ಸಾಗರ:ವಿದ್ಯಾರ್ಥಿಗಳು ಓದುವ ಸಮಯದಲ್ಲಿ ಕೆಲ ಆಕರ್ಷಣೆಗೆ ಒಳಗಾಗಿ ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತ ಇದ್ದಾರೆ ಎಂದು ಐ.ಪಿ.ಎಸ್. ಡಾ. ಬೆನಕ ಪ್ರಸಾದ್ ತಿಳಿಸಿದರು.
ಇವರು ಬುಧುವಾರ ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ , ಎನ್.ಎಸ್.ಎಸ್ ಘಟಕಗಳ ಮತ್ತು ಪೋಲಿಸ್ ಇಲಾಖೆ ಸಹಯೋಗದೊಂದಿಗೆ ಆರಕ್ಷಕ ದಿನಾಚರಣೆ ಪ್ರಯುಕ್ತ ಪ್ರೇರಣಾ ಕಾರ್ಯಕ್ರಮ ಮಾಲಿಕೆಯಡಿಯಲ್ಲಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಮಾಡುವ ಸಣ್ಣ ಸಣ್ಣ ತಪ್ಪುಗಳೂ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಇದರಿಂದ ಬಹಳಷ್ಟು ಎಚ್ಚರಿಕೆ ಇಂದ ಇರಿ ಹಾಗೂ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಸಮಸ್ಯೆ ಎದುರಾದಲ್ಲಿ ನಮ್ಮ ಪೊಲೀಸ್ ಇಲಾಖೆಯನ್ನು ಭಯವಿಲ್ಲದೆ ಸಂಪರ್ಕಿಸಬಹುದು ನಾವು ನಿಮ್ಮೊಂದಿಗೆ ಯಾವಾಗಲೂ ಇರುತ್ತೇವೆ ಎಂದು ಭರವಸೆ ನೀಡಿದರು.

ರಸ್ತೆಯ ಸುರಕ್ಷತೆ ನಿಯಮವನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಪಾಲನೆ ಮಾಡಬೇಕು ಜೊತೆಗೆ ಸಮಾಜದಲ್ಲಿ ಕಾನೂನು ಉಲ್ಲಂಘನೆಯಾದಾಗ ಹಾಗೂ ಅಶಾಂತಿ ವಾತಾವರಣ ಉಂಟಾದಾಗ ವಿದ್ಯಾರ್ಥಿಗಳು ಕಾನೂನು ಪಾಲಿಸಿ ಸಾಮಾಜಿಕ ಬದಲಾವಣೆಗೆ ಕಾರಣರಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಹ ಪ್ರಾಂಶುಪಾಲರಾದ ಡಾ. ಸಣ್ಣಹನುಮಂತಪ್ಪ.ಜಿ ಮಾತನಾಡಿ ವಿದ್ಯಾರ್ಥಿಗಳು ದೊಡ್ಡದಾದ ಗುರಿಯನ್ನು ಇಟ್ಟುಕೊಂಡು ಅದರ ಕಡೆ ಹೆಚ್ಚಿನ ಗಮನ ನೀಡುವುದರ ಮೂಲಕ ಯಶಸ್ವಿನ ಕಡೆ ಹೆಜ್ಜೆ ಹಾಕಬೇಕು ಇದನ್ನು ಬಿಟ್ಟು ಕೆಲ ದುಶ್ಚಟಗಳಿಗೆ ದಾಸರಾಗಿ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳಬಾರದು ಎಂದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನೆ ಸಂಚಾಲಕರಾದ ಡಾ. ಕುಂಸಿ ಉಮೇಶ್,ಐ.ಕ್ಯೂ.ಎ.ಸಿ. ಸಂಚಾಲಕರಾದ ಡಾ.ಮಮತಾವಿ.ಹೆಗಡೆ ,ಎನ್.ಎಸ್.ಎಸ್.ಸಂಚಾಲಕರಾದ ಶ್ರೀ ಸುರೇಶ ಜೆ.ಎಚ್,ಹಾಗೂ ರೆಡ್ ಕ್ರಾಸ್ ಸಂಚಾಲಕರಾದ ಮೇಘಾ ಭೂತೆ ಉಪಸ್ಥಿತರಿದ್ದರು.
✒️…ಅಮಿತ್ ಆರ್ ಆನಂದಪುರ
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಾಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ









