ಮನೆ ಶಿವಮೊಗ್ಗ ಸುಖಕರ ಜೀವನ ನಡೆಸಲು ಯೋಗ ಮಾಡಿ: ಪಿ.ಎಸ್. ಐ ಪ್ರವೀಣ್…!!

ಸುಖಕರ ಜೀವನ ನಡೆಸಲು ಯೋಗ ಮಾಡಿ: ಪಿ.ಎಸ್. ಐ ಪ್ರವೀಣ್…!!

66
0

ಆನಂದಪುರ: ಒತ್ತಡದ ಜೀವನದಿಂದ ಮುಕ್ತಿ ಹೊಂದಿ ಸುಖಕರ ಜೀವನ ನಡೆಸಲು ಯೋಗ ಮಾಡಿ ಎಂದು ಆನಂದಪುರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರವೀಣ್ ತಿಳಿಸಿದರು.

ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಶಿವಮೊಗ್ಗ ರಕ್ಷಣಾಧಿಕಾರಿಗಳ ಆದೇಶದ ಮೇರೆಗೆ ಮೂರು ದಿನಗಳ ಕಾಲ ಪೊಲೀಸ್ ಸಿಬ್ಬಂದಿಗಳಿಗೆ ಯೋಗ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದ್ದು ಇದನ್ನು ಪೂರ್ಣಗೊಳಿಸಿ ಮಾತನಾಡಿದರು.

ಆಧುನಿಕತೆಯತ್ತ ಹೆಜ್ಜೆ ಹಾಕುತ್ತಿರುವ ಮಾನವನಿಗೆ ಒತ್ತಡದ ಜೀವನದ ನಡುವೆ ಆರೋಗ್ಯ ಕಾಪಾಡಿಕೊಳ್ಳಬೇಕಾದ ಸನ್ನಿವೇಶ ಬಂದೊದಗಿದೆ.ಒತ್ತಡದಿಂದ ಮಾನಸಿಕ, ದೈಹಿಕ ತೊಂದರೆಗಳು ಕಾಣಿಸಿಕೊಂಡು ಆಸ್ಪತ್ರೆ ಬಾಗಿಲು ತಟ್ಟುವ ಬದಲು ಯೋಗ ಮಾಡುವ ಮೂಲಕ ಸದಾಕಾಲ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ತೆರಳಿ ಸಾವಿರಾರು ರೂ.ಖರ್ಚು ಮಾಡಿ ಔಷಧ ಖರೀದಿಸಿ ಅದನ್ನು ಸೇವನೆ ಮಾಡಿದಾಗಲೂ ಆರೋಗ್ಯ ಸುಧಾರಿಸುತ್ತಿಲ್ಲವೆಂದರೆ,ಅದಕ್ಕೆ ಪರಿಹಾರವೆ ಯೋಗವಾಗಿದೆ,ಮನುಷ್ಯರನ್ನುಆರೋಗ್ಯವಂತರನ್ನಾಗಿಸಿ ಔಷಧಿಯಿಂದ ದೂರವಿಡುವ ಮಹಾನ್ ಅಸ್ತ್ರವೇ ಯೋಗ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆನಂದಪುರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಯೋಗಭ್ಯಾಸಕ್ಕೆ ಭಾಗಿಯಾಗಿದ್ದರು.

✒️..ಅಮಿತ್ ಆರ್ ಆನಂದಪುರ

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ