ಆನಂದಪುರ:ಕನ್ನಡ ಉಳಿಯಬೇಕು ಎಂದರೆ ಕನ್ನಡ ಶಾಲೆಗಳು ಉಳಿಸಬೇಕು ಎಂದು ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮಿಗಳು ತಿಳಿಸಿದರು.
ಇವರು ಆನಂದಪುರ ಬಸ್ ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಆಟೋ ಚಾಲಕರು ಮತ್ತು ಮಾಲೀಕರು ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕದಲ್ಲಿ ಪರಭಾಷೆ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಕವಾಗಿ ಹರಡುತ್ತಿದೆ ,ಎಲ್ಲಾ ಅಂಗಡಿ ಮುಂಗಟ್ಟುಗಳಿಲ್ಲಿ ಕನ್ನಡ ಹೊರತಾಗಿ ಪರಭಾಷೆ ನಾಮಫಲಕ ಹೆಚ್ಚಿದೆ ಇದರಿಂದ ಕನ್ನಡಿಗರು ಎಚ್ಚೆತ್ತುಕೊಂಡು ಕನ್ನಡ ನಾಮಫಲಕ ಅಳವಡಿಸಬೇಕು ಎಂದರು.
ಕನ್ನಡ ಭಾಷೆಗೆ ವಿಶೇಷವಾದ ತಾಕತ್ತು ಇದ್ದು ಅದರಲ್ಲೂ ಕನ್ನಡ ಶಾಲೆಯಲ್ಲಿ ಓದಿದ ಮಕ್ಕಳಿಗೆ ಎಲ್ಲವನ್ನೂ ಎದರಿಸುವ,ಹೆದರಿಸುವ ಬಲ ಇದೆ ಎಂದರು.

ಮಾಜಿ ಜಿಲ್ಲಾಪಂಚಾಯತ್ ಸದ್ಯಸ್ಯ ರತ್ನಾಕರ ಹೊನಗೋಡು ಮಾತನಾಡಿ ಜನರೊಂದಿಗೆ ಹೆಚ್ಚಿನ ಒಡನಾಟವನ್ನು ಇಟ್ಟುಕೊಂಡು , ಕನ್ನಡ ನಾಡು ,ನುಡಿ ,ಭಾಷೆ ಬಗ್ಗೆ ಅತಿಯಾದ ಪ್ರೀತಿಯನ್ನೂ ಹೊಂದಿ ಕನ್ನಡ ವಿಷದಲ್ಲಿ ಹೋರಾಟ ಅಂತ ಬಂದ್ರೆ ಮುಂಚೂಣಿಯಲ್ಲಿ ಇರುವವರು ನಮ್ಮ ಆಟೋ ಚಾಲಕರು ಮತ್ತು ಮಾಲೀಕರು ಎಂದು ಪ್ರಶಂಶೀಯ ನುಡಿಗಳನ್ನಾಡಿದರು.

ಆನಂದಪುರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರವೀಣ್ ಮಾತನಾಡಿ ನಾನು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರಿಂದ ದೇಶದ ಅನೇಕ ರಾಜ್ಯಗಳಿಗೆ ಭೇಟಿ ನೀಡಿದ್ದೇನೆ ಆದರೆ ಎಲ್ಲಾ ರಾಜ್ಯಗಳಿಗಿಂತ ವಿಭಿನ್ನ ಸಂಸ್ಕೃತಿ ,ಭಾಷೆ , ನೆಲ,ಜಲವನ್ನು ಹೊಂದಿರುವ ನಾಡು ನಮ್ಮದಾಗಿದೆ ಎಂದು ಕನ್ನಡ ನಾಡಿದ ವೈವಿಧ್ಯತೆಯ ಬಗ್ಗೆ ವಿವರವಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ರಾಘವೇಂದ್ರ ಸಿ ವಹಿಸಿಕೊಂಡಿದ್ದು ಮತ್ತು ಗ್ರಾ.ಪಂ.ಅಧ್ಯಕ್ಷ ಗುರುರಾಜ್ ,ಮಹೇಶ್ ಬೀಸನಗದ್ದೆ ಹಾಗೂ ಗೋಪಾಲ ,ಗಣಪತಿ ಇನ್ನಿತರರು ಪಾಲ್ಗೊಂಡಿದ್ದರು.

ವಿಶೇಷವಾಗಿ ವೇದಿಕೆಯಲ್ಲಿ ಹಿರಿಯ ಆಟೋ ಚಾಲಕರಿಗೆ, ವೀರ ಯೋಧರಿಗೆ,ರೈತರಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ , ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಮರಣದ ನಂತರ ದೇಹ ದಾನ ಮಾಡಿದವರಿಗೆ ಸನ್ಮಾನಿಸಲಾಯಿತು.
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ;https://chat.whatsapp.com/CnYYumPSez6AMYyw8cHG9A?mode=ac_t









