ಆನಂದಪುರ ಸುತ್ತಮುತ್ತಲಿನ ಗ್ರಾಮದಲ್ಲಿ ಭಾನುವಾರ ರಾತ್ರಿ ರೈತರ ಜಮೀನಿಗೆ ಒಂಟಿ ಸಲಗ ಪ್ರತ್ಯಕ್ಷವಾಗಿದೆ.
ಆನಂದಪುರ ಸಮೀಪದ ಆಚಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೆಣಸಿನಸರ ಹಾಗೂ ತಂಗಳವಾಡಿ ಗ್ರಾಮಗಳಲ್ಲಿ ಭಾನುವಾರ ರಾತ್ರಿ ರೈತರ ಬತ್ತದ ಗದ್ದೆಯಲ್ಲಿ ಒಂಟಿ ಸಲಗ ಕಾಣಿಸಿಕೊಂಡಿದೆ.
ತಕ್ಷಣ ರೈತರು ಅರಣ್ಯ ಅಧಿಕಾರಿಗಳಿಗೆ ವಿಷಯ ತಿಳಿಸಲು ಮುಂದಾಗಿದ್ದಾರೆ. ಕೂಡಲೇ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಬಂದು ಗ್ರಾಮಸ್ಥರ ಸಹಕಾರದೊಂದಿಗೆ ಒಂಟಿ ಸಲಗವನ್ನು ಓಡಿಸಲು ಮುಂದಾಗಿದ್ದಾರೆ.

ಆತಂಕದಲ್ಲಿ ರೈತರು:
ಕಳೆದ ಮೂರು ವರ್ಷಗಳಿಂದ ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಕಾಡಾನೆಗಳ ಹಾವಳಿ ಆನಂದಪುರ ಹೋಬಳಿಯ ವ್ಯಾಪ್ತಿಯಲ್ಲಿ ಹೆಚ್ಚಾಗಿದ್ದು ಇದರಿಂದ ರೈತರು ಬೆಳೆದ ಬೆಳೆಗಳನ್ನು ಆನೆ ಬಹಳಷ್ಟು ಹಾನಿ ಮಾಡಿದ್ದು ಇದರಿಂದ ರೈತರು ಈ ಬಾರಿ ಆನೆ ಬಂದ ಸುದ್ದಿ ಕೇಳಿ ಆತಂಕಕ್ಕೆ ಒಳಗಾಗಿದ್ದಾರೆ.
ಈಗ ಆನೆ ಎಲ್ಲಿದೆ..? ಎಷ್ಟಿದೆ..?
ಕೊಲ್ಲಿ ಬಚ್ಚಲು ಡ್ಯಾಂ ಬಳಿ ಆನೆ ಈಗ ಇರಬಹುದು ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ . ಸದ್ಯಕ್ಕೆ ಎಷ್ಟು ಆನೆಗಳು ಬಂದಿದ್ದಾವೆ ಎಂದು ನಮಗೆ ತಿಳಿದಿಲ್ಲ ನಮ್ಮ ಕಣ್ಣಿಗೆ ಒಂದೇ ಆನೆ ಕಾಣಿಸಿಕೊಂಡಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









