ಮನೆ ಶಿವಮೊಗ್ಗ ಸಮಯ ಪ್ರಜ್ಞೆ ಮೆರೆದು ಚಾಲಕನ ಪ್ರಾಣ ಕಾಪಾಡಿದ ಮಧುಗೆ ಶೌರ್ಯ ಪ್ರಶಸ್ತಿ..

ಸಮಯ ಪ್ರಜ್ಞೆ ಮೆರೆದು ಚಾಲಕನ ಪ್ರಾಣ ಕಾಪಾಡಿದ ಮಧುಗೆ ಶೌರ್ಯ ಪ್ರಶಸ್ತಿ..

175
0

ಆನಂದಪುರ ಸಮೀಪದ ಯಡೇಹಳ್ಳಿ ಗ್ರಾಮ ಪಂಚಾಯತಿಯ ಹಾರಿಬೀಸು ಗ್ರಾಮದ ಕಲ್ಕೆರೆಯ ಮಧು ಎಂ ಆರ್ ಗೆ 2025 26 ನೇ ಸಾಲಿನ ಶೌರ್ಯ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಿಸಿದೆ.ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಕಲ್ಕೆರೆ ಗ್ರಾಮದ ರಾಮಚಂದ್ರ ಮತ್ತು ಸುಶೀಲಾ ರವರ ಮಗನಾದ ಎಂ ಆರ್ ಮಧು ಎಡೇಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಭಾನುವಾರ ಶಾಲೆ ರಜಾ ಇದ್ದ ಸಮಯದಲ್ಲಿ ತನ್ನ ಮನೆಯ ಎದುರಿನ ಗದ್ದೆಯಲ್ಲಿ ಭತ್ತದ ಹುಲ್ಲು ಪಿಂಡಿ ಕಟ್ಟುವ ಯಂತ್ರದ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಶಿಕಾರಿಪುರ ತಾಲೂಕಿನ ಬನ್ನೂರು ಗ್ರಾಮದ ಮದನ್ ಎಂಬುವರ ಕೈಯು ಆಕಸ್ಮಿಕವಾಗಿ ಯಂತ್ರಕ್ಕೆ ಸಿಲುಕಿ ಆತ ಜೋರಾಗಿ ಕೂಗಿ ಕೊಳ್ಳುತ್ತಿದ್ದ.

ಆ ಸಂದರ್ಭದಲ್ಲಿ ಮಧು ಎಮ್ ಆರ್ ತಕ್ಷಣ ಸ್ಥಳಕ್ಕೆ ಬಂದು ಟ್ಯಾಕ್ಟರ್ ಮಿಷನ್ ಆಫ್ ಮಾಡುವ ಮೂಲಕ ಯಂತ್ರದ ಒಳಗೆ ಸಿಲುಕಿದ ಕೈಯನ್ನ ಹೊರೆ ತೆಗೆಯುವುದರೊಂದಿಗೆ ಚಾಲಕನ ಪ್ರಾಣ ರಕ್ಷಣೆ ಮಾಡಿರುತ್ತಾರೆ.

ಮಧು ಎಂ ಆರ್ ಪ್ರಸ್ತುತ ಈಗ ಸೊರಬ ತಾಲೂಕು ನಿಶರಾಣಿಯ ಸರ್ಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಾನೆ ಎಂದು ತಿಳಿದು ಬಂದಿದೆ.

ಬಾಲಕನ ಸಮಯ ಪ್ರಜ್ಞೆಯೊಂದಿಗೆ ಚಾಲಕನ ಪ್ರಾಣ ಕಾಪಾಡಿದ ಮಧುಗೆ 2025-26 ನೇ ಸಾಲಿನ ಶೌರ್ಯ ಪ್ರಶಸ್ತಿ ಲಭಿಸುತ್ತಿರುವುದು ಇಡೀ ಆನಂದಪುರ ಹೋಬಳಿಯೇ ಸಂತಸ ಪಡುತ್ತಿದೆ.

ಶೌರ್ಯ ಪ್ರಶಸ್ತಿಗೆ ಭಾಜನರಾಗಿರುವ ಬಾಲಕ ಮಧು ಎಂ ಆರ್ ರವರಿಗೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅರುಣ್ ಪ್ರಸಾದ್ ರವರು ಗೌರವಿಸಿ ವೈಯಕ್ತಿಕವಾಗಿ ಧನ ಮಾಡುವುದರ ಮೂಲಕ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ ಡಿ ರವಿಕುಮಾರ್ ಕನ್ನಡ ಯುವಕ ಸಂಘದ ಮಾಜಿ ಅಧ್ಯಕ್ಷರಾದ ನಾಗರಾಜ್. ಪ್ರಮುಖರಾದ ಶಿವಕುಮಾರ್. ಅನಿಲ್, ಸತೀಶ್,ತಮ್ಮಯ್ಯ ಕಲ್ಕರೆ ,ಸುಧಾರಾಣಿ ಕಲ್ಕೆರೆ ಇನ್ನಿತರರು ಉಪಸ್ಥಿತರಿದ್ದರು.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t