದಲು ಅಪೌಷ್ಟಿಕರಿಗೆ ನೀಡಿ: ಅಂಬೇಡ್ಕರ್ ಯುವಶಕ್ತಿ ಸಂಘಟನೆ ಸಂದೇಶ..!!

ಹಾವಿಗೆ ಹಾಲು ನೀಡುವ ಬದಲು ಅಪೌಷ್ಟಿಕರಿಗೆ ನೀಡಿ: ಅಂಬೇಡ್ಕರ್ ಯುವಶಕ್ತಿ ಸಂಘಟನೆ ಸಂದೇಶ..!!

42
0

✒️..ಅಮಿತ್ ಆರ್ ಆನಂದಪುರ

ಸೊರಬ: ಹಾವು ಮಾಂಸಾಹಾರಿ ಸರೀಸೃಪವಾಗಿದ್ದು, ಹಾಲು ಕುಡಿಯುವುದಿಲ್ಲ ಎಂಬುದು ತಿಳಿದಿದ್ದರೂ ಹಾವಿಗೆ ಹಾಲು ನೀಡುವ ಬದಲು ಅಪೌಷ್ಟಿಕತೆಯಿಂದ ಬಳಲುತ್ತಿರುವವರಿಗೆ ಪೌಷ್ಟಿಕಾಂಶಯುಕ್ತ ಹಾಲು ನೀಡಬೇಕು ಎಂದು ಅಂಬೇಡ್ಕರ್ ಯುವಶಕ್ತಿ ಸಂಘಟನೆಯ ಅಧ್ಯಕ್ಷ ರಾಜೇಶ್ ಕಾನಡೆ ಹೇಳಿದರು.

ಸೊರಬ ತಾಲೂಕಿನ ಹೆಚ್ಚೆ ಗ್ರಾಮದಲ್ಲಿ ಅಂಬೇಡ್ಕರ್ ಯುವಶಕ್ತಿ ಶಿವಮೊಗ್ಗ ಸಂಘಟನೆ ವತಿಯಿಂದ ಆಯೋಜಿಸಿದ್ದ ಬಸವ ಪಂಚಮಿ ಕಾರ್ಯಕ್ರಮದಲ್ಲಿ ಜೀ ಕನ್ನಡದ ಸರಿಗಮಪ ಖ್ಯಾತಿಯ ಕೀರ್ತಿ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಹಾವಿಗೆ ಹಾಲು ನೀಡುವ ಸಂಪ್ರದಾಯಕ್ಕಿಂತ ಸಮಾಜದಲ್ಲಿ ಅಗತ್ಯವಿರುವವರಿಗೆ ಪೌಷ್ಟಿಕ ಆಹಾರ ಒದಗಿಸುವುದು ಹೆಚ್ಚು ಅರ್ಥಪೂರ್ಣವಾದ ಕಾರ್ಯವಾಗಿದೆ. ಮೂಢನಂಬಿಕೆಗಳಿಗಿಂತ ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡುವ ಮೂಲಕ ಸಮಾಜದ ದುರ್ಬಲ ವರ್ಗದವರ ನೆರವಿಗೆ ನಿಲ್ಲಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಶಕ್ತಿ ಸಂಘ ಸಿದ್ದಾಪುರ ಅಧ್ಯಕ್ಷ ನಂದನ್ ಬೋರ್ಕರ್, ಕಿರಣ್ ಕಾನಡೆ, ವಿಘ್ನೇಶ್, ಲಕ್ಷ್ಮಣ ಬೋರ್ಕರ್, ಚಂದ್ರಪ್ಪ ಹೊಳೆಮರೂರು, ಸಚಿನ್ ಕುಮಾರ್ ಹಾಗೂ ಅಂಬೇಡ್ಕರ್ ಯುವಶಕ್ತಿ ಸಂಘಟನೆಯ ಸದಸ್ಯರಾದ ಭುವನ್ ಕಾನಡೆ, ವಿನಾಯಕ್ ಚೂರಿಕಟ್ಟೆ, ತಿಲಕ್ ಕಾನಡೆ, ನಿರಂಜನ್ ಮತ್ತು ರಾಕೇಶ್ ಶಿವಪುರ ಹಾಗೂ ಊರಿನ ಗ್ರಾಮಸ್ಥರು ,ಸಾರ್ವಜನಿಕರು ಉಪಸ್ಥಿತರಿದ್ದರು.