ವಿಶೇಷ ವರದಿ ✒️✒️.. ಅಮಿತ್, ಆರ್. ಆನಂದಪುರ.
ಆನಂದಪುರ:ಗಾಂಧಿಜೀ ಅವರ ಸ್ವಚ್ಛ ಭಾರತದ ಕನಸು ಇನ್ನು ಆನಂದಪುರ ಗ್ರಾಮ ಪಂಚಾಯತ್ ಅಲ್ಲಿ ನನಸಾಗದೇ ಹಾಗೆ ಉಳಿದಿರುವ ಸ್ಥಿತಿ ಎದುರಾಗಿದೆ.
ಗ್ರಾಮ ಪಂಚಾಯ್ತಿ ಮುಂಭಾಗದಲ್ಲಿಯೇ ಕಾಡು ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದು ನಿಂತರೂ ಗ್ರಾಮ ಪಂಚಾಯಿತಿ ಸಿಬ್ಬಂದಿ, ಜನಪ್ರತಿನಿಧಿಗಳಾಗಲಿ ಗಮನಹರಿಸುತ್ತಿಲ್ಲ: ಅಲ್ಲದೆ ಹಲವು ಕಡೆ ಚರಂಡಿ ಸಹ ಕಾಣದೆ ಹಾಗೇ ಸಂಪೂರ್ಣ ಮುಚ್ಚಿ ಹೋಗುವ ಹಂತ ತಲುಪಿದ್ದರು ಸ್ಥಳೀಯ ಆಡಳಿತ ಮಾತ್ರ ಅದಕ್ಕೂ ತನಗೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿರುವುದು ಗ್ರಾಮಸ್ಥರಲ್ಲಿ ಅಸಹನೆ ಮೂಡಿಸಿದೆ.

ಸ್ಥಳೀಯ ಸರ್ಕಾರಗಳಿಗೆ ಗ್ರಾಮದ ಮೂಲಸೌಲಭ್ಯಗಳ ಅಭಿವೃದ್ಧಿಗಾಗಿ ಹಾಗೂ ಸ್ವಚ್ಛತೆಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ನೀಡುವ ಅನುದಾನವನ್ನು ಗ್ರಾಮ ಪಂಚಾಯಿತಿ ಏನು ಮಾಡುತ್ತಿದೆ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ಗ್ರಾಮ ಪಂಚಾಯತ್ ಅವರಣೆವನ್ನೇ ಇವರು ಸ್ವಚ್ಚತೆ ಮಾಡದೆ ಉದಾಸೀನ ತೋರುವ ಗ್ರಾಮ ಆಡಳಿತ ಇನ್ನು ಸ್ವಚ್ಛ ಗ್ರಾಮ ಮಾಡುವಲ್ಲಿ ಹೇಗೆ ಯಶಸ್ವಿಯಾಗುತ್ತಾರೆ ಎಂಬುದು ಗ್ರಾಮಸ್ಥರಲ್ಲಿ ಪ್ರಶ್ನೆ ಕಾಡುತ್ತಿದೆ.

*ಮಳೆಗಾಲದಲ್ಲಿ ಚರಂಡಿ ಸ್ವಚ್ಛ ಮಾಡದ ಗ್ರಾಮ ಪಂಚಾಯತ್:*
ಈ ಬಾರಿ ಆನಂದಪುರ ವ್ಯಾಪ್ತಿಯಲ್ಲಿ ಬಹಳಷ್ಟು ಮಳೆಯಾಗಿದ್ದು ಗ್ರಾಮಗಳ ನೀರು ಸರಾಗ ವಾಗಿ ಹರಿದು ಹೋಗಲು ಆನಂದಪುರ ಗ್ರಾಮ ಪಂಚಾಯತ್ ಚರಂಡಿ ಯಲ್ಲಿ ಇರುವ ಕಸ ಕಡ್ಡಿ, ಗಿಡಗಂಟಿಗಳನ್ನು ಹಾಗೂ ಚರಂಡಿ ಮಣ್ಣನು ತೆಗೆಯದೆ ಅವ್ಯವಸ್ಥೆ ಉಂಟಾಗಿದೆ ಎಂಬುದು ಇಲ್ಲಿನ ಗ್ರಾಮಸ್ಥರು ಸ್ಥಳಿಯಾಡಳಿತದ ವಿರುದ್ಧ ಗಂಭೀರವಾಗಿ ಆರೋಪಿಸಿದ್ದಾರೆ.

ಇನ್ನಾದರೂ ಸ್ಥಳೀಯ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಕಣ್ತೆರೆದು ಗ್ರಾಮ ಪಂಚಾಯ್ತಿ ಎದುರಿನ ಅವ್ಯವಸ್ಥೆ ಸರಿ ಪಡಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಇಲ್ಲಿನ ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ.
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









