ಮನೆ ಶಿವಮೊಗ್ಗ ಹೊಸಕೊಪ್ಪ ಸಹಕಾರ ಸಂಘದ ಅಧ್ಯಕ್ಷರಾಗಿ ರಾಮಚಂದ್ರ ಹಾಬಿಗೆ, ಉಪಾಧ್ಯಕ್ಷರಾಗಿ ಚಂದ್ರರಾಜ್ ಜೈನ್ ಆಯ್ಕೆ.

ಹೊಸಕೊಪ್ಪ ಸಹಕಾರ ಸಂಘದ ಅಧ್ಯಕ್ಷರಾಗಿ ರಾಮಚಂದ್ರ ಹಾಬಿಗೆ, ಉಪಾಧ್ಯಕ್ಷರಾಗಿ ಚಂದ್ರರಾಜ್ ಜೈನ್ ಆಯ್ಕೆ.

109
0

ಸಾಗರ:
ತಾಲ್ಲೂಕಿನ ಕರೂರು ಹೋಬಳಿಯ ಸಂಕಣ್ಣ ಶ್ಯಾನುಭೋಗ ಗ್ರಾಮದಲ್ಲಿ ನೂತನವಾಗಿ ಆರಂಭವಾದ ಹೊಸಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎರೆಡು ಸ್ಥಾನಗಳಿಗೆ ಚುನಾವಣೆ ಸೋಮವಾರ ಬೆಳಿಗ್ಗೆ ನೆಡೆಯಿತು.

ಗ್ರಾಮದ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನೆಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ರಾಮಚಂದ್ರ ಹಾಬಿಗೆ, ಉಪಾಧ್ಯಕ್ಷರಾಗಿ ಚಂದ್ರರಾಜ್ ಮಳೂರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಭೋಗರಾಜ್ ಘೋಷಿಸಿದ್ದಾರೆ.

ಚುನಾವಣಾ ಸಭೆಯಲ್ಲಿ ಸಂಘದ 12 ಮಂದಿ ನಿರ್ದೇಶಕರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಚುನಾವಣಾಧಿಕಾರಿಗಳು ಸಂಘದ ನಿರ್ದೇಶಕರಿಗೆ ಪ್ರಮಾಣ ಪತ್ರ ವಿತರಿಸಿದರು.

ಚುನಾವಣೆ ಬಳಿಕ ಅಧ್ಯಕ್ಷ ರಾಮಚಂದ್ರ ಹಾಬಿಗೆ ಮಾತನಾಡಿ, ಅವಿರೋಧವಾಗಿ ಅಧ್ಯಕ್ಷರಾಗಲು ಸಹಕಾರ ನೀಡಿದ ನಿರ್ದೇಶಕರು ಹಾಗೂ ಸದಸ್ಯರೆಲ್ಲರ ವಿಶ್ವಾಸದೊಡನೆ ಸಂಘದ ಅಭಿವೃದ್ಧಿಗೆ ದುಡಿಯುವುದಾಗಿ ತಿಳಿಸಿದರು.

ಸಂಘದ ನಿರ್ದೇಶಕರಾದ ರತಿ, ಕೊಲ್ಲಪ್ಪ, ಪುಷ್ಪಾವತಿ, ಅನಿತಾ, ವಿಜಯ, ರವೀಂದ್ರ ಕಂಚಿಕೇರಿ, ಸುಧೀಂದ್ರ ಹೊಸಕೊಪ್ಪ, ಸುಬ್ರಹ್ಮಣ್ಯ ಭಟ್, ಜಿನದತ್ತ, ಶ್ರೀಧರ್ ಇದ್ದರು.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ;https://chat.whatsapp.com/CnYYumPSez6AMYyw8cHG9A?mode=ac_t