ಸಾಗರ:ಕಾರದಪುಡಿ ಎರಚಿ ಮಾವ ಮತ್ತು ಸೊಸೆಗೆ ಮಾರಣಾಂತಿಕ ಹಲ್ಲೆ ನಡೆಸಲು ಯತ್ನಿಸಿದ ಆರೋಪಿಯ ಕುರುಹು ಪತ್ತೆ ಹಚ್ಚಿ ಐದು ದಿನದೊಳಗೆ ಸೆರೆಹಿಡಿಯಲು ಆನಂದಪುರದ ಪಿ.ಎಸ್.ಐ ಪ್ರವೀಣ್ ಅವರ ತಂಡ ಯಶಸ್ವಿಯಾಗಿದೆ.
ಏನಿದು ಘಟನೆ ಯ ಹಿನ್ನಲೆ :
ಜನವರಿ 5ರಂದು ಸಂಜೆ 7 ರ ಸಮಯದಲ್ಲಿ ತಮ್ಮ ಸೊಸೆ ಶ್ರುತಿ ಅವರನ್ನು ತ್ಯಾಗರ್ತಿ ಸಮೀಪದ ಮಸ್ಕಲ್ ಬೈಲು ಬಸ್ ನಿಲ್ದಾಣದಿಂದ ತಮ್ಮ ಬೈಕಿನಲ್ಲಿ ಕೂರಿಸಿಕೊಂಡು ಮನೆಗೆ ಬರುತ್ತಿದ್ದ ಸಮಯದಲ್ಲಿ ಬೈಕನ್ನು ಅಡ್ಡ ಹಾಕಿ ಕೊಲೆ ಮಾಡುವ ಉದ್ದೇಶದಿಂದ ಅವರ ಮುಖಕ್ಕೆ ಖಾರದಪುಡಿ ಎರಚಿ, ಬೈಕಿನ ಹಿಂಬದಿಯಲ್ಲಿ ಇದ್ದ ಶ್ರುತಿ ಅವರಿಗೆ ಸ್ಟೀಲ್ ರಾಡಿ ನಿಂದ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ.
ಐದು ದಿನದಲ್ಲಿ ಆರೋಪಿ ಸೆರೆ:
ಈ ವಿಷಯವಾಗಿ ಆನಂದಪುರ ಪೊಲೀಸ್ ಠಾಣೆಯಲ್ಲಿ ಜನವರಿ 6 ರಂದು ಪ್ರಕರಣ ದಾಖಲು ಆಗುತ್ತಿದ್ದಂತೆ ಪಿ.ಎಸ್.ಐ ಪ್ರವೀಣ್ ಒಂದು ತಂಡ ರಚಿಸಿಕೊಂಡು ಆರೋಪಿಯ ಶೋಧ ಕಾರ್ಯ ಮುಂದುವರೆಸಿ ಪ್ರಕರಣ ದಾಖಲಾದ ಐದು ದಿನದಲ್ಲಿ ಆರೋಪಿಯನ್ನು ಸೆರೆಹಿಡಿದಿದ್ದಾರೆ.
ಹದ್ದಿನ ಕಾರ್ಯಾಚರಣೆ :
ಗ್ರಾಮಿಣ ಹಳ್ಳಿ ಭಾಗದಲ್ಲಿ ಈ ಘಟನೆ ಆಗಿರುವುದರಿಂದ ಯಾವುದೇ ರೀತಿಯ ಆರೋಪಿಯ ಕುರುವು ಸಿಗದಂತೆ ಆಗಿತ್ತು ಇದರಿಂದ ನಮ್ಮ ತಂಡ ಹಗಲಿರುಳು ಶ್ರಮವಹಿಸಿ ಕಾರ್ಯಾಚರಣೆ ಮಾಡಿ ಆರೋಪಿಯ ಪತ್ತೆ ಹಚ್ಚಲು ಯಶಸ್ವಿಯಾಗಿದ್ದಾರೆ ಎಂದು ಕಾರ್ಯಾಚರಣೆ ಬಗ್ಗೆ ಪಿ.ಎಸ್. ಐ ಪ್ರವೀಣ್ ತಿಳಿಸಿದ್ದಾರೆ.

ಕಾರ್ಯಚರಣೆ ಕುರಿತು ಜನರ ಅಭಿಪ್ರಾಯ:
ಇಂತಹ ಗ್ರಾಮೀಣ ಭಾಗದಲ್ಲಿಯೂ ಆದ ಘಟನೆ ಬಗ್ಗೆ ಹೆಚ್ಚಿನ ಆಸಕ್ತಿವಹಿಸಿ ಆರೋಪಿಯನ್ನು ಸೆರೆ ಹಿಡಿಯಲು ಹದ್ದಿನ ಕಾರ್ಯಾಚರಣೆ ಮಾಡಲು ಮುಂದಾದ ಪೊಲೀಸ್ ತಂಡದ ಕುರಿತು ಜನಸಾಮಾನ್ಯರು ಉತ್ತಮ ಅಭಿಪ್ರಾಯ ವ್ಯಕತಪಡಿಸಿದ್ದಾರೆ.
ಈ ಕಾರ್ಯಾಚರಣೆ ಪೊಲೀಸ್ ಅಧೀಕ್ಷಕರಾದ ಬಿ.ನಿಖಿಲ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರಿಯಪ್ಪ, ಸಾಗರದ ಸಾಗರದ ಉಪ ವಿಭಾಗ ಪೊಲೀಸ್ ಉಪಾಧ್ಯಕ್ಷಕರಾದ ಕೇಶವ್ ಕೆ.ಇ, ಸಾಗರ ಗ್ರಾಮಂತರ ವೃತ ನಿರೀಕ್ಷಕರಾದ ಸಂತೋಷ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಆನಂದಪುರ ಪೊಲೀಸ್ ಠಾಣಾ ಪಿಎಸ್ಐ ಪ್ರವೀಣ್ , ಸಿಡಿ ಆರ್ ಸೆಲ್ ಶಿವಮೊಗ್ಗ ಸಿಬ್ಬಂದಿಯಾದ ಇಂದ್ರೇಶ್, ಗುರು, ಎ.ಎಸ್.ಐ ಸಿದ್ದರೂಡ, ಸಿಬ್ಬಂದಿಗಳಾದ ಪ್ರಶಾಂತ್, ಪರಶುರಾಮ್, ತಾಹಿರ್, ಉಮೇಶ್ ಲಮಾಣಿ, ಹರ್ಷ ಅವರನ್ನು ಒಳಗೊಂಡ ತಂಡ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಲೆಗೆ ಯತ್ನಿಸಿದ ಆರೋಪಿಗಳಾದ ಸೊರಬದ ಗೋವಿಂದ ವೈ, ಕೊಲೆಗೆ ಕುಮಕ್ಕು ನೀಡಿದ ಕಿರಣ್ ಕುಮಾರ್ ಅವರನ್ನ ಬಂಧನ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
✒️.. ಅಮಿತ್ ಆರ್ ಆನಂದಪುರ
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ :https://chat.whatsapp.com/IY9pAkaWjY80mynFTlPYHJ









