ಆನಂದಪುರ:ಇತಿಹಾಸ ಪ್ರಸಿದ್ದವಾದ ಮುರುಘಾಮಠದ ಕಂಚಿನ ರಥ ದೀಪೋ ತ್ಸವ, ಶರಣ ಸಾಹಿತ್ಯ ಸಮ್ಮೇಳನ, ಭಾವೈಕ್ಯ ಸಮ್ಮೇಳನ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ. 20ರಂದು ಆನಂದಪುರಂ ಮುರುಘಾಮಠದ ಆವರಣದಲ್ಲಿ ನಡೆಯಲಿದೆ ಎಂದು ಮುರುಘಾಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ತಿಳಿಸಿದರು.
ಅವರು ಆನಂದಪುರಂ ಮುರುಘಾಮಠದಲ್ಲಿ ಭಾನುವಾರ ಪತ್ರಕರ್ತರಿಗೆ ಮಾಹಿತಿ ನೀಡಿದ ಶ್ರೀಗಳು, ದಾಸೋಹ, ಆರೋಗ್ಯ, ಧಾರ್ಮಿಕ ಹಾಗೂ ಭಾವೈಕ್ಯತೆಯಿಂದ ಕೂಡಿರುವ ಮುರುಘಾಮಠದ ಕಾರ್ತಿಕ ದೀಪೋತ್ಸವ ಇಡೀ ರಾಜ್ಯದಲ್ಲಿಯೆ ಹೆಸರುವಾಸಿಯಾಗಿದೆ ಎಂದರು.
ಬೆಳಿಗ್ಗೆ 5-30ಕ್ಕೆ ಮುರುಘರಾಜೇಂದ್ರ ಗದ್ದುಗೆಗೆ ವಿಶೇಷ ಪೂಜೆ ನಡೆಯಲಿದ್ದು, 9-30ಕ್ಕೆ ಷಟಸ್ಥಲ ಧ್ವಜಾರೋಹಣವನ್ನು ಕುಂದಗೋಳು ಕಲ್ಯಾಣಪುರ ಮಠದ ಶ್ರೀ ಬಸವಣ್ಣಜ್ಜ ಸ್ವಾಮಿಗಳು ನೆರವೇರಿಸಲಿದ್ದಾರೆ.

ಬೆಳಿಗ್ಗೆ 10ಕ್ಕೆ ಶರಣ ಸಾಹಿತ್ಯ ಸಮ್ಮೇಳನ ಹಾಗೂ 597ನೇ ಮಾಸಿಕ ಶಿವಾನುಭವ ಗೋಷ್ಟಿಯ ಸಾನಿಧ್ಯವನ್ನು ಡಾ. ಮಲ್ಲಿಕಾ ರ್ಜುನ ಮುರುಘರಾಜೇಂದ್ರ ಸ್ವಾಮಿಗಳು ವಹಿಸಲಿದ್ದು, ಶ್ರೀ ಶಿವಮೂರ್ತಿ ಮಹಾ ಸ್ವಾಮಿಗಳು ಉದ್ಘಾಟಿಸಲಿದ್ದಾರೆ. ತೊಗರ್ಸಿ ಹಿರೆಮಠದ ಮಹಾಂತ ಶಿವಾಚಾರ್ಯ ಸ್ವಾಮಿಗಳು ಅಧ್ಯಕ್ಷತೆ ವಹಿಸಲಿದ್ದಾರೆ. ಆರೋಗ್ಯ ತಪಾಸಣೆ ಶಿಬಿರವನ್ನು ಡಾ. ಕೆ.ಎಸ್.ನಟರಾಜ್ ಉದ್ಘಾಟಿಸಲಿದ್ದಾರೆ. ನಂತರ ಯುವಜನರಲ್ಲಿ ನಾಯಕತ್ವ ಗುಣ ಬೆಳೆಸಲು ಅವರನ್ನು ಸನ್ಮಾರ್ಗದತ್ತ ಕರೆದೊಯ್ಯಲು ಧಾರವಾಡದ ಮಹೇಶ್ ಮಾಶಾಲ್ ಅವರಿಂದ ವ್ಯಕ್ತಿತ್ವ ವಿಕಸನಕುರಿತು ಉಪನ್ಯಸ ಇರುತ್ತದೆ ಎಂದರು.
ಸಂಜೆ 4ಕ್ಕೆ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀಗಳ ಸಾನಿಧ್ಯದಲ್ಲಿ ನಡೆಯುವ ಭಾವೈಕ್ಯ ಸಮ್ಮೇಳನವನ್ನು ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮಿಗಳು ಉದ್ಘಾಟಿ ಸಲಿದ್ದಾರೆ. ಶ್ರೀ ರೇಣುಕಾನಂದ ಸ್ವಾಮಿಗಳು ಉಪಸ್ಥಿತರಿರುವರು. ಸಚಿವ ಮಧುಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಗೋಪಾಲಕೃಷ್ಣ ಬೇಳೂರು, ಎಸ್.ಎನ್.ಚನ್ನಬಸಪ್ಪ, ಬಿ.ಕೆ.ಸಂಗಮೇಶ್, ವಿಧಾನ ಪರಿಷತ್ ಸದಸ್ಯರುಗಳು, ವಿವಿಧ ಪ್ರಮುಖರು ಉಪಸ್ಥಿತರಿರುವರು.

ಇದೆ ಸಂದರ್ಭದಲ್ಲಿ ‘ಬೆಂಗಳೂರು ಐಕ್ಯಾಟ್ ಏರ್ ಅಂಬ್ಯುಲೆನ್ಸ್ ಸಂಸ್ಥಾಪಕ ನಿರ್ದೇಶಕಿ ಶಾಲಿನಿ ನಾಲ್ವಾಡ್ ಅವರಿಗೆ ಕೆಳದಿ ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿ ಪುರಸ್ಕರಿಲಾಗುತ್ತದೆ.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೋಣಂದೂರು ಲಿಂಗಪ್ಪ, ಪತ್ರಕರ್ತ ಜಿ.ನಾಗೇಶ್, ಹಿರಿಯ ಎಂ.ಬಿ.ಪುಟ್ಟಸ್ವಾಮಿ ನ್ಯಾಯವಾದಿ ಅವರಿಗೆ ಸಮಾಜಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಬಿ.ಟಾಕಪ್ಪ, ವಿ.ಟಿ.ಸ್ವಾಮಿ, ಸುಭಾಷ್ ಕೌತಳ್ಳಿ ಸೇರಿ ಎಂಟು ಸಾಧಕರಿಗೆ ಗುರುರಕ್ಷೆ ನೀಡಲಾಗುತ್ತದೆ.
ಇದೇ ಸಂದರ್ಭದಲ್ಲಿ ಸಂಧ್ಯಾ ಶೆಣೈ ಅವರಿಂದ ವಿಶೇಷ ಉಪನ್ಯಾಸ ಇರುತ್ತದೆ. ನಂತರ ಕಂಚಿನ ರಥೋತ್ಸವ, ಹೂವಿನ ಪಲ್ಲಕ್ಕಿ, ಪಟಾಕಿ ಸೇವೆ ಇರುತ್ತದೆ. ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದರು.

ಈ ಸಂದರ್ಭದಲ್ಲಿ ದೀಪೋತ್ಸವ ಸಮಿತಿಯ ಅಧ್ಯಕ್ಷರಾದ ವಿಜಯ್ ಕುಮಾರ್ ಬಿ .ಆಚಾಪುರ, ರಾಜೇಂದ್ರ ಮಲಂದೂರು, ಮಧುಸೂದನ, ದೇವೇಂದ್ರಗೌಡ್ರು, ಸೋಮಶೇಖರ್, ರಾಜೇಂದ್ರ , ಮುರುಗೇಶಪ್ಪಗೌಡ್ರು, ಶಿವಕುಮಾರ್, ಯೋಗೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.









