ತೀರ್ಥಹಳ್ಳಿ: ತಾಲೂಕಿನ ಆರಗ ಸಮೀಪದ ಬೀಸು ಗ್ರಾಮದಲ್ಲಿ ಮೂರು ಅರೆಗಳಿರುವ ವೀರಗಲ್ಲೊಂದು ದೊರೆತಿದ್ದು ಇದನ್ನು ಕೆಳದಿ ಅರಸ ಕಾಲದ್ದೆಂಬುದು ತಜ್ಞರ ಅಭಿಪ್ರಾಯವಾಗಿದೆ.
ಬೀಸು ಗ್ರಾಮದವರಾದ ನಂದನ್ ಎನ್ನುವವರು ಶೋ ಧಿಸಿರುವ ಈ ವೀರಗಲ್ಲಿನಲ್ಲಿ ಮೂರು ಅರೆಗಳಿದ್ದು ಕೆಳಗಿನ ಅರೆಯಲ್ಲಿ ಯುದ್ಧದ ಚಿತ್ರಣವಿದೆ. ಇದರಲ್ಲಿ ಚಿತ್ರಿಸಲಾಗಿರುವ ಸೈನಿಕರ ಕಾದಾಟದ ಚಿತ್ರವನ್ನು ಗಮನಿಸಿದರೆ ದೊಡ್ಡ ಮಟ್ಟದ ಹೋರಾಟವೇ ನಡೆದಿರುವ ಸಾಧ್ಯತೆ ಇದೆ ಎಂದೂ ಊಹಿಸಲಾಗಿದೆ.
ಸೇನೆಯ ಪ್ರಮುಖ ಹುದ್ದೆ ಯಲ್ಲಿದ್ದವನಾಗಿದ್ದು ವೀರಾವೇಶದಿಂದ ಹೋರಾಡಿ ಶತ್ರುಗಳಿಂದ ವೀರಸ್ವರ್ಗ ಸೇರಿದ್ದಾನೆಂಬಂತೆ ಇದೆ.ಎರಡನೇ ಅರೆಯಲ್ಲಿ ಈತನನ್ನು ಅಪ್ಸರೆಯರು ಪಲ್ಲಕ್ಕಿಯಲ್ಲಿ ದೈವ ಸಾನಿಧ್ಯಕ್ಕೆ ಕೊಂಡೊಯ್ಯುತ್ತಿರುವ ದೃಶ್ಯ ಇದ್ದು ಮೂರನೇ ಅರೆಯಲ್ಲಿ ಈ ವೀರನ್ ದೈವ ಸಾನಿಧ್ಯದಲ್ಲಿ ಇರುವಂತೆ ಚಿತ್ರಿಸಲಾಗಿದೆ.

ಯುದ್ಧದಲ್ಲಿ ವೀರ ಮರಣ ಹೊಂದಿದ ಶೂರನ ನೆನಪಿಗಾಗಿ ಈ ವೀರಗಲ್ಲನ್ನು ಬೀಸು ಗ್ರಾಮದಲ್ಲಿ ನಿಲ್ಲಿಸಲಾಗಿದೆ. ಮಣ್ಣಿನಲ್ಲಿ ಹೂತು ಹೋಗಿದ್ದ ಐತಿಹಾಸಿಕ ಮಾಹಿತಿಯನ್ನು ಹೊಂದಿರುವ ಈ ವೀರಗಲ್ಲನ್ನು ಈ ಗ್ರಾಮದವರೇ ಆಗಿರುವ ನಂದನ್ ಮತ್ತು ಸಂಗಡಿಗರು ರಕ್ಷಿಸಲು ಆಸಕ್ತಿ ಹೊಂದಿದ್ದಾರೆ ಎಂದು ಕರ್ನಾಟಕ ಇತಿಹಾಸ ಅಕಾಡೆಮಿಯ ಸದಸ್ಯ ಎಲ್.ಎಸ್.ರಾಘವೇಂದ್ರ ತಿಳಿಸಿದ್ದಾರೆ.
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









