ಆನಂದಪುರ:ಸಾಧನೆ ಮಾಡಿದ ಹಾಗೂ ಸಾಧನೆಯ ಹಾದಿಯಲ್ಲಿರುವ ಸಮಾಜದ ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸಿ ಗೌರವಿಸುವುದರ ಜೊತೆಗೆ ಪ್ರತಿಭೆಗಳಿಗೆ ರಾಜ್ಯದಲ್ಲಿ ಸಹಕರಿಸುವ ಕಾರ್ಯ ರಾಷ್ಟ್ರೀಯ ಮೀನುಗಾರರ ಸಂಘದಿಂದ ನಡೆಯುತ್ತಿದ ಎಂದು ರಾಷ್ಟ್ರೀಯ ಮೀನುಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ ಡಿ ರವಿಕುಮಾರ್ ತಿಳಿಸಿದರು.
ಇವರು ಆಂಧ್ರ ಪ್ರದೇಶದಲ್ಲಿ ನಡೆದ ಅಂತಾರಾಜ್ಯ ವಿಶ್ವವಿದ್ಯಾಲಯದ ವಾಲಿಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿ ಹೋಗಿದ್ದ ರಿಪ್ಪನ್ ಪೇಟೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ಹಂತದ ಬಿಎ ವ್ಯಾಸಂಗ ಮಾಡುತ್ತಿರುವ ಆನಂದಪುರದ ಅಶೋಕ ರಸ್ತೆ ನಿವಾಸಿ ತಿಮ್ಮಪ್ಪ ಹಾಗೂ ಮಂಜುಳಾ ದಂಪತಿ ಪುತ್ರನಾದ ಪ್ರತಾಪ್ ಗೆ ಸನ್ಮಾನಿಸಿ ಮಾತನಾಡಿದರು.

ಯುವಜನಾಂಗ ಕ್ರೀಡೆಗಳಲ್ಲಿಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ. ಜೊತೆಗೆ ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಲು ಸಾಧ್ಯ. ನಮ್ಮ ಸಂಘದಿಂದ ರಾಜ್ಯದಲ್ಲಿರುವ ಕ್ರೀಡಾ ಪ್ರತಿಭೆಗಳಿಗೆ ಬೇಕಾದ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಬೇಕಾದ ಕ್ರೀಡಾತರಬೇತಿಗೆ ಸಹಕರಿಸಲಾಗುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗೆ ಅಭಿನಂದಿಸಿ ಪೊಲೀಸ್ ಸಿಬ್ಬಂದಿ ನಿರಂಜನ್ ಮಾತನಾಡಿ ಶಾಲಾ-ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಭಾಗಿಯಾಗಿ ಉತ್ತಮ ಸಾಧನೆ ಮಾಡುವ ಮೂಲಕ ಮುಂದಿನ ಭವಿಷ್ಯದ ದಿನಗಳಲ್ಲಿ ಉತ್ತಮವಾದ ಜೀವನ ರೂಪಿಸಿಕೊಳ್ಳಿ ಎಂದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮೀನುಗಾರ ಸಂಘದ ರಾಜ್ಯ ಪ್ರಮುಖರಾದ ವೆಂಕಟೇಶ್ ಛಂದಹಳ್ಳಿ,ಸಮಾಜದ ಪ್ರಮುಖರಾದ ನವೀನ, ಅನಿಲ್, ಗಗನ್ ,ಶ್ರೀನಿವಾಸ್ ,ಕುಮಾರ, ರಮ್ಯ ಹಾಗೂ ಇನ್ನಿತರರು ಉಪಸ್ಥಿತರಿತು.









