
ಆನಂದಪುರ:ಗ್ಯಾರೆಂಟಿ ಯೋಜನೆಯು ಜನಸಾಮಾನ್ಯ ಬದುಕಿಗೆ ಆಸರೆಯಾಗುತ್ತಿದೆ ಎಂದು ಶಾಸಕರಾದ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇವರು ಆನಂದಪುರ ಸಮೀಪದ ಆಚಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಲವಾರು ಕಾಮಗಾರಿಕೆ ಉದ್ಘಾಟನೆ ಮಾಡಿ ಮಾತನಾಡಿದರು.

ಬಂಗಾರಪ್ಪನವರ ಗರಡಿಯಲ್ಲಿ ಬೆಳೆದು ಬಂದ ನನಗೆ ಯಾವುದೇ ರೀತಿಯಲ್ಲಿಯೂ ಅಹಂ ಮತ್ತು ದ್ವೇಷ ವಿಲ್ಲದೆ ಜಾತಿ ಧರ್ಮ ಮರೆತು ಬಡವರ ಪರವಾಗಿ ನಿಲ್ಲುವ ಮೂಲಕ ರಾಜಕಾರಣ ಮಾಡುತ್ತಿದ್ದೇನೆ. ನನ್ನ ಹೃದಯ ಸದಾ ಬಡವರಿಗಾಗಿ ಮಿಡಿಯುತ್ತಾ ಇರುತ್ತದೆ ಎಂದರು.
ವಿದ್ಯಾಭ್ಯಾಸಕ್ಕೆ ಯಾವುದೇ ವ್ಯಕ್ತಿಗಾದರು ಅನ್ಯಾಯವಾಗಲು ನಾನು ಬಿಡುವುದಿಲ್ಲ. ನಮ್ಮ ಭಾಗದಲ್ಲಿನ ಅನೇಕ ವಿದ್ಯಾರ್ಥಿಗಳು ಉಡುಪಿ,ಮಂಗಳೂರು ಇನ್ನಿತರ ಕಡೆ ವಿದ್ಯಾಭ್ಯಾಸಕ್ಕೆ ಹೋಗುತ್ತಾರೆ ಅವರಿಗೆ ಹಾಸ್ಟೆಲ್ ಸೌಲಭ್ಯ ದೊರಕಿಸಿ ಕೊಡಬೇಕೆಂದು ಖುದ್ದಾಗಿ ನಾನೇ ಹೋಗಿ ಜಿಲ್ಲಾಧಿಕಾರಿಗೆ ತಿಳಿಸಿಬಂದಿದ್ದೇನೆ ಹಾಗೂ ಶಿವಮೊಗ್ಗದಲ್ಲಿಯೂ ಸಹ ಅನೇಕ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ದೊರಕಿಸುವ ಮೂಲಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದೇನೆ.

ಜನರ ಕಷ್ಟಗಳನ್ನು ಅರಿತು ಅವರಿಗೆ ಸ್ಪಂದನೆ ಮಾಡುವುದೇ ನನ್ನ ಅಭಿವೃದ್ಧಿಯಾಗಿದೆ. ನಮ್ಮ ಭಾಗದ ರೈತರಿಗೆ ಅನುಕೂಲವಾಗಲಿ ಎಂದು ನಾನು ಡಿಸಿಸಿ ಬ್ಯಾಂಕ್ ನಿರ್ದೇಶಕನಾದ ಮೇಲೆ ನಮ್ಮ ಭಾಗದಲ್ಲಿ ಹಲವಾರು ಡಿಸಿಸಿ ಬ್ಯಾಂಕ್ ನ ಬ್ರಾಂಚ್ ಗಳನ್ನು ತೆಗೆಯಲು ಮುಂದಾಗಿದ್ದೇನೆ ಎಂದು ತಿಳಿಸಿದರು.
ಆಚಾಪುರ ಭಾಗದಲ್ಲಿ ಅತ್ಯಂತ ಹೆಚ್ಚು ಮತವನ್ನು ಹಾಕಿ ನನ್ನನ್ನು ಗೆಲ್ಲಿಸಿದ್ದೀರಿ ನಿಮ್ಮೆಲ್ಲರ ಸೇವೆ ಮಾಡುವುದನ್ನು ಆದ್ಯ ಕರ್ತವ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಆಚಾಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಕಲೀಮುಲ್ಲಾಖಾನ್, ಉಪಾಧ್ಯಕ್ಷೆ ನಾಗರತ್ನ, ಸದಸ್ಯರಾದ ಬಸವರಾಜ್, ಪ್ರಕಾಶ್ ತಂಗಳವಾಡಿ, ಮೇನಕ, ಲತಾ, ಸೋಮೇಶ್, ಕೋಮಲ, ಪುಷ್ಪ, ಹಾಜಿರಾ, ಪ್ರಮುಖರಾದ ಕಲಸೆ ಚಂದ್ರಪ್ಪ, ಅಶೋಕ್ ಬೇಳೂರು,ಅಬ್ದುಲ್ ರಜಾಕ್, ರಂಗಸ್ವಾಮಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t








