ಮನೆ ಶಿವಮೊಗ್ಗ ಮರಳು ದಂಧೆ ವಿರುದ್ಧ 112 ಕ್ಕೆ ದೂರು ನೀಡಿದ ಬೆನ್ನಲ್ಲೆ ವಕೀಲನ ಜೀವಕ್ಕೆ ಬಂತು...

ಮರಳು ದಂಧೆ ವಿರುದ್ಧ 112 ಕ್ಕೆ ದೂರು ನೀಡಿದ ಬೆನ್ನಲ್ಲೆ ವಕೀಲನ ಜೀವಕ್ಕೆ ಬಂತು ಕುತ್ತು..!!

88
0

ಸಾಗರ: ಆನಂದಪುರ /ಅಕ್ರಮ ಮರಳು ಸಾಗಾಟ ವಿರುದ್ಧ 112 ಗೆ ದೂರು ನೀಡಿದ ಹಿನ್ನಲೆ ವಕೀಲನ ಕೊಲೆಗೆ ಯತ್ನ, ಪ್ರಕರಣ ದಾಖಲಾದ ಕೆಲ ಸಮಯದಲ್ಲೇ ನಾಲ್ಕು ಆರೋಪಿ ಬಂದಿಸಿದ ಪಿ.ಎಸ್.ಐ ಪ್ರವೀಣ್ ತಂಡ.

ಯಾರಿದು ವಕೀಲ..?ಏನಿದು ಘಟನೆ..?

ವಕೀಲರಾದ ಶರತ್ ಕುಮಾರ್ ( 28) ತಂದೆ ನಾಗರಾಜ ಇವರು ಹೊಸನಗರದ ಚಂದಳ್ಳಿ ಯವರಾಗಿದ್ದು ಅಕ್ರಮವಾಗಿ ಮರಳು ಸಾಗಾಟದ ವಿರುದ್ಧ 112 ಕ್ಕೆ ದೂರು ನೀಡಿದ ಹಿನ್ನಲೆ ಜ.16 ರಾತ್ರಿ (ಅಂದರೆ ಬೆಳಗಿನ ಜಾವ) 12.30 ಕ್ಕೆ ಕೊಲೆ ಮಾಡುವ ಉದ್ದೇಶದಿಂದ ಎರಡು ಕಾರು ಹಾಗೂ 2 ಬೈಕುಗಳಲ್ಲಿ ದೂರುದಾರರನ್ನು ಹಿಂಬಾಲಿಸಿ ಸಾಗರ ತಾಲೂಕಿನ ಆನಂದಪುರದ ಸಮೀಪದ ಕೊರಲಿಕೊಪ್ಪ ಗ್ರಾಮದ ಈಶ್ವರ ದೇವಸ್ಥಾನದ ಬಳಿ ದೂರುದಾರರ ಕಾರಿಗೆ ಡಿಕ್ಕಿ ಹೊಡೆಸಿ, ಜಖಂಗೊಳಿಸಿ ಮೇಲೆ ಕೈಗಳಿಂದ ಹಾಗೂ ತಲೆಗೆ ಹೊಡೆದು ಗಂಭೀರವಾಗಿ ಹಲ್ಲೆ ನಡೆಸಲಾಗಿದೆ. ಅಲ್ಲದೆ, ಜಂಬಿಟ್ಟಿಗೆ ಕಲ್ಲು ಎತ್ತಿ ಕೊಲ್ಲಲು ಯತ್ನಿಸಲಾಗಿದ್ದು, ತಪ್ಪಿಸಿಕೊಳ್ಳುವ ವೇಳೆ ಕಲ್ಲು ಅವರ ಬಲ ಭುಜ ಮತ್ತು ಬಲ ರಟ್ಟೆಗೆ ತಾಗಿ ಪೆಟ್ಟಾಗಿರುವುದಾಗಿ ತಿಳಿದು ಬಂದಿದೆ.

ದೂರು ನೀಡಿದರೆ ಎಸ್‌ಸಿ/ಎಸ್‌ಟಿ ಹುಡುಗರಿಂದ ಸುಳ್ಳು ಪ್ರಕರಣ ದಾಖಲು..!!

ವಕೀಲ ಶರತ್ ಅವರನ್ನು ಬಲವಂತವಾಗಿ ಕಾರಿಗೆ ಹತ್ತಿಸಿಕೊಂಡು ಅಪಹರಣ ಯತ್ನ ನಡೆಸಿದ್ದಾರೆ. ಈ ವೇಳೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ, ಪೊಲೀಸ್ ಠಾಣೆಗೆ ದೂರು ನೀಡಿದರೆ ಎಸ್‌ಸಿ/ಎಸ್‌ಟಿ ಹುಡುಗರಿಂದ ಸುಳ್ಳು ಪ್ರಕರಣ ದಾಖಲಿಸಿ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆಂದು ತಿಳಿದು ಬಂದಿದೆ.

ಪ್ರಕರಣ ದಾಖಲಾದ ಕೆಲ ಸಮಯದಲ್ಲಿ ಆರೋಪಿ ಬಂದನ:

ಈ ಕುರಿತು ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಕೆಲ ಸಮಯದಲ್ಲೇ ನಾಲ್ಕು ಆರೋಪಿಯನ್ನು ಬಂದಿಸಲು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರವೀಣ್ ಹಾಗೂ ಅವರ ತಂಡ ಯಶಸ್ವಿಯಾಗಿದೆ.

ಯಾರು ಆರೋಪಿ..? :
ಶರತ್ ಕುಮಾರ್ ಅವರ ದೂರಿನ ಹಿನ್ನೆಲೆಯಲ್ಲಿ ದರ್ಶನ್, ಪ್ರವೀಣ್, ಶಿವರಾಮ, ದಿವಾಕರ್ ಹಾಗೂ ಹರೀಶ್ ಆರೋಪಿಯಾಗಿದ್ದಾರೆ.

✒️…ಅಮಿತ್ ಆರ್ ಆನಂದಪುರ

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ