ಮನೆ ಶಿವಮೊಗ್ಗ ಮನುಷ್ಯ ಕಾನೂನು ಕೈಬಿಟ್ಟರು ಕಾನೂನು ಮನುಷ್ಯನನ್ನು ಕೈಬಿಡುವುದಿಲ್ಲ: ಪಿಎಸ್ಐ ಪ್ರವೀಣ್.

ಮನುಷ್ಯ ಕಾನೂನು ಕೈಬಿಟ್ಟರು ಕಾನೂನು ಮನುಷ್ಯನನ್ನು ಕೈಬಿಡುವುದಿಲ್ಲ: ಪಿಎಸ್ಐ ಪ್ರವೀಣ್.

113
0

ಆನಂದಪುರ:ಮನುಷ್ಯನ ಜೀವನಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಕಾನೂನು ಅಗತ್ಯವಾಗಿದೆ. ಒಂದು ವೇಳೆ ಮನುಷ್ಯ ಕಾನೂನು ಕೈಬಿಟ್ಟರು, ಕಾನೂನು ಮನುಷ್ಯನನ್ನು ಕೈಬಿಡುವುದಿಲ್ಲ ಎಂದು ಆನಂದಪುರದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರವೀಣ್ ತಿಳಿಸಿದರು.

ಇವರು ಸಮೀಪದ ಉಳ್ಳೂರಿನ ಸಿಗಂದೂರೇಶ್ವರಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯ ಕ್ರಮ ಕುರಿತು ಮಾತನಾಡಿದರು.

ನಾವೆಲ್ಲರೂ ಸಮಾಜದಲ್ಲಿ ಉತ್ತಮವಾಗಿ ಜೀವನ ನಡೆಸ ಬೇಕು ಎಂದ ಮೇಲೆ ಕೆಲ ನೀತಿ ನಿಯಮಗಳನ್ನು ಅನುಸರಿಸಬೇಕು. ಇತ್ತೀಚಿನ ದಿನಗಳಲ್ಲಿ ಹದಿಹರಿಯದ ಯುವಕರು ಸಂಚಾರ ನಿಯಮಗಳನ್ನು ಉಲ್ಲೇಖಿಸಿ ವಾಹನವನ್ನು ಚಲಾಯಿಸುತ್ತಾರೆ ಇದರಿಂದ ಅಪಘಾತಸಂಭವಿಸಿ, ಬಾಲಾಪರಾಧಿಗಳ ಪಟ್ಟಿಗೆ ಸೇರುತ್ತಿದ್ದಾರೆ ಇದರಿಂದ ನಿಯಮ ಪಾಲನೆಗೆ ಹೆಚ್ಚಿನ ಒತ್ತು ವಿದ್ಯಾರ್ಥಿಗಳು ನೀಡಬೇಕು.

ಪ್ರಮುಖವಾಗಿ ವಿದ್ಯಾರ್ಥಿಗಳು ಕೆಲ ಆಕರ್ಷಣೆಗಳಿಗೆ ಒಳಗಾಗಿ ಓದುವ ಸಮಯದಲ್ಲಿ ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಇದರಿಂದಲೆಲ್ಲ ಹೊರಬಂದು ಸಮಾಜದಲ್ಲಿ ಉತ್ತಮ ಪ್ರಜೆ ಮಾರ್ಪಾಡು ಹೊಂದಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಲೈಂಗಿಕ ದೌರ್ಜನ್ಯ ಆಗುತ್ತಿದ್ದು. ವಿದ್ಯಾರ್ಥಿಗಳು ಬಹಳ ಎಚ್ಚರಿಕೆ ಯಿಂದ ಇರಬೇಕು. ಯಾವುದೇ ಸಂದರ್ಭ ದಲ್ಲಿ ಆದರೂ ನಮ್ಮ ಪೊಲೀಸ್ ಇಲಾಖೆಯ ನೆರವನ್ನು ಪಡೆದು ಕೊಳ್ಳಬಹುದು ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷರಾದ ಕೃಷ್ಣಮೂರ್ತಿ ಎನ್ ಬಿಳಗಲ್ಲೂರು ಕಾರ್ಯಕ್ರಮದ ಅಧ್ಯಕ್ಷನ್ನು ವಹಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಎಲ್ಲಾ ವಿಭಾಗದ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t