ಆನಂದಪುರ: ಸಮೀಪದ ಎಡೇಹಳ್ಳಿ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ದೇವಾಲಯದಲ್ಲಿ 237 ನೇ ಸಂಕಷ್ಟಹರ ಚತುರ್ಥಿ ನಡೆಯಲಿದೆ.
ಇದೇ ಡಿಸೆಂಬರ್ 8ರಂದು ಅಂದರೆ ನಾಳೆಯ ಸೋಮವಾರ ಬೆಳಗ್ಗೆ ಗಣ ಹೋಮ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.

ಸಂಜೆ ವೇಳೆಗೆ ಸಂಕಷ್ಟ ಹರ ಪೂಜೆ ,ರಾತ್ರಿ 9:38 ಚಂದ್ರೋದಯದ ನಂತರ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಂತರ ಸಾಮೂಹಿಕ ಅನ್ನಸಂತರ್ಪಣ ಕಾರ್ಯ ನೆರವೇರಲಿದೆ ಈ ಕಾರ್ಯಕ್ರಮಕ್ಕೆ ಭಕ್ತಾದಿಗಳು ಬಂದು ದೇವರ ಕೃಪೆಗೆ ಪಾತ್ರರಾಗಬೇಕು ಎಂದು ದೇವಸ್ಥಾನದ ಸಮಿತಿಯವರು ತಿಳಿಸಿದ್ದಾರೆ.
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









