Home Blog 24 ಗಂಟೆ ಒಳಗೆ ಕದೀಮನನ್ನು ಸೆರೆಹಿಡಿದ ಪಿಎಸ್ಐ ಪ್ರವೀಣ್ ರವರ ತಂಡ..!!

24 ಗಂಟೆ ಒಳಗೆ ಕದೀಮನನ್ನು ಸೆರೆಹಿಡಿದ ಪಿಎಸ್ಐ ಪ್ರವೀಣ್ ರವರ ತಂಡ..!!

233
0

ಆನಂದಪುರ:

ಆನಂದಪುರ ಸಮೀಪದ ಆಚಾಪುರ ಬಸ್ ನಿಲ್ದಾಣದ ಹಿಂದೆ ರಾತ್ರಿ ನಿಲ್ಲಿಸಿದ ಲಗೆಜ್ ಆಟೋ ಬೆಳಗ್ಗೆ ಕಣ್ಮರೆ ಯಾಗಿದ್ದು,ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ 24 ಗಂಟೆಯೊಳಗೆ ಕಳ್ಳ ಖದೀಮನನ್ನು ಆನಂದಪುರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರವೀಣ್ ಸೆರೆ ಹಿಡಿದಿದ್ದಾರೆ.

ಶೇಕ್ ಮಿರಾನ್ ತಂದೆ ಮೊಹಮ್ಮದ್ ರವರ ಲಗೇಜ್ ಆಟೋ ದಿನಾಂಕ 12/11/25 ರ ರಾತ್ರಿ ಆಚಾಪುರ ಬಸ್ ನಿಲ್ದಾಣದ ಹಿಂಭಾಗದಲ್ಲಿ ನಿಲ್ಲಿಸಿದ್ದು ಬೆಳಗ್ಗೆ ನೋಡುವಷ್ಟರಲ್ಲಿ ಕಾಣೆಯಾಗಿದ್ದು ಈ ಕುರಿತು ಆನಂದಪುರ ಪೊಲೀಸ್ ಠಾಣೆಯಲ್ಲಿ 15/11/25 ರಂದು ದೂರು ದಾಖಲಿಸಿದ್ದರು.

ಈ ಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚುವ ಕುರಿತು ಮಾನ್ಯ ಪೊಲೀಸ್ ಅಧೀಕ್ಷಕರಾದ ಜಿ.ಕೆ. ಮಿಥುನ್ ಕುಮಾರ್ ಐಪಿಎಸ್, ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕಾರಿಯಪ್ಪ ಮತ್ತು ರಮೇಶ್ ಹಾಗೂ ಸಾಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷರಾದ ಶ್ರೀ ಕೇಶವ ಕೆಇ. ಸಾಗರ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಶ್ರೀ ಸಂತೋಷ್ ಶೆಟ್ಟಿರವರ ಮಾರ್ಗದರ್ಶನದಲ್ಲಿ ಆನಂದಪುರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರವೀಣ್ ಎಸ್.ಪಿ ಅವರ ತಂಡ ಪ್ರಕರಣ ದಾಖಲಾಗಿದ 24 ಗಂಟೆಯೊಳಗೆ ಕಳ್ಳನನ್ನು ಪತ್ತೆ ಹಚ್ಚಲು ಯಶಸ್ವಿಯಾಗಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಯವರಾದ ಇಂದ್ರೇಶ್, ಪ್ರಶಾಂತ್, ಹೆಚ್.ಸಿ ಪರಶುರಾಮ್, ಪಿಸಿ ಉಮೇಶ್ ಲಮಾಣಿ, ಪಿಸಿ ಸಂತೋಷ್, ಪಿಸಿ ಸುನಿಲ್, ನಿರಂಜನ್ ಪಾಲ್ಗೊಂಡು ಆರೋಪಿಯನ್ನು ಸೆರೆಹಿಡಿಡಿದ್ದಾರೆ.

ಈ ಕುರಿತು ಕಾರ್ಯಾಚರಣೆಯಲ್ಲಿ ಭಾಗವಹಿಸಿದ ತಂಡದ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ರವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t